ನಿಮ್ಮ ಸುದ್ದಿ ಬಾಗಲಕೋಟೆ
ಗಂಗಾಮತ ನೌಕರರ ಸಂಘದ ಜಿಲ್ಲಾ ಸಮಾವೇಶ ನವಂಬರ 13 ರಂದು ಜರುಗಲಿದ್ದು ಅದರ ಪೂರ್ವಬಾವಿಯಾಗಿ ಶನಿವಾರ ಬಾದಾಮಿ ತಾಲೂಕು ಗಂಗಾಮತ ನೌಕರರ ಸಭೆ ಜರುಗಿತು.
ಬದಾಮಿ ಹೊರ ಭಾಗದಲ್ಲಿರುವ ಕೊಣಮ್ಮ ದೇವಿ ದೇವಸ್ಥಾನದಲ್ಲಿ ಸಂಘದ ರಾಜ್ಯ ಉಪಾಧ್ಯಕ್ಷ ಹಾಗೂ ಜಿಲ್ಲಾಧ್ಯಕ್ಷ ಉದಯ ಅಂಬಿಗೇರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಜಿಲ್ಲಾಸಮಾವೇಶದ ಸಿದ್ದತೆ ಕಾರ್ಯಕ್ರಮದ ರೂಪರೇಷ ಬಾದಾಮಿ ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ನೌಕರರು ಭಾಗವಹಿಸಬೇಕು ಎಂದು ಚರ್ಚಸಲಾಯಿತು.
ಸಭೆಯಲ್ಲಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಉದಯ ಅಂಬಿಗೇರ ಗಂಗಾಮತ ನೌಕರರ ರಾಜ್ಯ ಸಂಘ ಅಂತ್ಯಂತ ಕ್ರೀಯಾಶೀಲವಾಗಿ ಕಾರ್ಯಮಾಡುತ್ತಿದೆ ಈಗಾಗಲೆ ರಾಜ್ಯಮಟ್ಟದ ಸಭೆ ಕಾರ್ಯಕ್ರಮ ಮಾಡಿ ಸಂಘಟನೆಗೆ ಒತ್ತು ನೀಡಲಾಗಿದೆ, ಜಿಲ್ಲಾಮಟ್ಟದಲ್ಲಿ ಗಂಗಾಮತ ನೌಕರರ ಸಂಘಟನೆ ಮಾಡಿ ಜಿಲ್ಲಾ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದ್ದು, ನಮ್ಮ ಸಮಾಜದ ನೌಕರರು ಸಣ್ಣಪುಟ್ಟ ಬಿನ್ನಾಬಿಪ್ರಾಯಗಳನ್ನು ಬದಿಗಿಟ್ಟು ಸಮಾವೇಶದಲ್ಲಿ ಭಾಗವಹಿಸಬೇಕು ಎಂದು ಹೇಳಿದ ಅವರು ಸಮಾವೇಶದ ಯಶಸ್ವಿಗೆ ಎಲ್ಲರ ಸಹಾಯ ಸಹಕಾರ ಬೇಕು ಈ ನಿಟ್ಟಿನಲ್ಲಿ ನೌಕರರು ಸಂಘಟಿತರಾಗಬೇಕು ಎಂದು ಹೇಳಿದರು.
ಸಮಾಜದ ತಾಲೂಕಾಧ್ಯಕ್ಷ ರಾಜಶೇಖರ ಅಂಬಿಗೇರ ಮಾತನಾಡಿ ಸಮಾಜದ ಪ್ರತಿಯೊಬ್ಬರಿಗೆ ಶಿಕ್ಷಣ ಸಿಗದೆ ಇರುವದರಿಂದ ಸಮಾಜದ ಮಕ್ಕಳಿಗೆ ಸಂಸ್ಕಾರ ಸಿಗುತ್ತಿಲ್ಲಾ ಸಮಾಜ ಬಲಾಡ್ಯವಾಗಬೇಕು ಇದರಿಂದ ಸಮಾಜಕ್ಕೆ ಅನುಕೂಲವಾಗಲಿದೆ ನಾವು ಒಂದೆ ಕುಟುಂಬದ ಸದಸ್ಯರುಗಳು ಒಬ್ಬರಿಗೊಬ್ಬರು ಬೆರಿಯಬೇಕು ಈ ನಿಟ್ಟನಲ್ಲಿ ಬಾದಾಮಿ ತಾಲೂಕಿನಲ್ಲಿ ಪ್ರತಿ ತಿಂಗಳು ಸಭೆ ಏರ್ಪಡಿಸಲಾಗುವದು ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಿ ಆರ್ ಕೋಲ್ಕಾರ ಸಮಾಜ ಸಂಘಟನೆ ಮಾಡುವದರಿಂದ ಸಂಸ್ಕಾರ ಸಿಗುವದರ ಜೊತೆಗೆ ಸಮಾಜ ಬಾಂದವರ ಪರಿಚಯವಾಗುತ್ತೆ ಸಂಘಟನೆಗೆ ಬಲ ಬರಬೇಕಾದರೆ ಒಂದಾಗವವುದು ಅಷ್ಟೆ ಅವಶ್ಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಮಾಜದ ಜಿಲ್ಲಾ ಉಪಾಧ್ಯಕ್ಷ ಸಂಜು ಡಿಗ್ಗಿ, ಶಿವಾನಂದ ಪರಸಣ್ಣವರ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಎಸ್ ಬಿ ಅಂಬಿಗೇರ,ಎಸ್ ಎಮ್ ಬಾರಕೇರ,ಎಫ್ ಎಚ್ ಅಂಬಿಗೇರ ಮಹಾಂತೇಶ ಅಂಬಿಗೇರ, ಮಹಾಂತೇಶ ಹಕಾರಿ ಎನ್ ಬಿ ಅಂಬಿಗೇರ ಎಸ್ ಎನ್ ಶಿರಹಟ್ಟಿ, ಎಲ್ ಎಫ್ ಮಾಳವಾಡ ಕೆ ಎಸ್ ಶಾಸ್ತ್ರೀ, ಸಿ ವೈ ಕೊಂತ ಸುರೇಶ ಗಾಡದ ಅರ್ಜುನ್ ಅಂಬಿಗೇರ ಶಂಕರ ಕನಕಗಿರಿ ಅಡಿಯಪ್ಪ ಅರಬುತನ್ನವರ್ ಸೇರಿದಂತೆ ಇನ್ನಿತರರು ಇದ್ದರು.