ನಿಮ್ಮ ಸುದ್ದಿ ಬಾಗಲಕೋಟೆ
ರಾಜ್ಯೋತ್ಸವ ಪ್ರಶಸ್ತಿ ವಿಜೇತ ವೈದ್ಯ, ನಗರದ ಮಧುಮೇಹ ತಜ್ಞ ದಿವಂಗತ ಡಾ.ಅಶೋಕ ಸೊನ್ನದ ಅವರ ಪುಣ್ಯಸ್ಮರಣೆ ಹಾಗೂ ಅವರು ರಚಿಸಿದ ದೇಹವೆ ದೇಗುಲ ಕೃತಿ ಬಿಡುಗಡೆ ಸಮಾರಂಭ ಮೇ ೨೯ ರಂದು ಸಂಜೆ ೫ಕ್ಕೆ ವಿದ್ಯಾಗಿರಿ ಸಾಯಿ ಮಂದಿರದಲ್ಲಿ ನಡೆಯಲಿದೆ.
ಮಾಜಿ ಸಚಿವ ಎಚ್.ಕೆ.ಪಾಟೀಲ ಕೃತಿ ಬಿಡುಗಡೆಗೊಳಿಸುವರು. ತೋವಿವಿ ಕುಲಪತಿ ಡಾ.ಕೆ.ಎಂ.ಇಂದಿರೇಶ ಅಧ್ಯಕ್ಷತೆ ವಹಿಸುವರು. ಕರ್ನಾಟಕ ಪರಿಸರ ಮೇಲ್ಮನವಿ ಪ್ರಾಕಾರದ ನಿವೃತ್ತ ಸದಸ್ಯ ಜೆ.ಸಿ.ತಲ್ಲೂರ ಕಾರ್ಯಕ್ರಮ ಉದ್ಘಾಟಿಸುವರು. ಅತಿಥಿಗಳಾಗಿ ಮಾಜಿ ಶಾಸಕರಾದ ಡಿ.ಆರ್.ಪಾಟೀಲ, ಜೆ.ಟಿ.ಪಾಟೀಲ, ವಿಶೇಷ ಆಹ್ವಾನಿತರಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುಮಾರ ಜೈನಾಪೂರ, ಬಿವಿವಿ ಸಂಘದ ತಾಂತ್ರಿಕ ನಿರ್ದೇಶಕ ಡಾ.ಆರ್.ಎನ್.ಹೆರಕಲ್ ಭಾಗವಹಿಸುವರು. ರಾಮಣ್ಣ ಸೊನ್ನದ ಆಪ್ ಬಂಟನೂರ ಮೆಮೋರಿಯಲ್ ಟ್ರಸ್ಟ್, ಧಾರವಾಡ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ.
೩೦ಹೆಚ್ಚು ವರ್ಷ ಅಮೆರಿಕದಲ್ಲಿ ಮಧುಮೇಹ ತಜ್ಞರಾಗಿ ಕಾರ್ಯ ನಿರ್ವಹಿಸಿದ್ದ ಡಾ.ಸೊನ್ನದ, ನಗರದಲ್ಲಿ ಅಂದಾಜು ಹತ್ತು ವರ್ಷ ಉಚಿತ ಸೇವೆ ಸಲ್ಲಿಸಿದ್ದಾರೆ. ಉತ್ತರ ಕರ್ನಾಟಕದ ನಾನಾ ಜಿಲ್ಲೆಗಳಲ್ಲಿ ಮಧುಮೇಹ ಉಚಿತ ಶಿಬಿರ ಹಮ್ಮಿಕೊಂಡಿದ್ದಾರೆ. ಸಾವಿರಾರು ಜನರಲ್ಲಿ ಆರೋಗ್ಯ ಜಾಗೃತಿ ಮೂಡಿಸಬೇಕೆಂಬ ಉದ್ದೇಶದಿಂದ ಕನ್ನಡದಲ್ಲಿ ಕೃತಿ ರಚಿಸಿದ ಅವರು ಕಳೆದ ವರ್ಷ ಕೋವಿಡ್ ಸಂದರ್ಭದಲ್ಲಿ ನಿಧನರಾದರು. ಡಾ.ಸೊನ್ನದ ಅವರ ಆಶಯದಂತೆ ಕೃತಿ ಹೊರತಂದು ಜನತೆಗೆ ತಲುಪಿಸಲಾಗುತ್ತಿದೆ ಎಂದು ಟ್ರಸ್ಟ್ನ ಡಾ.ದೀಪಾ ಗೌಡರ, ಬಾಬು ತಿಮ್ಮನಾಯಕ ಹಾಗೂ ಆನಂದ ಸೊನ್ನದ ತಿಳಿಸಿದ್ದಾರೆ.