This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

State News

ಜಾಗತಿಕ ಮನ್ನಣೆ ಪಡೆಯುತ್ತಿರುವ ಭಾರತ : ಡಿಸಿ ಸುನೀಲ್‌ಕುಮಾರ

ಜಿಲ್ಲಾ ಕ್ರೀಡಾಂಗಣದಲ್ಲಿ ಸಂಭ್ರಮದ ೭೪ನೇ ಗಣರಾಜ್ಯೋತ್ಸವ

ನಿಮ್ಮ ಸುದ್ದಿ ಬಾಗಲಕೋಟೆ

ವಿವಿಧ ಭಾಷೆ, ಜನಾಂಗ, ಸಂಸ್ಕೃತಿ, ಪರಂಪರೆ, ಧರ್ಮ, ಆಚಾರ, ವಿಚಾರಗಳನ್ನು ಅವಲಂಭಿಸಿರುವ ದೇಶ ಭಾರತವಾಗಿದ್ದು, ಈಗ ಜಾಗತಿಕವಾಗಿ ಮನ್ನಣೆ ಪಡೆಯುತ್ತಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ ಹೇಳಿದರು.

ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ಜಿಲ್ಲಾಡಳಿತದಿಂದ ಹಮ್ಮಿಕೊಂಡ ೭೪ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿ ಮಾತನಾಡಿದ ಅವರು ಪ್ರಜಾಪ್ರಭುತ್ವ ಮತ್ತು ಒಕ್ಕೂಟ ವ್ಯವಸ್ಥೆಯ ಆಧಾರದ ಮೇಲೆ ಅತ್ಯಂತ ಬಲಿಷ್ಟ ರಾಷ್ಟçವನ್ನಾಗಿ, ಸ್ವಾವಲಂಭಿ ದೇಶವಾಗಿ ಅಭಿವೃದ್ದಿ ಪಥದಲ್ಲಿ ಸಾಗುತ್ತಿರುವುದು ಪ್ರಶಂಸಣೆಗೆ ಪಾತ್ರವಾಗಿದೆ. ಸತತ ಅಧ್ಯಯನ, ಚರ್ಚೆಗಳ ಅವಿರತ ಶ್ರಮದ ಫಲವಾಗಿ ಭಾರತ ಸಂವಿಧಾನ ರಚನೆಗೊಂಡು, ೧೯೫೦ ರ ಜನವರಿ ೨೬ ರಂದು ಜಾರಿಗೆ ಬಂದಿತು ಎಂದರು.

ಸರಕಾರವು ಜನಸಾಮಾನ್ಯರ ಆರೋಗ್ಯ ಸಂರಕ್ಷಣೆಗಾಗಿ ಹೆಚ್ಚಿನ ಕಾಳಜಿಯಿಂದ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಯಶಸ್ವಿನಿ ಯೋಜನೆಯನ್ನು ಪರಿಷ್ಕೃತಗೊಳಿಸಿ ಮರು ಜಾರಿಗೊಳಿಸಿದೆ. ಇದರಿಂದ ಗ್ರಾಮೀಣ ಭಾಗದ ರೈತರು ಮತ್ತು ಸಹಕಾರ ಸದಸ್ಯರ ಜೊತೆಗೆ ನಗರ ಪ್ರದೇಶದ ಬಡ ಜನರಿಗೂ ಉಚಿತ ಚಿಕಿತ್ಸೆ ದೊರೆಯುವಂತಾಗಿದೆ. ನಗರ ಪ್ರದೇಶದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಸಮಗ್ರ ಪ್ರಾಥಮಿಕ ಆರೋಗ್ಯ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ನಮ್ಮ ಕ್ಲಿನಿಕ್‌ಗಳನ್ನು ಸರಕಾರ ಪ್ರಾರಂಭಿಸಿದ್ದು, ಜಿಲ್ಲೆಯಲ್ಲಿ ೧೫ ನಮ್ಮ ಕ್ಲಿನಿಕ್‌ಗಳು ಕಾರ್ಯನಿರ್ವಹಿಸುತ್ತಿವೆ ಎಂದರು.

ಲೋಕೋಪಯೋಗಿ ಇಲಾಖೆಯಿಂದ ಜಿಲ್ಲೆಯಲ್ಲಿ ಗ್ರಾಮೀಣ ರಸ್ತೆಯಿಂದ ಜಿಲ್ಲಾ ಮುಖ್ಯರಸ್ತೆಯನ್ನಾಗಿ ಒಟ್ಟು ೫೬೪.೭೩ ಕಿ.ಮೀ ಹಾಗೂ ಜಿಲ್ಲಾ ಮುಖ್ಯ ರಸ್ತೆಯಿಂದ ರಾಜ್ಯ ಹೆದ್ದಾರಿಗಳಾಗಿ ಒಟ್ಟು ೨೧೦ ಕಿ.ಮೀ. ಉದ್ದದ ರಸ್ತೆಗಳನ್ನು ಸರಕಾರ ಮೇಲ್ದರ್ಜೆಗೇರಿಸಿದೆ. ಅಲ್ಲದೇ ಒಟ್ಟು ೨೧೯.೯೭ ಕೋಟಿ ರೂ.ಗಳ ಅನುದಾನದಲ್ಲಿ ೨೫೦.೬೫ ಕಿಮೀ ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಮುಖ್ಯರಸ್ತೆಗಳು ಸುಧಾರಣೆ ಮಾಡಲಾಗುತ್ತಿದೆ. ಬಾಗಲಕೋಟೆ ನಗರ ಯೋಜನಾ ಪ್ರಾಧಿಕಾರದಿಂದ ೫ ಕೋಟಿ ರೂ.ಗಳ ವೆಚ್ಚದಲ್ಲಿ ಐತಿಹಾಸಿಕ ಪ್ರಸಿದ್ದ ಮುಚಖಂಡಿ ಕೆರೆ ಅಭಿವೃದ್ದಿ ಕಾಮಗಾರಿಗೆ ಈಗಾಗಲೇ ಚಾಲನೆ ದೊರೆತ್ತಿದ್ದು, ಕೆಲಸ ಪ್ರಗತಿಯಲ್ಲಿರುವುದಾಗಿ ತಿಳಿಸಿದರು.
ಕೇಂದ್ರ ಸರಕಾರದ ಖೇಲೋ ಇಂಡಿಯಾ ಯೋಜನೆಯಡಿ ಬಾಗಲಕೋಟೆ ಜಿಲ್ಲೆಗೆ ಅಂತರಾಷ್ಟಿçÃಯ ಹಾಕಿ ಮೈದಾನ ನಿರ್ಮಾಣಕ್ಕೆ ಜಿಲ್ಲಾಡಳಿತದಿಂದ ಪ್ರಸ್ತಾವನೆ ಕಳುಹಿಸಲಾಗಿತ್ತು. ಈ ಹಿನ್ನಲೆಯಲ್ಲಿ ಹಾಕಿ ಮೈದಾನ ನಿರ್ಮಾಣಕ್ಕಾಗಿ ಬಾಗಲಕೋಟೆ ಪಟ್ಟಣ ಅಭಿವೃದ್ದಿ ಪ್ರಾಧಿಕಾರದಿಂದ ೧೦ ರಿಂದ ೧೨ ಎಕರೆ ಜಾಗವನ್ನು ನೀಡಲು ಸಭೆಯಲ್ಲಿ ತಿರ್ಮಾನಿಸಿರುವುದಾಗಿ ತಿಳಿಸಿದ್ದಾರೆ. ೨೦೨೩ ನ್ನು ಅಂತರರಾಷ್ಟಿçÃಯ ಸಿರಿದಾನ್ಯ ವರ್ಷ ವೆಂದು ಘೋಷಿಸಿರುವ ಪ್ರಯುಕ್ತ ಬಾಗಲಕೋಟೆ ಜಿಲ್ಲೆಯಲ್ಲಿ ಸಿರಿಧಾನ್ಯ ಮೇಳ ಹಾಗೂ ಸಾವಯವ ಸಿರಿ ಕಾರ್ಯಗಾರವನ್ನು ಆಯೋಜಿಸಲಾಗಿದ್ದು, ಮೇಳಕ್ಕೆ ೫೨೦೦ ಜನರು ಭೇಟಿ ನೀಡಿದ್ದಾರೆ. ಅಲ್ಲದೇ ೪.೬೮ ಲಕ್ಷ ರೂ.ಗಳ ವಹಿವಾಟು ನಡೆದಿದೆ ಎಂದರು.

೨೦೨೧ನೇ ಸಾಲಿನ ಸಶಸ್ತç ಪಡೆಗಳ ಧ್ವಜ ನಿಧಿ ಸಂಗ್ರಹಣೆಯಲ್ಲಿ ಗುರಿ ಮೀರಿ ನಿಧಿ ಸಂಗ್ರಹಿಸಿದ ಹಗ್ಗಳಿಕೆಗೆ ಬಾಗಲಕೋಟೆ ಜಿಲ್ಲೆ ಪಾತ್ರವಾಗಿದ್ದು, ಈ ಹಿನ್ನಲೆಯಲ್ಲಿ ರಾಜ್ಯಪಾಲರಿಂದ ಜಿಲ್ಲಾಡಳಿತ ಪಾರಿತೋಷಕ ಪಡೆದುಕೊಂಡಿರುವುದು ಹೆಮ್ಮೆಯ ವಿಷಯ. ಕಂದಾಯ ಇಲಾಖೆಯಿಂದ ನೀಡುವ ಭೂಮಿ, ಎ.ಜೆ.ಎಸ್.ಕೆ ಹಾಗೂ ಸಕಾಲ ಸೇವೆಗಳಲ್ಲಿ ಬಾಗಲಕೋಟೆ ಜಿಲ್ಲೆ ಅಕ್ಟೋಬರ-೨೦೨೨ ರಿಂದ ಡಿಸೆಂಬರ-೨೦೨೨ ರ ಮಾಹೆಯವರೆಗೆ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದೆ ಎಂದರು.

ಮುಖ್ಯಮಂತ್ರಿಗಳ ಮಹಾತ್ವಾಕಾಂಕ್ಷಿ ಯೋಜನೆಯಾದ ಗ್ರಾಮ ಒನ್ ಯೋಜನೆಯಡಿ ಬಾಗಲಕೋಟೆ ಜಿಲ್ಲೆಗೆ ಮಂಜೂರಾದ ೨೮೯ ಪೈಕಿ ೨೨೦ ಗ್ರಾಮ ಒನ್ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಈ ಯೋಜನೆ ಮೂಲಕ ಈಗಾಗಲೇ ೬.೩೭ ಲಕ್ಷ ಸೇವೆಗಳನ್ನು ಗ್ರಾಮೀಣ ಭಾಗದ ಸಾರ್ವಜನಿಕರಿಗೆ ನೀಡಲಾಗಿದೆ. ಮಹಾತ್ಮಾ ಗಾಂಧಿ ರಾಷ್ಟಿçÃಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಜಿಲ್ಲೆಯಲ್ಲಿ ೧೬೬ ಕೆರೆಗಳನ್ನು ಪುನಃಶ್ಚೇತನ ಮಾಡಿ ಅಮೃತ ಸರೋವರಗಳನ್ನಾಗಿ ಅಭಿವೃದ್ಧಿ ಪಡಿಸಲು ಕ್ರಮ ವಹಿಸಲಾಗುತ್ತಿದೆ.

ಮಹಾತ್ಮಾ ಗಾಂಧಿ ರಾಷ್ಟಿçÃಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಹಾಗೂ ಸರ್ಕಾರದ ವಿಶೇಷ ಅನುದಾನ ಒಗ್ಗೂಡಿಸುವಿಕೆಯಡಿ ನಮ್ಮ ಹೊಲ ನಮ್ಮ ದಾರಿ ಯೋಜನೆಯನ್ನು ಪ್ರತಿ ವಿಧಾನ ಸಭಾ ಮತಕ್ಷೇತ್ರಕ್ಕೆ ೩೦ ಕಿ.ಮೀ.ಗಳಂತೆ ಅನುಷ್ಠಾನಗೊಳಿಸಲಾಗುತ್ತಿದೆ. ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ೨೬೯ ಫಲಾನುಭವಿಗಳಿಗೆ ರೂ.೨೮.೨೭ ಲಕ್ಷ, ಅನುಸೂಚಿತ ಜಾತಿ ಮತ್ತು ಉಪಯೋಜನೆÀಯಡಿ ಒಬ್ಬ ಫಲಾನುಭವಿಗೆ ರೂ.೧.೦೦ ಲಕ್ಷ, ಮಧುವನ ಮತ್ತು ಜೇನು ಸಾಕಾಣಿಕೆ ಯೋಜನೆಯಡಿ ೧೨ ಫಲಾನುಭವಿಗಳಿಗೆ ರೂ. ೦.೯೭ ಲಕ್ಷÀಗಳ ಸಹಾಯಧನ ಒದಗಿಸಿದೆ ಎಂದರು.

ಸ್ವಾತಂತ್ರ ಹೋರಾಟದ ಭಾಗವಾದ ಹಲಗಲಿ ಬೇಡರ ಬಂಡಾಯದಲ್ಲಿ ಹುತಾತ್ಮರಾದ ಜಡಗಣ್ಣ ಮತ್ತು ಬಾಲಣ್ಣ ಇವರ ಹೆಸರಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಪರಿಶಿಷ್ಟ ಜಾತಿಯ ರವೀನಾ ಮುಸಾವತ್ ಹಾಗೂ ಪರಿಶಿಷ್ಟ ಪಂಗಡದ ಲಕ್ಷಿö್ಮÃ ಬಾಳಪ್ಪ ತಳ್ಳಿಕೇರಿ ಅವರಿಗೆ ತಲಾ 1 ಲಕ್ಷ ರೂ.ಗಳ ಪ್ರೋತ್ಸಾಹಧನಕ್ಕೆ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿ ಕಾರ್ಯಕ್ರಮಗಳು ಜರುಗಿದವು.

ಕಾರ್ಯಕ್ರಮದಲ್ಲಿ ಸಂಸದ ಪಿ.ಸಿ.ಗದ್ದಿಗೌಡರ, ಶಾಸಕ ವೀರಣ್ಣ ಚರಂತಿಮಠ, ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಬುಡಾ ಅಧ್ಯಕ್ಷ ಬಸವಲಿಂಗಪ್ಪ ನಾವಲಗಿ, ಜಿ.ಪಂ ಸಿಇಓ ಟಿ.ಭೂಬಾಲನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಯಪ್ರಕಾಶ, ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ ದೇಸಾಯಿ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ, ತಹಶೀಲ್ದಾರ ವಿನಯ ಪಾಟೀಲ ಸೇರಿದಂತೆ ಇತರರು ಉಪಸ್ಥಿತರಿದ್ದರು.

*ವಿವಿಧ ಗಣ್ಯ ವ್ಯಕ್ತಿಗಳಿಗೆ ಸನ್ಮಾನ*
————————————
ವಿವಿಧ ಕ್ಷೇತ್ರದಲ್ಲಿ ಸಾಧನೆಗೈದರವನ್ನು ಸನ್ಮಾನಿಸಲಾಯಿತು. ಸಿದ್ದಪ್ಪ ಹೂಗಾರ, ಅವನಪ್ಪ ಮಂಟೂರ, ಲಕ್ಕವ್ವ ಕೃಷ್ಣಪ್ಪ (ಜಾನಪದ), ಗೋವಿಂದಚಾರ್ಯ ಜೋಶಿ, ಪರ್ವತಪ್ಪ ಹದ್ಲಿ (ಸಮಾಜ ಸೇವೆ), ಶಂಕ್ರಪ್ಪ ಅಂಬಿಗೇರ, ಕರಿಯಪ್ಪ ಅಬ್ಬೂನವರ, ರೇಣುಕಾ ಪೂಜಾರ (ಕ್ರೀಡೆ), ದ.ರಾ.ಪುರೋಹಿತ, ಪ್ರಕಾಶ ಗುಳೇದಗುಡ್ಡ (ಪತ್ರಿಕೋದ್ಯಮ), ಭೀಮು ಜಮಖಂಡಿ, ಸೈಯದ ಇನಾಂಮದಾರ (ಛಾಯಾಚಿತ್ರ ವಿಭಾಗ), ಸೂಳೇಭಾವಿಯ ತೋಟಗಾರಿಕೆ ರೈ ಉತ್ಪಾದಕ ಸಂಸ್ಥೆ (ತೋಟಗಾರಿಕೆ), ಡಾ.ಪ್ರಮೋದ ಮಿರ್ಜಿ (ವೈದ್ಯಕೀಯ), ಗೋಪಾಲ ನಾಯ್ಕರ (ರಂಗಭೂಮಿ), ಮಹಾದೇವ ಚೋಳಿ, ಶಿವುಕುಮಾರ ಹಿರೇಮಠ, ಸುರೇಶ ಕನಕನ್ನವೆ, ಲಕ್ಷö್ಮಣ ಬೆಳ್ಳೂರು (ಕೃಷಿ).

*ಅತ್ಯುತ್ತಮ ಗ್ರಾಮ ಒನ್ ಕೇಂದ್ರ*
—————————————-
ಉತ್ತಮವಾಗಿ ನಾಗರಿಕ ಸೇವೆಗಳನ್ನು ನೀಡಿದ ಜಿಲ್ಲಾ ಮತ್ತು ತಾಲೂಕಾ ಮಟ್ಟದ ನಿರ್ವಾಹಕರನ್ನು ಸನ್ಮಾನಿಸಲಾಯಿತು. ಜಿಲ್ಲಾ ಮಟ್ಟದಲ್ಲಿ ಮಲ್ಲಪ್ಪ ತೇಲಿ (ಪ್ರಥಮ), ರಮೇಶ ಬಾರಕೇರ (ದ್ವಿತೀಯ), ಬಾಳಪ್ಪ ಕಡ್ಲಿಮಟ್ಟಿ (ತೃತೀಯ), ತಾಲೂಕಾ ಮಟ್ಟದಲ್ಲಿ ಸೋಮನಾಥ ತುಪ್ಪದ (ಪ್ರಥಮ), ಶಿವಕುಮಾರ ಬಿದರಕುಂದಿ (ದ್ವಿತೀಯ), ಈರಣ್ಣ ಬೆಣ್ಣೂರ (ತೃತೀಯ) ಸ್ಥಾನ ಪಡೆದುಕೊಂಡರು.

*ವಿದ್ಯಾರ್ಥಿಗಳಿಗೆ ಲ್ಯಾಪಟಾಪ್ ವಿತರಣೆ*
—————————————
2020ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಅತಿ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹದಾಯಕ ಯೋಜನೆಯಡಿ ಲ್ಯಾಪಟಾಪ್‌ಗಳನ್ನು ವಿತರಿಸಲಾಯಿತು. ಜಿಯಾಫಿಶಾ ಉಸ್ಮಾನ್‌ಶಾ, ಪ್ರೀತಿ ಗಣೇಶ, ರವೀನಾ ಮುಸ್ತಾವತ್ತ, ಸಾಕ್ಷಿ ಹವಾಲದಾರ, ಕೃಷ್ಣಾ ಕಟ್ಟಿಮನಿ, ಅಶ್ವಿನಿ ಸನ್ನಪ್ಪ, ತಸ್ಕೀನ್ ಶಿರೋಳಕರ, ಕೀರ್ತಿ ಶಂಕರಪ್ಪ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.

";