ಹೆಣ್ಣು ಕುಟುಂಬ, ಸಮಾಜದ ಕಣ್ಣು : ನ್ಯಾ.ಹುಲ್ಲೂರ
ನಿಮ್ಮ ಸುದ್ದಿ ಬಾಗಲಕೋಟೆ
ತಾಯಿಯಾಗಿ, ಅಕ್ಕ-ತಂಗಿ, ಹೆಂಡತಿಯಾಗಿ ಸಮಾಜದಲ್ಲಿ ವಿವಿಧ ರೀತಿಯಿಂದ ತನ್ನನ್ನು ತಾನು ತೊಡಗಿಸಿಕೊಂಡ ಮಹಿಳೆಯ ಕುಟುಂಬ ಹಾಗೂ ಸಮಾಜದ ಕಣ್ಣಾಗಿದ್ದಾಳೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹೇಮಲತಾ ಹುಲ್ಲೂರ ತಿಳಿಸಿದರು.
ವಿದ್ಯಾಗಿರಿಯ ಗೌರಿಶಂಕರ ಕಲ್ಯಾಣ ಮಂಟಪದಲ್ಲಿಂದು ಜಿಲ್ಲಾಡಳಿ, ಜಿಲ್ಲಾ ಪಂಚಾಯತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜೀವನೋಪಾಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಹಾಗೂ ಬವಿವ ಸಂಘದ ಆರ್‌ಡಿಎಫ್, ಆರ್‌ಸೆಟಿ ಸಹಯೋಗದಲ್ಲಿ ಹಮ್ಮಿಕೊಂಡ ಅಂತರರಾಷ್ಟಿಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಅನಾದಿಕಾಲದ ಹಿಂದೆ ಪುರುಷ ಪ್ರಧಾನವಾದ ಈ ಸಮಾಜದಲ್ಲಿ ಮಹಿಳೆ ಮನೆ ಬಿಟ್ಟು ಹೊರಬರುವ ಪರಿಸ್ಥಿತಿ ಇರಲಿಲ್ಲ. ಇಂದು ಶೈಕ್ಷಣಿಕ, ಸಾಮಾಜಿಕ, ರಾಜಕೀಯ ಹಾಗೂ ಕ್ರೀಡಾ ಕ್ಷೇತ್ರದಲ್ಲಿಯೂ ಕೂಡಾ ಪುರುಷರಷ್ಟೇ ಸಮಾನರಾಗಿದ್ದಾರೆ ಎಂದರು.
ಇತ್ತೀಚೆಗೆ ಸಾಮಾಜಿಕ ಪಿಡುಗಾಗಿರುವ ಬಾಲ್ಯವಿವಾಹಕ್ಕೆ ಹೆಣ್ಣು ಮಕ್ಕಳು ಅರಿತೋ ಅರಿಯದೇ ಬಲಿಯಾಗುತ್ತಿದ್ದಾರೆ. ಈ ಅನಿಷ್ಠ ಪದ್ದತಿ ಕೂಡಲೇ ಕೊನೆಗೊಳ್ಳಬೇಕು ಎಂದ ಅವರು ಜಿಲ್ಲಾಡಳಿತ ಈಗಾಗಲೇ ಬಾಲ್ಯವಿವಾಹ ಸಂಪೂರ್ಣ ನಿರ್ಮೂಲನೆ ಮಾಡುವ ಉದ್ದೇಶದಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಿಂದ ವಿಶೇಷ ಅಭಿಯಾನ ಸಹ ಕೈಗೊಂಡಿದೆ. ಇದರಿಂದ ಮಹಿಳೆಯರು ತಮ್ಮ ಮಕ್ಕಳ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಬಾಲ್ಯವಿವಾಹಕ್ಕೆ ಪ್ರಚೋದನೆ ನೀಡದೇ ಮಕ್ಕಳ ಉತ್ತಮ ವಿದ್ಯಾಬ್ಯಾಸ, ಸಂಸ್ಕಾರ ನೀಡಿ ಸಮಾಜದ ಪ್ರಮುಖ ವಾಹಿನಿಗೆ ತರುವ ಪ್ರಯತ್ನ ಮಾಡಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಮಾತನಾಡಿ ಜಿಲ್ಲೆಯಲ್ಲಿ ಬಾಲ್ಯವಿವಾಹ ಪದ್ದತಿ ಹೆಚ್ಚಾಗಿ ಕಂಡುಬಂದಿರುವದರಿಂದ ಮುಂದಿನ ಒಂದು ವಾರ ಸಪ್ತಾಹ ಆಚರಿಸಲಾಗುತ್ತಿದ್ದು, ಕೇಂದ್ರ ಸರಕಾರದ ಆದೇಶದ ಮೇರೆ ನಯಾ ಭಾರತ ಕಿ ನಾರಿ ಎಂಬ ಘೋಷದೊಂದಿಗೆ ಜಿಲ್ಲೆಯಾದ್ಯಂತ ಬಾಲ್ಯವಿವಾಹ ಪ್ರಕರಣ ನಡೆಯದಂತೆ ಜಾಗೃತಿಗೊಳಿಸುವ ಕಾರ್ಯ ಮಾಡಲಾಗುತ್ತಿದೆ ಎಂದರು. ಏನು ಅರಿಯದ ಬಾಲ್ಯವಿವಾಹಕ್ಕೊಳಗಾಗುವ ಹೆಣ್ಣು ಮಕ್ಕಳಿಗೆ ಸಂಸಾರ ಜಂಜಾಟದ ಸಂಕಷ್ಟಕ್ಕೆ ಸಿಲುಕಿಸಿ ಅವಳನ್ನು ತೊಂದರೆಗೀಡು ಮಾಡಿ ತಾವು ತೊಂದರೆಗೆ ಅನುಭವಿಸುತ್ತಿರಿ ಎಂಬುದನ್ನು ಅರಿಯಬೇಕು. ಆ ದೃಷ್ಟಿಯಿಂದ ಎಲ್ಲರೂ ಒಂದು ಶಪಥ ಮಾಡಿ ಮುಂದಿನ ದಿನಗಳಲ್ಲಿ ನಮ್ಮ ನಮ್ಮ ಮನೆಯಲ್ಲಿ ಬಾಲ್ಯವಿವಾಹ ಮಾಡುವದಿಲ್ಲವೆಂಬ ಗಟ್ಟಿ ನಿರ್ಧಾರ ತೆಗೆದುಕೊಳ್ಳಬೇಕು ಎಂದರು.
ವಿಜಯಪುರದ ಮಹಿಳಾ ವಿಶ್ವ ವಿದ್ಯಾಲಯದ ವಿಶ್ರಾಂತ ಕುಲಪತಿ ಮೀನಾ ಚಂದಾವರಕರ ಮತ್ತು ವಕೀಲರಾದ ಸೋನಿ ಪರಾಂಡೆ ಅವರು ವಿಶೇಷ ಉಪನ್ಯಾಸ ನೀಡಿದರು. ಪ್ರಾರಂಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕಿ ಭಾರತಿ ಬಣಕಾರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಅಸಾಧಾರಣ ಪ್ರತಿಭೆ, ಉತ್ತಮ ಸೇವೆ ಸಲ್ಲಿಸಿದವರಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ, ಜಿ.ಪಂ ಉಪಕಾರ್ಯದರ್ಶಿ ಸಿದ್ರಾಮೇಶ್ವರ ಉಕ್ಕಲಿ, ಜಿ.ಪಂ ಯೋಜನಾ ನಿರ್ದೇಶಕ ಎಂ.ವಿ.ಚಳಗೇರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಯಶ್ರೀ ಎಮ್ಮಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಎಸ್.ಬಿರಾದಾರ, ಜಿಲ್ಲಾ ಆಯುಷ ಅಧಿಕಾರಿ ಡಾ.ಅಕ್ಕಮಹಾದೇವಿ ಗಾಣಿಗೇರ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಹೇಶ ಪೋತದಾರ, ಶಿಕ್ಷಣ ಇಲಾಖೆಯ ಯೋಜನಾ ಸಮನ್ವಯಾಧಿಕಾರಿ ಜಾಸ್ಮೀನ ಕಿಲ್ಲೇದಾರ, ಜಿಲ್ಲಾ ಸ್ತಿçÃಶಕ್ತಿ ಒಕ್ಕೂಟದ ಅಧ್ಯಕ್ಷೆ ಗೌರಮ್ಮ ಸಂಕೀನ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಗಮನಸೆಳೆದ ಮಹಿಳಾ ಸಾಂಸ್ಕೃತಿ ನೃತ್ಯ
ಅಂತರರಾಷ್ಟಿçÃಯ ಮಹಿಳಾ ದಿನಾಚರಣೆ ಅಂಗವಾಗಿ ಅಂಗನವಾಡಿ ಮೇಲ್ವಿಚಾರಕಿಯರಿಂದ ಮಹಿಳಾ ದಿನಾಚರಣೆಯ ಹಾಡಿಗೆ ನೃತ್ಯ, ಇಲಕಲ್ಲ ಸಾಂಪ್ರದಾಯಿಕ ಉಡುಗೆ ಪ್ರದರ್ಶನ, ಲಿಂಗತ್ವ ಅಲ್ಪಸಂಖ್ಯಾತರ ಸಮುದಾಯದಿಂದ ನೃತ್ಯ, ಜಾನಪದ ನೃತ್ಯ ಡೊಳ್ಳು ಕುಣಿತ, ಏಕಪಾತ್ರಾಭಿನಯ, ಕೇರಳ, ಮಹಾರಾಷ್ಟç, ಬಂಗಾಲಿ, ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ವೇಷಭೂಷಣ ಪ್ರದರ್ಶನ ನಡೆಯಿತು.
ಅಸಾಧಾರಣ ಮಕ್ಕಳಿಗೆ ಪ್ರಶಸ್ತಿ
ಅಸಾಧಾರಣ ಪ್ರತಿಭೆ ತೋರಿದ ಸಿಂಚನಾ ಕಾಂಬಳೆ, ನಿಖಿಲ ಹುಲಿ, ಅಂಬಿಕಾ ಕುಮಕಾಲೆ, ಸಂಗೀತ ಗೋದಿ, ಮುತ್ತುರಾಜ ಸಗರ, ಶಂಕರ ಶಿವನಾಳ, ರಾಣಿಶ್ರೀ ನಾಗರೇಶಿ ಹಾಗೂ ಖುಷಿ ವರ್ಮಾ ಅವರಿಗೆ ತಲಾ ೧೦ ಸಾವಿರ ನಗದು ಹಾಗೂ ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಲಾಯಿತು.
ಅಂಗನವಾಡಿ ಉತ್ತಮ ಕಾರ್ಯಕರ್ತೆ, ಸಹಾಯಕಿಯರಿಗೆ ಸನ್ಮಾನ
ಉತ್ತಮ ಸೇವೆ ಸಲ್ಲಿಸಿದ ಪ್ರತಿ ತಾಲೂಕಿಗೆ ತಲಾ ಒಬ್ಬರಂತೆ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರನ್ನು ಸನ್ಮಾನಿಸಲಾಯಿತು. ಕಾರ್ಯಕರ್ತೆಯರಾದ ಬಸವರಾಜೇಶ್ವರಿ ಕುಬಕಡ್ಡಿ, ಹನಮವ್ವ ಮಾದರ, ಆಶಾ ಭಜಂತ್ರಿ, ಮಂಜುಳಾ ಶಾಹಾಪೂರ, ಮೈತ್ರಾ ಹಿರೇಮಠ, ಸಹಾಯಕಿಯರಾದ ಮುತ್ತವ್ವ ಮೇಟಿ, ತಾಯಕ್ಕ ನಾಗರೇಶಿ, ನೀಲವ್ವ ನಾಟಿಕಾರ, ಶಿವಮ್ಮ ಹಡಪದ, ಜೈರಾ ಜೀರಗಾಳ, ಶಂಕ್ರಮ್ಮ ಪರಸನಾಯಕ.
ಮಹಿಳಾ ಒಕ್ಕೂಟಕ್ಕೆ ೧ ಲಕ್ಷ ರೂ.ಗಳ ನಗದು ಪ್ರಶಸ್ತಿ
ಮುಧೋಳ ತಾಲೂಕಿನ ಶಿರೋಳ ಗ್ರಾಮ ಪಂಚಾಯತ ಶ್ರೀ ಕಾಡಸಿದ್ದೇಶ್ವರ ಸಂಜೀವಿನಿ ಮಹಿಳಾ ಗ್ರಾಮ ಪಂಚಾಯತ ಒಕ್ಕೂಟಕ್ಕೆ ೧ ಲಕ್ಷ ರೂ.ಗಳ ನಗದು ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
ಉತ್ತಮ ಒಕ್ಕೂಟದ ಸದಸ್ಯರಿಗೆ ಪ್ರಶಸ್ತಿ
ದೀನ್ ದಯಾಳ ಅಂತ್ಯೋದಯ ರಾಷ್ಟಿçÃಯ ಗ್ರಾಮೀಣ ಜೀವನೋಪಾಯ ಅಭಿಯಾನದಡಿ ದಾಖಲಾತಿ ನಿರ್ವಹಣೆ ಮಾಡುವಲ್ಲಿ ಉತ್ತಮವಾಗಿ ಕೆಲಸ ನಿರ್ವಹಿಸಿದ ೯ ಜನ ಮುಖ್ಯ ಪುಸ್ತಕ ಬರಹಗಾರರಿಗೆ, ಉತ್ತಮವಾಗಿ ಕೆಲಸ ನಿರ್ವಹಿಸಿದ ಮಹಿಳೆಯರಿಗೆ, ಬ್ಯಾಂಕಿAಗ್ ಸೇವೆಯನ್ನು ಗ್ರಾಮೀಣ ಪ್ರದೇಶದ ಪ್ರತಿ ಕುಟುಂಬಕ್ಕೆ ತಲುಪಿಸುವಲ್ಲಿ ಉತ್ತಮ ಕೆಲಸ ನಿರ್ವಹಿಸಿದ ೯ ಜನ ಬ್ಯಾಂಕ ಸಖಿಗಳಿಗೆ ಪ್ರಶಸ್ತಿ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.