ಗ್ರಾಮ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷ ಮೀಸಲಾತಿ ನಿಗದಿ
ನಿಮ್ಮ ಸುದ್ದಿ ಬಾಗಲಕೋಟೆ
ಗ್ರಾಮ ಪಂಚಾಯಿತಿ ಮೀಸಲಾತಿಗೆ ಸಂಬಂಧಿಸಿದಂತೆ ಹುನಗುಂದ ಪಟ್ಟಣದ ಗುರುಭವನದಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಆಯ್ಕೆ ಪ್ರಕ್ರಿಯೆ ನಡೆಯಿತು.
ಜಿಲ್ಲಾಧಿಕಾರಿ ಪಿ ಸುನಿಲ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಮೀಸಲಾತಿ ನಿಗದಿ ಸಭೆಯಲ್ಲಿ ತಾಲೂಕಿನ 19 ಗ್ರಾಮ ಪಂಚಾಯತಿಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಮೀಸಲಾತಿ ನಿಯಮಾನುಸಾರ, ಲಾಟರಿ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಿತು.
ಕೂಡಲಸಂಗಮ ಅಧ್ಯಕ್ಷ (ಹಿಂವಬ ಮಹಿಳೆ), ಉಪಾಧ್ಯಕ್ಷ (ಹಿಂವಅ), ಗಂಜಿಹಾಳ ಗ್ರಾಮ ಪಂಚಾಯಿತಿ ಅಧ್ಯಕ್ಷ (ಎಸ್.ಸಿ) ಉಪಾಧ್ಯಕ್ಷ (ಸಾಮಾನ್ಯ), ಬೆಳಗಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ (ಎಸ್.ಸಿ ಮಹಿಳೆ), ಚಿತ್ತರಗಿ ಗ್ರಾಮ ಪಂಚಾಯತಿ ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ (ಸಾಮಾನ್ಯ ಮಹಿಳೆ), ಬಿಂಜವಾಡಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ (ಎಸ್.ಸಿ ಮಹಿಳೆ) ಉಪಾಧ್ಯಕ್ಷ (ಸಾಮಾನ್ಯ), ರಕ್ಕಸಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ (ಎಸ್.ಸಿ ಮಹಿಳೆ), ಉಪಾಧ್ಯಕ್ಷ (ಹಿಂವಅ ಮಹಿಳೆ), ನಾಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷ (ಸಾಮಾನ್ಯ ಮಹಿಳೆ), ಉಪಾಧ್ಯಕ್ಷ (ಸಾಮಾನ್ಯ), ಅಮರಾವತಿ ಗ್ರಾಮ ಪಂಚಾಯಿತಿ ಅಧ್ಯಕ್ಷ (ಹಿಂವಅ), ಉಪಾಧ್ಯಕ್ಷ (ಸಾಮಾನ್ಯ ಮಹಿಳೆ), ಹಿರೇಮಾಗಿ ಗ್ರಾಮ ಪಂಚಾಯತಿ ಅಧ್ಯಕ್ಷ (ಹಿಂದುಳಿದ ವರ್ಗ ಅ ಮಹಿಳೆ), ಉಪಾಧ್ಯಕ್ಷ (ಎಸ್ಟಿ ಮಹಿಳೆ), ಮೂಗನೂರ ಗ್ರಾಪಂ ಅಧ್ಯಕ್ಷ (ಹಿಂದುಳಿದ ವರ್ಗ ಅ ಮಹಿಳೆ), ಉಪಾಧ್ಯಕ್ಷ (ಹಿಂದುಳಿದ ವರ್ಗ ಬ ಮಹಿಳೆ), ಸೂಳೇಭಾವಿ ಗ್ರಾಮ ಪಂಚಾಯಿತಿ ಅಧ್ಯಕ್ಷ (ಸಾಮಾನ್ಯ), ಉಪಾಧ್ಯಕ್ಷ (ಎಸ್‍ಸಿ), ಐಹೊಳೆ ಗ್ರಾಪಂ ಅಧ್ಯಕ್ಷ (ಸಾಮಾನ್ಯ), ಉಪಾಧ್ಯಕ್ಷ (ಸಾಮಾನ್ಯ ಮಹಿಳೆ), ಧನ್ನೂರ ಗ್ರಾಪಂ ಅಧ್ಯಕ್ಷ (ಸಾಮಾನ್ಯ ಮಹಿಳೆ), ಉಪಾಧ್ಯಕ್ಷ (ಹಿಂದುಳಿದ ವರ್ಗ ಅ), ಮರೋಳ ಗ್ರಾಪಂ ಅಧ್ಯಕ್ಷ (ಸಾಮಾನ್ಯ), ಉಪಾಧ್ಯಕ್ಷ (ಹಿಂವಅ ಮಹಿಳೆ), ಹೂವಿನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ (ಹಿಂದುಳಿದ ವರ್ಗ ಅ), ಉಪಾಧ್ಯಕ್ಷ (ಎಸ್.ಸಿ ಮಹಿಳೆ), ಹಿರೇಬಾದವಾಡಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ (ಸಾಮಾನ್ಯ), ಉಪಾಧ್ಯಕ್ಷ (ಸಾಮಾನ್ಯ ಮಹಿಳೆ), ಹಾವರಗಿ ಗ್ರಾಮ ಪಂಚಾಯತಿ ಅಧ್ಯಕ್ಷ (ಎಸ್.ಟಿ ಮಹಿಳೆ), ಉಪಾಧ್ಯಕ್ಷ (ಸಾಮಾನ್ಯ), ಹಿರೇಮಳಗಾವಿ ಗ್ರಾಮ ಪಂಚಾಯಿತಿ ಅಧ್ಯಕ್ಷ (ಸಾಮಾನ್ಯ ಮಹಿಳೆ), ಉಪಾಧ್ಯಕ್ಷ (ಸಾಮಾನ್ಯ), ಬಿಸಲದಿನ್ನಿ ಗ್ರಾಮ ಪಂಚಾಯತಿ ಅಧ್ಯಕ್ಷ (ಸಾಮಾನ್ಯ ಮಹಿಳೆ), ಉಪಾಧ್ಯಕ್ಷ (ಸಾಮಾನ್ಯ) ವರ್ಗಕ್ಕೆ ಮೀಸಲಾಗಿದೆ.
ಸಭೆಯಲ್ಲಿ ಕೂಡಲಸಂಗಮ ಸೇರಿದಂತೆ ಕೆಲ ಗ್ರಾಪಂಗಳ ಮೀಸಲಾತಿ ಕುರಿತು ಸದಸ್ಯರು ಹಾಗೂ ಜಿಲ್ಲಾಧಿಕಾರಿ ಮಧ್ಯೆ ಮಾತಿನ ಚಕಮಕಿ ನಡೆಯಿತು. ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆ ವೇಳೆ ಎಲ್ಲದಕ್ಕೂ ಚುನಾವಣಾಧಿಕಾರಿಗಳು ಸ್ಪಷ್ಟನೆ ನೀಡಲಿದ್ದಾರೆ. ಮೀಸಲಾತಿ ನಿಗದಿ ಕುರಿತು ಸಂಶಯವಿದ್ದರೆ ಲಿಖಿತವಾಗಿ ಬರೆದುಕೊಡಿ ಎಂದು ಡಿಸಿ ಸದಸ್ಯರಿಗೆ ತಿಳಿಸಿದರು.
ಉಪವಿಭಾಗಾಧಿಕಾರಿ ಶ್ವೇತಾ ಬಿಡಿಕರ, ಚುನಾವಣೆ ತಹಸೀಲ್ದಾರ್ ಪಾಂಡವ, ಹುನಗುಂದ ತಹಸೀಲ್ದಾರ್ ಬಿ.ವೈ.ನೈಕೋಡಿ, ಶಿರಸ್ತೇದಾರ್ ಈಶ್ವರ ಗಡ್ಡಿ, ಎನ್.ಐ.ಸಿ.ಯ ಗಿರಿಯಾಚಾರ್ಯ ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ಇದ್ದರು.