ನಿಮ್ಮ ಸುದ್ದಿ ಬೆಂಗಳೂರು
ಬೆಂಗಳೂರಿನಲ್ಲಿ 9 ನೇ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಹಾಗೂ ಕೈಮಗ್ಗ ನೇಕಾರರರಿಗೆ ರಾಜ್ಯಮಟ್ಟದ ಪ್ರಶಸ್ತಿ ಪ್ರಧಾನ ಸಮಾರಂಭವು ಅತಿ ವಿಜ್ರಂಭಣೆಯಿಂದ ಜರಗಿತು.
ಕಾರ್ಯಕ್ರಮದ ಉದ್ಘಾಟಕರಾಗಿ ಜವಳಿ ಮತ್ತು ಸಕ್ಕರೆ ಕಬ್ಬು ಅಭಿವೃದ್ಧಿ ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವರಾದ ಸನ್ಮಾನ್ಯ ಶ್ರೀ ಶಿವಾನಂದ ಎಸ್ ಪಾಟೀಲ್ ರವರು ಉದ್ಘಾಟನಾ ಭಾಷಣ ನೆರವೇರಿಸಿದರು.
ಈ ಸಂದರ್ಭದಲ್ಲಿ ಕೈಮಗ್ಗ ಕುರಿತು ಸಮಗ್ರವಾಗಿ ವೀಕ್ಷಣೆ ಮಾಡಿ ನೇಕಾರಿಕೆ ಕುರಿತು ಪರಿಶೀಲನೆ ಮಾಡಿದರು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ದೇವಾಂಗದ ಸಂಘದ ರಾಜ್ಯಾಧ್ಯಕ್ಷರಾದ ಸನ್ಮಾನ್ಯ ಶ್ರೀ ರವೀಂದ್ರ ಪಿ ಕಲಬುರ್ಗಿ ಅವರು ಎಳೆ ಎಳೆಯಾಗಿ ನೇಕಾರಿಕೆಯ ಕುರಿತು ಪ್ರಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದ ಅತಿಥಿಗಳಾಗಿ ಕಾವೇರಿ ಹ್ಯಾಂಡಲೂಮ್ ಅಧ್ಯಕ್ಷರಾದ ಮಾನ್ಯಶ್ರೀ ಬಿ ಜೆ ಗಣೇಶ ಕೈಮಗ್ಗ ಮತ್ತು ಜವಳಿ ಇಲಾಖೆ ಆಯುಕ್ತರಾದ ಸನ್ಮಾನ್ಯ ಶ್ರೀ ಟಿ ಎಚ್ ಎಂ ಕುಮಾರ ಹಾಗೂ ರಾಜ್ಯದ ನೇಕಾರ ಬಾಂಧವರು, ಅಧಿಕಾರಿಗಳು, ಮಾಧ್ಯಮ ಪ್ರತಿನಿಧಿಗಳು ಭಾಗಿಯಾಗಿದ್ದರು.