ನೂತನ ಕಟ್ಟಡ ಉದ್ಘಾಟಿಸಿದ -ಸಿಎಂ
ಶ್ರೀಶೈಲಂ : ಕರ್ನಾಟಕ ರಾಜ್ಯವಲ್ಲದೆ ದಕ್ಷೀಣದ ಬೇರೆ ಬೇರೆ ರಾಜ್ಯಗಳ ಪುಣ್ಯಕ್ಷೇತ್ರಗಳಲ್ಲಿ ಅನ್ನದಾನ ಛತ್ರ ಪ್ರಾರಂಭಿಸುವ ಮೂಲಕ ಬಾಗಲಕೋಟೆ ಬಿವಿವಿಸಂಘ ಈಗ ದಕ್ಷೀಣ ಭಾರತದಲ್ಲಿಯೆ ಸಾಧನೆಯ ಪರ್ವವನ್ನು ಪ್ರಾರಂಬಿಸಿದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಆಂದ್ರಪ್ರದೇಶ ರಾಜ್ಯದ ಶ್ರೀಶೈಲಂ ದಲ್ಲಿ ಬಾಗಲಕೋಟೆ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ನಿತ್ಯ ಅನ್ನದಾನ ಛತ್ರದ ನೂತನ ಕಟ್ಟಡ ಉದ್ಘಾಟನೆಯನ್ನು ಮಾಡಿ ಮಾತನಾಡಿ ಶುಭ ಹಾರೈಸಿ. ಬಿವಿವಿಸಂಘದ ಈ ನಿತ್ಯ ಅನ್ನದಾನ ಛತ್ರದಿಂದ ಶ್ರೀಶಲಕ್ಕೆ ಬರುವ ಇಡಿ ದಕ್ಷಿಣ ಭಾರತದ ಭಕ್ತಾದಿಗಳಿಗೆ ಅನುಕೂಲವಾಗಲಿದೆ ಎಂದರು.
ನಿಕಟಪೂರ್ವಮುಖ್ಯಮಂತ್ರಿಗಳು ಕೇಂದ್ರ ಸಂಸದೀಯ ಮಂಡಳಿ ಸದಸ್ಯರಾದ ಮಾನ್ಯ ಬಿ.ಎಸ್.ಯಡಿಯೂರಪ್ಪನವರು ಮಾತನಾಡಿ ಬಿವಿವಿಸಂಘ ಎಂಬ ವಿದ್ಯಾಕಾಶಿ ಭಾರತದ್ದೂಕ್ಕೂ ದಾಸೋಹ ಪರಿಕಲ್ಪನೆಯನ್ನು ಕಾರ್ಯರೂಪಕ್ಕೆ ತಂದಿರುವುದು ಮಾದರಿಯಾಗಿದೆ ಮತ್ತು ಶಿಕ್ಷಣಕ್ಷೇತ್ರದ ಸಾಧನೆ ಜೋತಗೆ ಧಾರ್ಮಿಕ ಕ್ಷೇತ್ರಕ್ಕೂ ತನ್ನ ವಿಸ್ತಾರವನ್ನು ಬೆಳೆಸಿರುವುದು ಹೆಮ್ಮೆ ಸಂಗತಿಯಾಗಿದೆ, ಶಾಸಕರು ಹಾಗೂ ಕಾರ್ಯಾಧ್ಯಕ್ಷರಾದ ಡಾ,ವೀರಣ್ಣ ಚರಂತಿಮಠ ಅವರ ಪ್ರಾಮಾಣಿಕ ಪರಿಶ್ರಮದ ಫಲ ಇಂದು ಸಾರ್ಥಕಥೆ ಪಡೆದಿದೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯದ ಜಲ ಸಂಪನ್ಮೂಲ ಸಚಿವರಾದ ಮಾನ್ಯ ಗೋವಿಂದ ಕಾರಜೋಳ, ಬೃಹತ ಮತ್ತು ಮದ್ಯಮ ಕೈಗಾರಿಕ ಸಚಿವ ಮುರಗೇಶ ನಿರಾಣಿ, ಲೋಕೋಪಯೋಗಿ ಸಚಿವರಾದ ಮಾನ್ಯ ಸಿ.ಸಿ.ಪಾಟೀಲ, ರಾಷ್ಡಿçÃಯ ಕಾರ್ಯಕಾರಣಿ ಸದಸ್ಯರಾದ ಸಿ,ಟಿ,ರವಿ, ಶಾಸಕ ಎ,ಎಸ,ನಡಹಳ್ಳಿ, ಸಿದ್ದು ಸವದಿ, ಅವರು ಮತ್ತು ಆಂದ್ರಪ್ರದೇಶ ರಾಜ್ಯದ ಹಣಕಾಸು, ಕೌಶಲ್ಯಾಭಿವೃದ್ಧಿ ಹಾಗೂ ಉದ್ಯಮಶೀಲತೆ ಸಚಿವರಾದ ಮಾನ್ಯ ಭುಗ್ಗನ ರಾಜೇಂದ್ರನಾಥ, ತಿರುಮಲ ತಿರುಪತಿ ದೇವಸ್ಥಾನದ ಚೇರಮನ್‌ರಾದ ಮಾನ್ಯ ವಾಯ್.ವಿ.ಸುಬ್ಬಾರೆಡ್ಡಿ ಹಾಗೂ ಶ್ರೀಶೈಲಂ ಶ್ರೀ ಭ್ರಮರಾಂಭ ಮತ್ತು ಮಲ್ಲಿಕಾರ್ಜುನ ದೇವಸ್ಥಾನ ಆಡಳಿತಾಧಿಕಾರಿಗಳಾದ ಮಾನ್ಯ ಎಸ್.ಲವಣ್ಣ, ಸಂಘದ ಸದಸ್ಯರುಗಳು ಉಪಸ್ಥಿತರಿದ್ದರು.
ಈ ಸಮಾರಂಭದಲ್ಲಿ ಉಜ್ಜಯಿನಿಯ ಶ್ರೀ.ಶ್ರೀ.ಶ್ರೀ ೧೦೦೮ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳವರು, ಶ್ರೀಶೈಲಂ ಶ್ರೀ.ಶ್ರೀ.ಶ್ರೀ ೧೦೦೮ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳವರು, ಕಾಶಿಯ ಶ್ರೀ.ಶ್ರೀ.ಶ್ರೀ ೧೦೦೮ ಜಗದ್ಗುರು ಡಾ.ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳವರು ಇವರು ಸಾನಿಧ್ಯ ವಹಿಸಿ ಆಶಿರ್ವಚನ ನಿಡಿದರು,
ಬಾಗಲಕೋಟೆ ಶಾಸಕರು ಬಿ.ವಿ.ವಿ ಸಂಘದ ಕಾರ್ಯಾಧ್ಯಕ್ಷರಾದ ಡಾ.ವೀರಣ್ಣ ಸಿ.ಚರಂತಿಮಠ ಮತ್ತು ಬಿ.ವಿ.ವಿ ಸಂಘದ ಗೌರವ ಕಾರ್ಯದರ್ಶೀ ಮಹೇಶ ಎನ್.ಅಥಣಿ ಸಂಘದ ಸದಸ್ಯರುಗಳು ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ನಿಕಟಪೂರ್ವ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರಿಗೆ , ಸಚಿವರಾದ ಗೋವಿಂದ ಕಾರಜೋಳ, ಮುರಗೇಶ ನಿರಾಣಿ, ಸಿ,ಸಿ ಪಾಟೀಲ ಶಾಸಕರಾದ ಸಿ,ಟಿ,ರವಿ, ಸಿದ್ದು ಸವದಿ ಅವರುಗಳಿಗೆ ಸಂಘದ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.