| Latest Version 9.0.7 |

International NewsNational News

ಐತಿಹಾಸಿಕ ಧರ್ಮಧ್ವಜದ ದಿವ್ಯ ಉದಯಕ್ಕೆ ಸಾಕ್ಷಿಯಾದ ಪ್ರಧಾನಿ! ಅಯೋಧ್ಯೆಯಲ್ಲಿ ‘ರಘುಪತಿಯ’ ಸ್ಮರಣೆ!

ಅಯೋಧ್ಯೆ: ಪವಿತ್ರ ಭೂಮಿಯಲ್ಲಿ ಇಂದು ಐತಿಹಾಸಿಕ (Historical) ಘಟನೆಯೊಂದರ ಸುವರ್ಣ ಅಧ್ಯಾಯ ತೆರೆದುಕೊಂಡಿತು. ಸಾವಿರಾರು ವರ್ಷಗಳ ಸಂಸ್ಕೃತಿ (Culture), ತ್ಯಾಗ, ಬಲಿದಾನ ಮತ್ತು ಭಕ್ತಿಯ ಪಾವನ ಸಾರವನ್ನು ಹೊತ್ತು ಬಂದ ಧರ್ಮ ಧ್ವಜವು (Flag) ರಘುಕುಲದ ಆಸ್ಥೆಯ, ಭಗವಾನ್ ರಾಮನ ಆದರ್ಶಗಳ ಸಂಕೇತವಾಗಿ ದಿವ್ಯವಾಗಿ ಅರಳಿತು. ಧರ್ಮ ಧ್ವಜದ ಬಣ್ಣ ಧರ್ಮದ ಅನಂತ ಜ್ಯೋತಿಗೆ ಹೊಸ ಅರ್ಥ ನೀಡಿದ ದಿನ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು. ಈ ಹಿನ್ನೆಲೆಯಲ್ಲಿ ಪ್ರಧಾನಿ ಸೇರಿ ಗಣ್ಯರಿಂದ ಧ್ವಜಾರೋಹಣ ಮಾಡಲಾಯಿತು. ಧ್ವಜಾರೋಹನ ನೆರವೇರಿಸಿ ಮಾತನಾಡಿದ ಪ್ರಧಾನಿ ರಾಮನ ಘತವೈಭವವನ್ನು, ರಾಮಂದಿರದ ಐತಿಹಾಸಿಕ ಘಟನೆಗಳತ್ತ ಮೆಲಕು ಹಾಕುತ್ತ, ರಾಮನ ಆದರ್ಶಗಳ ಪಾಠವನ್ನು ಮಾಡಿದರು.
ಧರ್ಮ ಧ್ವಜ ಸತ್ಯ-ಧರ್ಮದ ಪ್ರತೀಕ!
ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಇದು ಕೇವಲ ಒಂದು ಧ್ವಜವಲ್ಲ, ಕೋಟೀ ರಾಮಭಕ್ತರ ಸಂಕಲ್ಪಕ್ಕೆ ಸಿದ್ಧಿಯಾದ ಸತ್ಯ-ಧರ್ಮದ ಪ್ರತೀಕ. ಇಡೀ ಭಾರತ, ಇಡೀ ವಿಶ್ವ ರಾಮಮಯವಾಗಿದೆ, ಎಂದು ಭಾವುಕರಾದರು. ಯುಗಾಂತ್ಯದವರೆಗೂ ಮಾನವತೆಯನ್ನು ದಾರಿದೀಪದಂತೆ ನಡೆಸುವ ಶಕ್ತಿ ಈ ಧರ್ಮಧ್ವಜದಲ್ಲಿದೆ ಎಂದು ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದರು.

ರಾಮರಾಜ್ಯದ ತತ್ವ ಸ್ಪರ್ಷಿಸುತ್ತದೆ!
ಧ್ವಜದ ಪ್ರತಿಯೊಂದು ಅಂಶವೂ ರಾಮರಾಜ್ಯದ ತತ್ವಗಳನ್ನು ನೆನಪಿಸುತ್ತದೆ. ಇದಲ್ಲೇ ಸಂಕಲ್ಪ, ನಂಬಿಕೆ, ಸಂಘರ್ಷ, ತ್ಯಾಗ, ಸಾಧನೆ, ಸಂತರ ಮಾರ್ಗ,ಸಹಭಾಗಿತ್ವ, ಸಮಾಜದ ಒಗ್ಗಟ್ಟುಗಳನ್ನು ಹಿಡಿದಿಟ್ಟುಕೊಂಡಿದೆ. ಇದು ಕೇವಲ ಧ್ವಜವಲ್ಲ, ಯುಗಗಳಿಂದಲೂ ಸಂಗ್ರಹವಾದ ಕರ್ಮ, ಕರ್ತವ್ಯ, ಮತ್ತು ಆಚಾರ-ವಿಚಾರಗಳ ಸಂಗ್ರಹ ಸ್ಮಾರಕ ಎಂದು ಪ್ರಧಾನಿ ಸ್ಮರಿಸಿದರು.
500 ವರ್ಷಗಳ ಅಗ್ನಿಗೆ ಮುಕ್ತಿ ದೊರೆತ ದಿನ: ನಮೋ
ಪಂಚಶತಮಾನಗಳ ಅಗ್ನಿಗೆ ಇಂದು ಶಾಂತಿ ದೊರೆತಿದೆ. ಸತ್ಯ ಧರ್ಮ ಮತ್ತೆ ಸ್ಥಾಪಿತವಾಗಿದೆ, ಎಂದು ಪ್ರಧಾನಿ ಹೇಳಿದರು. ರಾಮನ ಹೆಸರಿನಲ್ಲಿ ವಿಭಜನೆ ಯಾರು ಮಾಡಬಾರದು, ಬದಲಾಗಿ ರಾಮನ ಆದರ್ಶಗಳಾದ, ನ್ಯಾಯ, ನೈತಿಕತೆ, ಕರ್ತವ್ಯಬದ್ಧತೆ, ಸಮಾಜಕ್ಕೆ ಒಂದೇ ದಾರಿ ತೋರಬೇಕೆಂದರು. ಅಯೋಧ್ಯೆ, ರಾಮ ಜನ್ಮತಾಳಿದ, ನಡೆದು ಹೋಗಿದ, ರಾಜನಾದ, ವನಕ್ಕೆ ತೆರಳಿದ ಮತ್ತು ಮರುಹಿಂತಿರುಗಿದ ಪವಿತ್ರ ಭೂಮಿ. ವಶಿಷ್ಠರ ಆಶೀರ್ವಾದ, ಶಬರಿಯ ಮಮತೆ, ಹನುಮಂತನ ಸಮರ್ಪಣೆ, ಅಹಲ್ಯೆಯ ಮುಕ್ತತೆ, ವಾಲ್ಮೀಕಿಯ ಮಾರ್ಗದರ್ಶನ, ಇವೆಲ್ಲಾ ರಾಮಕಥೆಯ ಅಮರ ಮಣಿಗಳು. ಜಟಾಯುವಿನ ತ್ಯಾಗವು ರಾಮಭಕ್ತಿಯ ಶಿಖರ. ಈ ಎಲ್ಲಾ ಸ್ಮೃತಿಗಳು ಇಂದು ನಿರ್ಮಿತವಾಗಿರುವ ರಾಮಮಂದಿರದ ಪ್ರತಿಯೊಂದು ಕಲ್ಲಿನಲ್ಲಿ ಸ್ಪಂದಿಸುತ್ತಿವೆ ಎಂದು ಭಾವನಾತ್ಮಕವಾಗಿ ಬಣ್ಣಿಸಿದರು.

ಭಾರತ ಕಣದಲ್ಲೂ ರಾಮನಿದ್ದಾನೆ!
ಭಾರತದ ಪ್ರತಿಯೊಂದು ಕಣದಲ್ಲೂ ರಾಮನಿದ್ದಾನೆ. ನಮ್ಮ ಲೋಕತಂತ್ರ ಭಾರತೀಯರಿಗೆ ಜನ್ಮಸಹಿತ ಬಂದಿದೆ. ಭಾರತೀಯ ಸಂಸ್ಕೃತಿಯ ಮೂಲತತ್ವಗಳ ಪ್ರತಿಬಿಂಬ. ಬಸವಣ್ಣ, ವಾಲ್ಮೀಕಿ, ತುಳಸೀದಾಸ್ ಮುಂತಾದ ಮಹನೀಯರ ದಾರಿಯಲ್ಲಿ ನಾವೂ ನಡೆಯಬೇಕು, ಎಂದು ಹೇಳಿದರು. ಅಲ್ಲದೇ ನಮಗೆ ಸ್ವತಂತ್ರ್ಯ ದೊರೆತಿದೆ ಆದರೆ ನಮ್ಮಲ್ಲಿನ ಹೀನ ಮನಸ್ಥಿಯಲ್ಲಿ ದೂರವಾಗಿಲ್ಲ. ಅದೂ ದೂರವಾಗಿ ಸ್ವಾಭಿಮಾನ ಬಂದು ನಿಲ್ಲಲಿ ಎಂದು ಉದ್ಗರಿಸಿದರು.
ನನಸಾಗುತ್ತದೆ ವಿಕಸಿತ ಭಾರತದ ಕನಸು!
2047ರ ವಿಕಸಿತ ಭಾರತ ಎನ್ನುವ ಸಂಕಲ್ಪಕ್ಕೆ, ಕಳೆದ 11 ವರ್ಷಗಳಲ್ಲಿ ಮಹಿಳಾ, ದಲಿತ, ಹಿಂದುಳಿದ, ಅತಿ ಹಿಂದುಳಿದ ವರ್ಗಗಳ ಅಭಿವೃದ್ಧಿಯ ಪ್ರಯತ್ನಗಳು ಬೆಂಬಲ ಕೊಟ್ಟಿವೆ ಎಂದು ವಿವರಿಸಿದರು.

Nimma Suddi
the authorNimma Suddi
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";