ನಿಮ್ಮ ಸುದ್ದಿ ಬಾಗಲಕೋಟೆ
ಶ್ರೀ ಸುಶಮಿಂದ್ರತೀರ್ಥ ಶ್ರೀಪಾದಂಗಳವರಿಂದ ಪ್ರತಿಷ್ಠಾಪನೆಗೊಂಡ ನಗರದ ವಿದ್ಯಾಗಿರಿ ವಿಪ್ರ ಅಭಿವೃದ್ದಿ ಸಂಘದ ರಾಘವೇಂದ್ರಸ್ವಾಮಿಗಳ ಮಠದ ೧೮ನೇ ವರ್ಧಂತಿ ಉತ್ಸವ ಶುಕ್ರವಾರ ಆರಂಭವಾಗಿದ್ದು ನಿತ್ಯ ಪ್ರವಚನ, ದಾನಿಗಳ ಸನ್ಮಾನ, ಉಚಿತ ಸಾಮೂಹಿಕ ಉಪನಯನ ಕಾರ್ಯಕ್ರಮಗಳು ಜೂ.೨ರ ವರೆಗೆ ನಡೆಯಲಿವೆ. ಭಂಡಾರಕೆರೆ ಮಠದ ವಿದ್ಯೇಶತೀರ್ಥ ಶ್ರೀಪಾದಂಗಳವರು ಉತ್ಸವದಲ್ಲಿ ಆಗಮಿಸುತ್ತಿದ್ದಾರೆ.
ಧಾರವಾಡದ ಪಂ.ಕಪಿಲಾಚಾರ್ಯ ಗಲಗಲಿ ಅವರು ಸಂಜೆ ೬.೩೦ ರಿಂದ ೮ರ ವರೆಗೆ ಮಾರ್ಕಂಡೇಯ ಪುರಾಣ ಪ್ರವಚನ ಮಾಡುವರು. ಮೇ ೩೧ರಂದು ನಗರಕ್ಕೆ ಆಗಮಿಸುವ ವಿದ್ಯೇಶತೀರ್ಥ ಶ್ರೀಪಾದಂಗಳವರನ್ನು ಅಂದು ಸಂಜೆ ೭ ಗಂಟೆಗೆ ವಿದ್ಯಾಗಿರಿ ಸಿಗ್ನಲ್‌ದಿಂದ ಶ್ರೀಮಠದವರೆಗೆ ಶೋಭಾಯಾತ್ರೆಯಲ್ಲಿ ಪೂರ್ಣಕುಂಭ ಸ್ವಾಗತ ನೀಡಿ ಸ್ವಾಗತಿಸಲಾಗುವದು. ನಂತರ ಪಂ.ಬಿAಧುಮಾಧವಾಚಾರ್ಯ ನಾಗಸಂಪಗಿ ಅವರಿಂದ ಪ್ರವಚನ, ಶ್ರೀಗಳ ಅನುಗ್ರಹ ಸಂದೇಶ ನಡೆಯಲಿದೆ.
ಜೂ.೧ ರಂದು ಸಂಜೆ ಡಾ.ರಘೋತ್ತಮಾಚಾರ್ಯ ನಾಗಸಂಪಗಿ ಅವರಿಂದ ನರಸಿಂಹ ಅವತಾರದ ತತ್ವಸಾರ ಪ್ರವಚನ, ಕಪಿಲಾಚಾರ್ಯ ಗಲಗಲಿ ಪ್ರವಚನ, ೮೦ ವರ್ಷ ಮೇಲ್ಪಟ್ಟ ಶ್ರೀಮಠಕ್ಕೆ ಸೇವೆ ಸಲ್ಲಿಸಿದ ಹಿರಿಯ ನಾಗರಿಕರಿಗೆ ಸನ್ಮಾನ, ಶ್ರೀಗಳ ಅನುಗ್ರಹ ಸಂದೇಶ ನಡೆಯಲಿದೆ.
ಜೂ.೨ರಂದು ಬೆಳಗ್ಗೆ ೮ ಗಂಟೆಗೆ ಪಂಚಾಮೃತ ಅಭಿಷೇಕ, ರಾಘವೇಂದ್ರಸ್ವಾಮಿಗಳ ಅಷ್ಟೋತ್ತರ, ಸಾಮೂಹಿಕ ಉಚಿತ ಉಪನಯನ, ೯ ಗಂಟೆಗೆ ಪುರಾಣ ಮಂಗಳ, ೧೦ ಗಂಟೆಗೆ ಶ್ರೀಗಳಿಗೆ ಸಾಮೂಹಿಕ ಪಾದಪೂಜೆ, ಶ್ರೀಗಳ ಆಶೀರ್ವಚನ ಮಧ್ಯಾಹ್ನ ೧ ಗಂಟೆಗೆ ತೀರ್ಥಪ್ರಸಾದ ವಿತರಣೆಯಾಗಲಿದೆ ಎಂದು ವಿಪ್ರ ಅಭಿವೃದ್ದಿ ಸಂಘ ತಿಳಿಸಿದೆ.