ಮುಂಬೈ: ಸ್ಮೃತಿ ಮಂಧಾನಾ ತನ್ನ ತಂದೆಯ ಅನಾರೋಗ್ಯದ ಕಾರಣ ನೀಡಿ ತನ್ನ ಮದುವೆಯನ್ನು ಮುಂದೂಡುವುದಾಗಿ ಘೋಷಿಸಿದಾಗ, ತೆರೆಮರೆಯಲ್ಲಿ ಏನು ನಡೆಯುತ್ತಿದೆ ಎಂದು ಯಾರಿಗೂ ತಿಳಿದಿರಲಿಲ್ಲ. ಆದರೀಗ ಬಳಿಕ ನಡೆಡೆದ ಬೆಳವಣಿಗೆಗಳು ಹಲವು ಊಹಾಪೋಹಗಳನ್ನು ಸೃಷ್ಟಿಸಿವೆ.
ಹೌದು ಪಲಾಶ್ ಮುಚ್ಚಲ್ ಅವರೊಂದಿಗೆ ಯುವತಿಯೊಬ್ಬಳು ನಡೆಸಿದ ಚಾಟ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ, ವರದಿಗಳ ಪ್ರಕಾರ ಸ್ಮೃತಿ ತನ್ನ ಸಂಗೀತ ಸಂಯೋಜಕ ಪಲಾಶ ದ್ರೋಹವನ್ನು ಕಂಡುಕೊಂಡ ನಂತರ ಅವನೊಂದಿಗಿನ ಮದುವೆಯನ್ನು ಮುರಿದುಕೊಂಡಿದ್ದಾರೆನ್ನಲಾಗಿದೆ. ಯಾರಿಗೂ ಸತ್ಯ ತಿಳಿದಿಲ್ಲವಾದರೂ, ಆರ್‌ಜೆ ಮಹ್ವಿಶ್ ಈ ವಿಚಾರವಾಗಿ ಮಧ್ಯಪ್ರವೇಶಿಸಿದ್ದಾರೆ. ಭಾರತೀಯ ತಂಡದ ಸ್ಟಾರ್ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ಅವರ ಗೆಳತಿ ಎಂದು ಹೇಳಲಾಗುವ ಆರ್‌ಜೆ ಮಹ್ವಿಶ್ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ, ಅದರಲ್ಲಿ ಅವರು ಹಾಸ್ಯಮಯ ರೀತಿಯಲ್ಲಿ ಇಡೀ ಪುರುಷ ಸಮುದಾಯವನ್ನು ಕೆಣಕಿದ್ದಾರೆ. ತನ್ನ ಗೆಳೆಯ ಯಾವುದೇ ಹುಡುಗಿಗೆ ಸಂದೇಶ ಕಳುಹಿಸಿದರೆ, ಸ್ಕ್ರೀನ್‌ಶಾಟ್‌ಗಳನ್ನು ವೈರಲ್ ಮಾಡುತ್ತೇನೆ ಎಂದು ಮಹ್ವಿಶ್ ಹೇಳಿದ್ದಾರೆ.
ಪಲಾಶ್ ಮತ್ತು ಸ್ಮೃತಿ ವಿವಾಹದಲ್ಲಿ ನಡದಿದ್ದೇನು?
ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಸ್ಮೃತಿ ಮಂಧಾನ ಮತ್ತು ಸಂಗೀತ ಸಂಯೋಜಕ ಪಲಾಶ್ ಮುಚ್ಚಲ್ ನವೆಂಬರ್ 23 ರಂದು ವಿವಾಹವಾಗಬೇಕಿತ್ತು. ಆದಾಗ್ಯೂ, ಸ್ಮೃತಿ ಅವರ ತಂದೆ ಆಸ್ಪತ್ರೆಗೆ ದಾಖಲಾಗಿರುವುದರಿಂದ ವಿವಾಹವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ ಎಂಬ ಸುದ್ದಿ ಹೊರಬಿತ್ತು. ಎಲ್ಲವೂ ಸರಿಯಾಗಿದ್ದಂತೆ ತೋರುತ್ತಿತ್ತು, ಆದರೆ ಪಲಾಶ್ ಅವರೊಂದಿಗಿನ ಅವರ ವಿವಾಹಕ್ಕೆ ಸಂಬಂಧಿಸಿದ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳನ್ನು ಸ್ಮೃತಿ ಡಿಲೀಟ್ ಮಾಡಿದಾಗ ವಿಷಯಗಳು ತಿರುವು ಪಡೆದುಕೊಂಡವು.
ಏತನ್ಮಧ್ಯೆ, ಸಾಮಾಜಿಕ ಮಾಧ್ಯಮದಲ್ಲಿ ಚಾಟ್‌ಗಳ ಸ್ಕ್ರೀನ್‌ಶಾಟ್‌ಗಳು ವೈರಲ್ ಆದವು, ಪಲಾಶ್ ನೃತ್ಯ ಸಂಯೋಜಕರೊಂದಿಗೆ ಚೆಲ್ಲಾಟದ ಸಂದೇಶಗಳನ್ನು ವಿನಿಮಯ ಮಾಡಿಕೊಳ್ಳುತ್ತಿರುವುದು ವೈರಲ್ ಆಗಿದೆ. ಪಲಾಶ್ ಅವರ ಹಿನ್ನೆಲೆ ಗಾಯಕಿ ಸಹೋದರಿ ಪಲಾಕ್, ವಧುವಿನ ತಂದೆಯ ಆರೋಗ್ಯದ ಕಾರಣದಿಂದಾಗಿ ಮದುವೆಯನ್ನು ಮುಂದೂಡಲಾಗಿದೆ ಎಂದು ಹೇಳುವ ಮೂಲಕ ಊಹಾಪೋಹಗಳನ್ನು ಶಮನಗೊಳಿಸಲು ಪ್ರಯತ್ನಿಸುತ್ತಾ ಒಂದು ಸಣ್ಣ ಮಾಹಿತಿನು ಹಂಚಿಕೊಂಡಿದ್ದಾರೆ. ಆದಾಗ್ಯೂ, ಸ್ಮೃತಿ ಅಥವಾ ಪಲಾಶ್ ಇಬ್ಬರೂ ಈ ವಿಷಯದ ಬಗ್ಗೆ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.






