This is the title of the web page
This is the title of the web page

Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

State News

ನಟ ಪುನೀತ ರಾಜಕುಮಾರ ಅವರ ಸಾಮಾಜಿಕ ಸೇವೆ ಯುವಕರಿಗೆ ಆದರ್ಶ :ಶಾಸಕ -ಚರಂತಿಮಠ

*ನಟ ಪುನೀತ ರಾಜಕುಮಾರ ಅವರ ಸಾಮಾಜಿಕ ಸೇವೆ ಯುವಕರಿಗೆ ಆದರ್ಶ : ಶಾಸಕ -ಚರಂತಿಮಠ*

ನಿಮ್ಮ ಸುದ್ದಿ ಬಾಗಲಕೋಟೆ

ನಟ ಪುನೀತ ರಾಜಕುಮಾರ ಅವರ ಸಾಮಾಜಿಕ ಸೇವೆ ಯುವಕರಿಗೆ ಆದರ್ಶವಾಗಿದೆ ಎಂದು ಶಾಸಕ ಡಾ.ವೀರಣ್ಣ ಚರಂತಿಮಠ ಹೇಳಿದರು.

ಅವರು ಬಾಗಲಕೋಟೆ ನಗರದಲ್ಲಿ ಶುಕ್ರವಾರ ರಾತ್ರಿ ದುರ್ಗಾ ಅಪ್ಪು ಅಭಿಮಾನಿ ಬಳಗದಿಂದ ಹಮ್ಮಿಕೊಂಡ ದಿ.ಪುನೀತ ರಾಜಕುಮಾರ ಅವರ ಜನ್ಮ ದಿನಾಚರಣೆಯಲ್ಲಿ ಅಪ್ಪು ಭಾವ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಕೇಕ್ ಕಟ್ ಮಾಡುವ ಮೂಲಕ ಜನ್ಮ ದಿನದ ಆಚರಣೆ ಚಾಲನೆ ನೀಡಿ ಮಾತನಾಡಿದರು.

ಕನ್ನಡ ಚಲಚಿತ್ರ ರಂಗಕ್ಕೆ ಡಾ. ರಾಜಕುಮಾರ ಅವರ ಕುಟುಂಬ ತನ್ನನ್ನು ತಾನು ಅರ್ಪಿಸಿಕೊಂಡಿದೆ. ತಂದೆಯ ಕಲೆ ರಕ್ತಗತವಾಗಿ ಪುನೀತ ರಾಜಕುಮಾರಲ್ಲಿ ಇತ್ತು. ಆತ ಒಳ್ಳೆಯ ಕಲಾವಿದನಾಗಿ ಜೊತೆಗೆ ತನ್ನ ಸಮಾಜ ಸೇವೆಯ ಮೂಲಕ ಇಂದು ಲಕ್ಷಾಂತರ ಜನರ ಹೃದಯದಲ್ಲಿ ಅವರು ಅಜರಾಮರವಾಗಿರುತ್ತಾರೆ. ಕಲಾವಿದ ಪುನೀತ ರಾಜಕುಮಾರ ಅವರು ಸರಳತೆ, ವಿನಯ, ಸಮಾಜ ಸೇವೆ ಇವುಗಳನ್ನು ಯುವಕರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಪುನೀತ ಹುಟ್ಟು ಹಬ್ಬದ ಪ್ರಯುಕ್ತ ವಸತಿ ಇಲಾಖೆಯ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ 72 ಜನ ಫಲಾನುಭವಿಗಳಿಗೆ ಮನೆಯ ಹಕ್ಕು ಪತ್ರ ವೀತರಣೆಯನ್ನು ಮಾಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ, ಉಪಾದ್ಯಕ್ಷರಾದ ಅಶೋಕ ಲಿಂಬಾವಳಿ,ರಾಜು ರೇವಣಕರ, ಬಸವರಾಜ ಯಂಕಂಚಿ,ಅಯ್ಯಪ್ಪ ವಾಲ್ಮೀಕಿ, ನಗರಮಂಡಲ ಅಧ್ಯಕ್ಷ ಸದಾನಂದ ನಾರಾ, ನಗರಸಭೆ ಉಪಾಧ್ಯಕ್ಷ ಬಸವರಾಜ ಅವರಾದಿ, ಹಾಗೂ ದುರ್ಗಾ ನಗರದ ಅಪ್ಪು ಅಭಿಮಾನಿಗಳಗದ ಎಲ್ಲ ಪಧಾದಿಕಾರಿಗಳು ಸೇರಿದಂತೆ ಅನೇಕರು ಭಾಗವಹಿಸಿದ್ದರು.

Nimma Suddi
";