This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

State News

ವೃತ್ತಿ ಬುನಾಧಿ ತರಬೇತಿಯ ಸಮಾರೋಪ ಸಮಾರಂಭ

ತರಬೇತಿಯ ಲಾಭವನ್ನು ವೃತ್ತಿ ಜೀವದಲ್ಲಿ ಅಳವಡಿಸಿಕೊಳ್ಳಿ ಮುರಗಿ*

ನಿಮ್ಮ ಸುದ್ದಿ ಬಾಗಲಕೋಟೆ

ಲಿಪಿಕ ವರ್ಗದ ಸಿಬ್ಬಂದಿಗಳು 45 ದಿನಗಳ ವೃತ್ತಿ ತರಬೇತಿಯ ಲಾಭವನ್ನು ತಮ್ಮ ವೃತ್ತಿ ಜೀವನದಲ್ಲಿ ಅಳವಡಿಸಿಕೊಂಡು ಸಾರ್ವಜನಿಕರ ಕೆಲಸಗಳನ್ನು ನಿಗದಿತ ಸಮಯದಲ್ಲಿ ನಿರ್ವಹಿಸಿ ಆದರ್ಶ ನೌಕರರಾಗಬೇಕೆಂದು ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ತಿಳಿಸಿದರು.

ನವನಗರದ ಜಿಲ್ಲಾ ತರಬೇತಿ ಸಂಸ್ಥೆಯಲ್ಲಿಂದು ಹಮ್ಮಿಕೊಂಡ 45 ದಿನಗಳ ಕಾಲದ ವೃತ್ತಿ ಬುನಾಧಿ ತರಬೇತಿಯ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವೃತ್ತಿ ಬುನಾಧಿ ತರಬೇತಿಯಲ್ಲಿ ಕಛೇರಿ ಕಾರ್ಯವಿಧಾನ, ಸೇವಾ ವಿಷಯಗಳು, ಆರ್ಥಿಕ ವಿಷಯಗಳು ಹಾಗೂ ಸಾಮಾನ್ಯ ಆಡಳಿತ ವಿಷಯಗಳ ಬಗ್ಗೆ ಬೇರೆ ಬೇರೆ ಜಿಲ್ಲೆಗಳಿಂದ ನುರಿತ ತಜ್ಞ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡಲಾಗಿದ್ದು, ಅದನ್ನು ತಮ್ಮ ವೃತ್ತಿ ಜೀವನದಲ್ಲಿ ಅಳವಡಿಸಿಕೊಳ್ಳಲು ತಿಳಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಆಹಾರ ಇಲಾಖೆಯ ಜಂಟಿ ನಿರ್ದೇಶಕ ಶ್ರೀಶೈಲ ಕಂಕಣವಾಡಿ ಮಾತನಾಡಿ ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ತಂತ್ರಜ್ಞಾನದ ವ್ಯವಸ್ಥೆ ಇದ್ದು, ಇದರಿಂದ ಪ್ರಶಿಕ್ಷಣಾರ್ಥಿಗಳ ಕಲಿಕೆಗೆ ಬಹಳ ಉಪಯುಕ್ತತೆಯಾಗಿದೆ. ಪ್ರಶಿಕ್ಷಣಾರ್ಥಿಗಳು ತಮ್ಮ ವೃತ್ತಿಯಲ್ಲಿ ಈ ತರಬೇತಿಯಲ್ಲಿ ಪಡೆದ ವಿಷಯಗಳನ್ನು ಅಳವಡಿಸಿಕೊಂಡು ಉತ್ತಮ ಆಡಳಿತವನ್ನು ನಿರ್ವಹಿಸಬೇಕೆಂದು ಶುಭ ಕೋರಿದರು.

ಅಧ್ಯಕ್ಷೆ ವಹಿಸಿದ್ದ ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ಗಂಗಾಧರ ದಿವಟರ ಮಾತನಾಡಿ ಜಿಲ್ಲಾ ತರಬೇತಿ ಸಂಸ್ಥೆಯಿಂದ 45 ದಿನಗಳವರೆಗೆ 3 ನೇ ವೃತ್ತಿ ಬುನಾದಿ ತರಬೇತಿಯಲ್ಲಿ ವಿವಿಧ ಇಲಾಖೆಯ 35 ಸಿಬ್ಬಂದಿಗಳು ಭಾಗವಹಿಸಿ ಉತ್ತಮವಾದ ರೀತಿಯಲ್ಲಿ ತರಬೇತಿಯನ್ನು ಪಡೆದಿದ್ದು, ಈ ತರಬೇತಿಯಲ್ಲಿ ಕಲಿತ ಎಲ್ಲ ವಿಷಯಗಳನ್ನು ತಮ್ಮ ಸೇವಾ ಅವಧಿಯಲ್ಲಿ ಅಳವಡಿಸಿಕೊಂಡು ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸಲು ತಿಳಿಸಿದರು. ಈ ಒಂದು ತರಬೇತಿ ಯಶಸ್ವಿಯಾಗಿ ಜರುಗಲು ಸಹಕರಿಸಿದ ಆಡಳಿತ ತರಬೇತಿ ಸಂಸ್ಥೆ ಮೈಸೂರು ಹಾಗೂ ಜಿಲ್ಲಾಡಳಿತಕ್ಕೆ ಅಭಿನಂದನೆಯನ್ನು ತಿಳಿಸಿದರು.

ಜಿಲ್ಲಾ ತರಬೇತಿ ಸಂಸ್ಥೆಯ ತರಬೇತಿ ಸಂಯೋಜಕ ಹಾಗೂ ಉಪ ಪ್ರಾಚಾರ್ಯ ಮಲ್ಲಿಕಾರ್ಜುನ ಗುಡೂರ ಮಾತನಾಡಿ ರಾಜ್ಯದಲ್ಲಿ ಏಕರೂಪ ತರಬೇತಿಯನ್ನು ಅನುಷ್ಠಾನಗೊಳಿಸಲು ಮಹಾನಿರ್ದೇಶಕರು ಆಡಳಿತ ತರಬೇತಿ ಸಂಸ್ಥೆ, ಮೈಸೂರು ರವರು ತಯಾರಿಸಿದ ಪಠ್ಯ ಕ್ರಮದಂತೆ ತರಬೇತಿಯನ್ನು ನುರಿತು ತಜ್ಞ ಸಂಪನ್ಮೂಲ ವ್ಯಕ್ತಿಗಳಿಂದ ನೀಡಿದ್ದರಿಂದ ಪ್ರಶಿಕ್ಷಣಾರ್ಥಿಗಳು ಅಂತಿಮ ಪರೀಕ್ಷಯಲ್ಲಿ ಉತ್ತಮವಾದ ಪ್ರಗತಿಯನ್ನು ಸಾಧಿಸಿದ್ದಾರೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ 45 ದಿನಗಳವರೆಗೆ ತೆಗೆದುಕೊಂಡ ತರಬೇತಿಯ ಬಗ್ಗೆ ಪ್ರಶಿಕ್ಷಣಾರ್ಥಿಗಳಿಂದ ಮೌಲ್ಯಮಾಪನ ಮಾಡಿ ನಂತರ ತರಬೇತಿಯ ಅಂತಿಮ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದ ಆರೋಗ್ಯ ಇಲಾಖೆಯ ಜಗದೀಶ ಆಲಕನೂರ, ಜಿಲ್ಲಾ ಪಂಚಾಯತ್‍ನ ಕುಮಾರಿ ಶೃತಿ ಶಿಂಗೆ ಇವರಿಗೆ ಅಂಕ ಪಟ್ಟಿ ಮತ್ತು ಸ್ಮರಣಿಕೆ, ಪ್ರಮಾಣ ಪತ್ರ ವಿತರಿಸಲಾಯಿತು. ತರಬೇತಿ ಪಡೆದವರಿಗೆ ಸಾಂಕೇತಿಕವಾಗಿ ಕೆ.ಭರತಕುಮಾರ, ರಂಜನಾ ಗೌಡರ, ರಂಗನಾಥ ಬುಸರೆಡ್ಡಿ, ರಾಜೇಸಾಬ ಮುಲ್ಲಾ ಪ್ರಮಾಣ ಪತ್ರ ವಿತರಿಸಲಾಯಿತು.

ತರಬೇತಿಯ ವಿಷಯ ಮತ್ತು ಸಂಪನ್ಮೂಲ ವ್ಯಕ್ತಿಗಳ ಕುರಿತು ತಯಾರಿಸಿದ ಮಾಹಿತಿಯನ್ನು ಪಿಪಿಟಿ ಮೂಲಕ ಪ್ರದರ್ಶಸಲಾಯಿತು. ವಿವಿಧ ಸಾಂಸ್ಕøತಿಕ ಮತ್ತು ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸಿ ಪ್ರಥಮ ದ್ವಿತಿಯ ಹಾಗೂ ತೃತೀಯ ಸ್ಥಾನ ಪಡೆದ ಪ್ರಶಿಕ್ಷಣಾರ್ಥಿಗಳಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.

";