ನಿಮ್ಮ ಸುದ್ದಿ ಬಾಗಲಕೋಟೆ
ನಗರದಲ್ಲಿ ಜೂ.೫ರಂದು ಬ್ರಾಹ್ಮಣ ವಧು-ವರರ ೩೯ನೇ ರಾಜ್ಯಮಟ್ಟದ ಸಮ್ಮೇಳನ ಆಯೋಜಿಸಲಾಗಿದೆ ಎಂದು ಸಪ್ತಪದಿ ಫೌಂಡೇಶನ್ ಪ್ರಧಾನ ಕಾರ್ಯದರ್ಶಿ ಎಸ್.ಶ್ರೀನಿವಾಸ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ರಾಹ್ಮಣ ಸಮಾಜ ಬಾಗಲಕೋಟೆ, ವಿಶ್ವ ಮದ್ವಮತ ವೆಲ್‌ಫೇರ್ ಅಸೋಷಿಯೇಷನ್, ರಾಜ್ಯ ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘ ಹಾಗೂ ಮೈಸೂರಿನ ಸಪ್ತಪದಿ ಫೌಂಡೇಶನ್ ಟ್ರಸ್ಟ್ ಸಹಯೋಗದಲ್ಲಿ ವಿದ್ಯಾಗಿರಿಯ ಸೀತಾರಾಮ ಕಲ್ಯಾಣ ಮಂಟಪದಲ್ಲಿ ಬೆಳಗ್ಗೆ ೧೧.೩೦ಕ್ಕೆ ನಡೆಯುವ ಸಮ್ಮೇಳನವನ್ನು ಶಾಸಕ ವೀರಣ್ಣ ಚರಂತಿಮಠ, ಎಂಎಲ್‌ಸಿ ಪಿ.ಎಚ್.ಪೂಜಾರ ಉದ್ಘಾಟಿಸಲಿದ್ದಾರೆ ಎಂದರು.
ಪಂ.ರಘೋತ್ತಮಾಚಾರ್ಯ ನಾಗಸಂಪಗೆ, ಪಂ.ಭೀಮಸೇನಾಚಾರ್ಯ ಪಾಂಡುರಂಗಿ, ಪಂ.ಬಿಂದುಮಾಧವಾಚಾರ್ಯ ನಾಗಸಂಪಗೆ, ಪಂ.ಆನಂದ ಶರ್ಮಾ ಸಾನ್ನಿಧ್ಯ ವಹಿಸಲಿದ್ದು, ಲೆಕ್ಕಪರಿಶೋಧಕ ಶಿವರಾಮ ಹೆಗಡೆ, ಶ್ರೀನಿವಾಸ ಮನಗೂಳಿ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ಬ್ರಾಹ್ಮಣ ಸಮಾಜದ ಜಿಲ್ಲಾಧ್ಯಕ್ಷ ಕೆ.ಎಸ್.ದೇಶಪಾಂಡೆ, ತರುಣ ಸಂಘದ ಅಧ್ಯಕ್ಷ ಎಸ್.ವಿ.ದೇಸಾಯಿ, ಬಿ.ವಿ.ಕುಲಕರ್ಣಿ, ನರಸಿಂಹ ಆಲೂರ, ರಾಮ ಮನಗೂಳಿ, ನಾರಾಯಣ ತಾಸಗಾಂವ, ಶ್ರೀಕಾಂತ ದೇಸಾಯಿ, ಕಿರಣ ಕುಲಕರ್ಣಿ, ಆನಂದ ಜೋಶಿ ಇತರರು ಆಗಮಿಸಲಿದ್ದಾರೆ ಎಂದರು.
ವಿನಾಯಕ ದೇಸಾಯಿ, ಬಾಲಕೃಷ್ಣ ಸಂಗಾಪುರ, ಕೃಷ್ಣಾಜಿ ಕುಲಕರ್ಣಿ, ಗೋವಿಂದರಾಜ ದೇಶಪಾಂಡೆ ಇದ್ದರು.