This is the title of the web page
This is the title of the web page

Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

State News

ನೂತನ ವಿದ್ಯುತ್ ಚಿತಾಗಾರ ಮುಕ್ತಿಧಾಮ ಕಾರ್ಯಾರಂಭ

ನಿಮ್ಮ ಸುದ್ದಿ ಬಾಗಲಕೋಟೆ

ಬಾಗಲಕೋಟೆ ಪಟ್ಟಣ ಅಭಿವೃದ್ದಿ ಪ್ರಾಧಿಕಾರದಿಂದ ನವನಗರದ ಹಿಂದೂ ರುದ್ರಭೂಮಿಯ ಪಕ್ಕದಲ್ಲಿ ನಿರ್ಮಿಸಲಾದ ವಿದ್ಯುತ್ ಚಿತಾಗಾರ ಮುಕ್ತಿಧಾಮ ಕಟ್ಟಡವನ್ನು ಸಾರ್ವಜನಿಕ ಸೇವೆಗೆ ಬುಧವಾರ ಕಾರ್ಯಾರಂಭಗೊಳಿಸಿದರು.

ನಂತರ ಈ ಕುರಿತು ಮಾಹಿತಿ ನೀಡಿದ ಶಾಸಕ ವೀರಣ್ಣ ಚರಂತಿಮಠ ಅವರು ದಿನೇ ದಿನೇ ಬೆಳೆಯುತ್ತಿರುವ ಬಾಗಲಕೋಟೆ ನಗರದ ಜನತೆಗೆ ಬಹುಮುಖ್ಯ ಮೂಲ ಸೌಕರ್ಯಗಳಲ್ಲಿ ಒಂದಾದ ಶವಸಂಸ್ಕಾರ ಇನ್ನು ಮುಂದೆ ನೂತನ ವಿದ್ಯುತ್ ಚಿತಾಗಾರದಿಂದ ಅತೀ ಸುಲಭವಾಗಿ ದೊರಕಲಿದೆ ಎಂದರು.

ಪರಿಸರ ಸ್ನೇಹಿ ಹಾಗೂ ಮಳೆಗಾಲದಲ್ಲಿ ಯಾವುದೇ ಅಡೆತಡೆ ಇಲ್ಲದೇ ಶವಸಂಸ್ಕಾರ ಮಾಡುವ ಉದ್ದೇಶದಿಂದ ಬಿಟಿಡಿಎದಿಂದ 1.20 ಎಕರೆ ಜಾಗೆಯಲ್ಲಿ 4.50 ಕೋಟಿ ರೂ.ಗಳ ವೆಚ್ಚದಲ್ಲಿ ಸುಸಜ್ಜಿತ ವಿದ್ಯುತ್ ಚಿತಾಗಾರ ನಿರ್ಮಿಸಲಾಗಿದೆ ಎಂದರು.

ಚಿತಾಗಾರದ ಮುಖ್ಯ ಕಟ್ಟಡದಲ್ಲಿ ಎರಡು ವಿದ್ಯುತ್ ಕುಲುಮೆಗಳ, ಎರಡು ಪೂಜಾ ವಿಧಿ ವಿಧಾನ ಕೋಣೆಗಳು, ಹೊಗೆ ಶುದ್ದಿಕರಣ ಕೋಣೆ, ವಿದ್ಯುತ್ ಸಂಪರ್ಕ ಇಲ್ಲದಿರುವಾಗ 125 ಕೆವಿ ಸಾಮಥ್ರ್ಯದ ಜನರೇಟರ ವ್ಯವಸ್ಥೆ ಕೋಣೆ, ಒಂದು ಕಚೇರಿ ಕೋಣೆ, ಎರಡು ನಿರೀಕ್ಷಣಾ ಕೊಠಡಿ ಹೊಂದಿದೆ. ಒಂದುವರೆ ಗಂಟೆ ಅವಧಿಯಲ್ಲಿ ಒಂದು ಶವ ಧಹನ ಮಾಡಲಾಗಿ ಇದರಿಂದ ಬರುವ ಹೊಗೆಯನ್ನು ಶುಚಿಗೊಳಿಸುವ ಕೊಠಡಿಯಲ್ಲಿ ಶದ್ದೀಕರಿಸಿ 100 ಅಡಿ ಎತ್ತರದ ಚಿಮಣಿ ಮುಖಾಂತರ ನಿರೂಪಯುಕ್ತ ಹೊಗೆ ಹೊರಹಾಕುವ ವ್ಯವಸ್ಥೆ ಹೊಂದಿದೆ. ಶವದಹನದ ನಂತರ ಅಸ್ತಿ ಸಂಗ್ರಹಿಸಿ ಸಂಬಂಧಿಕರಿಗೆ ಕೊಡುವ ವ್ಯವಸ್ಥೆ ಮಾಡಲಾಗಿದೆ ಎಂದರು.

ಚಿತಾಗಾರ ಕಟ್ಟಡದಲ್ಲಿ ಸುಸಜ್ಜಿತ ಬೆಳಕಿನ ವ್ಯವಸ್ಥೆ, ಕಂಪೌಂಡ್‍ಗೆ ಹೊಂದಿಕೊಂಡು ಸುತ್ತಲೂ ಸ್ಟ್ರೀಟ್‍ಲೈಟ್‍ಗಳನ್ನು ಅಳವಡಿಸಲಾಗಿದೆ. ರಾತ್ರಿ ಸಮಯದಲ್ಲಿಯೂ ಕೂಡಾ ಯಾವುದೇ ತೊಂದರೆಯಾಗದಂತೆ ಶವಸಂಸ್ಕಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಈ ಚಿತಾಗಾರ ಪರಿಸರ ಸ್ನೇಹಿಯಾಗಿದ್ದು, ಸಾಂಪ್ರದಾಯಿಕ ಕಟ್ಟಿಗೆಯನ್ನು ಬಳಸಿ ಶವಸಂಸ್ಕಾರ ಮಾಡಲಾಗುತ್ತಿದೆ. ಈ ಸಾಂಪ್ರದಾಯಿಕ ಸಂಸ್ಕಾರಕ್ಕೆ ಕನಿಷ್ಠ 6 ರಿಂದ 7 ಸಾವಿರ ರೂ.ಗಳ ಖರ್ಚು ಆಗುತ್ತಿತ್ತು.

ಆದರೆ ಇನ್ನು ಮುಂದೆ ವಿದ್ಯುತ್ ಚಿತಾಗಾರದಿಂದ ಸಾರ್ವಜನಿಕರಿಗೆ ಹೆಚ್ಚಿನ ಹೊರೆಯಾಗದಂತೆ ಕೇವಲ ಪ್ರತಿ ಶವಸಂಸ್ಕಾರಕ್ಕೆ ಒಂದು ಸಾವಿರ ರೂ.ಗಳನ್ನು ನಿಗದಿಪಡಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ನಗರಸಭೆ ಸದಸ್ಯರಾದ ಸವಿತಾ ಸಂಕೆನ್ನವರ, ನಾಗರತ್ನಾ ಹೆಬ್ಬಾಳ, ಅಂಬಾಜಿ ಜೋಶಿ, ಬಿಟಿಡಿಎ ಸದಸ್ಯರಾದ ಮೋಹನ ನಾಡಗೌಡ, ಕುಮಾರ ಎಳ್ಳಿಗುತ್ತಿ, ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ, ಜಿ.ಪಂ ಸಿಇಓ ಟಿ.ಭೂಬಾಲನ್, ಮುಖ್ಯ ಇಂಜಿನೀಯರ್ ಮನ್ಮಥಸ್ವಾಮಿ, ಅಧೀಕ್ಷಕ ಅಭಿಯಂತರ ಕಟ್ಟಿಮನಿ, ಕಾರ್ಯನಿವಾಹಕ ಇಂಜಿನೀಯರ್ ಬಿ.ಎಚ್.ಪಾಟೀಲ, ಕಲ್ಲೂರಮಠ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ವಿಜಯಶಂಕರ ಹೆಬ್ಬಳ್ಳಿ, ಶಿವು ಶಿರೂರ, ಮಿಕ್ಕಲ ಸೇರಿದಂತೆ ಇತರರು ಉಪಸ್ಥಿತರಿದ್ದರು.

Nimma Suddi
";