This is the title of the web page
This is the title of the web page

Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

Local NewsState News

ಕರ್ಣಾಟಕ ಬ್ಯಾಂಕ್ ಮಾಜಿ ಅಧ್ಯಕ್ಷ ಜಯರಾಮ ಭಟ್ ನಿಧನ*

ಕರ್ಣಾಟಕ ಬ್ಯಾಂಕ್ ಮಾಜಿ ಅಧ್ಯಕ್ಷ ಜಯರಾಮ ಭಟ್ ನಿಧನ*

*ಕರ್ಣಾಟಕ ಬ್ಯಾಂಕ್ ಮಾಜಿ ಅಧ್ಯಕ್ಷ ಜಯರಾಮ ಭಟ್ ನಿಧನ*
ಮಂಗಳೂರು: ಕರ್ಣಾಟಕ ಬ್ಯಾಂಕಿನ ಮಾಜಿ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಪೊಳಲಿ ಜಯರಾಮ ಭಟ್(72) ಹೃದಯಾಘಾತದಿಂದ ಬುಧವಾರ ನಿಧನರಾದರು.
ಮುಂಬಯಿಯಲ್ಲಿ ಹಣಕಾಸು ಸಂಸ್ಥೆಯ ಮಹಾಸಭೆಯಲ್ಲಿ ಪಾಲ್ಗೊಂಡು ಮಂಗಳೂರಿಗೆ ವಿಮಾನದಲ್ಲಿ ಆಗಮಿಸಿ, ವಿಮಾನ ನಿಲ್ದಾಣದಲ್ಲಿ ಇಳಿದು ಡೊಮೆಸ್ಟಿಕ್ ಬ್ಯಾಗೇಜ್ ಬೆಲ್ಟ್ ಬಳಿ ಎದೆನೋವಿನಿಂದ ಕುಸಿದಿದ್ದರು. ತಕ್ಷಣ ಅವರನ್ನು ಆ್ಯಂಬುಲೆನ್ಸ್ ಮೂಲಕ ನಗರದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
ದಕ್ಷಿಣ ಕನ್ನಡ ಜಿ¯್ಲೆಯ ಪೊಳಲಿಯವರದ ಜಯರಾಮ ಭಟ್, ನಾಲ್ಕೂವರೆ ದಶಕಗಳಿಗೂ ಮೀರಿದ ಸುದೀರ್ಘ ಜೀವನವನ್ನು ಬ್ಯಾಂಕಿAಗ್ ವೃತ್ತಿಯಲ್ಲಿ ಸವೆಸಿ, ನಿವೃತ್ತರಾಗಿದ್ದರು. ಅವರಿಗೆ ಪತ್ನಿ ಶುಭಾ, ಪುತ್ರಿ ಚೈತ್ರಾ ಮತ್ತು ಪುತ್ರ ಚೇತನ್ ಇದ್ದಾರೆ.
ಮೈಸೂರು ವಿಶ್ವವಿದ್ಯಾನಿಲಯದಿಂದ ರಸಾಯನಶಾಸ್ತçದಲ್ಲಿ ಪ್ರಥಮ ರ‍್ಯಾಂಕಿನೊAದಿಗೆ ಸ್ನಾತಕೋತ್ತರ ಪದವಿ ಪೂರೈಸಿದ್ದ ಅವರು, 1973ರಲ್ಲಿ ಖಾಸಗಿ ರಂಗದ ಕರ್ಣಾಟಕ ಬ್ಯಾಂಕಿನ ಅಧಿಕಾರಿಯಾಗಿ ತಮ್ಮ ವೃತ್ತಿ ಜೀವನ ಆರಂಭಿಸಿದ್ದರು. ಕ್ರಮೇಣ ಬ್ಯಾಂಕಿನ ವಿವಿಧ ಹುz್ದÉಗಳಿಗೆ ಬಡ್ತಿ ಹೊಂದಿದ್ದರು. 2009ರ ಜುಲೈನಿಂದ ೨೦೧೭ರ ಏಪ್ರಿಲ್ ವರೆಗೆ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕರಾಗಿ ಹಾಗೂ ನಂತರ ಬ್ಯಾಂಕಿನ ಅಧ್ಯಕ್ಷರಾಗಿಯೂ ಕಾರ್ಯನಿರ್ವಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.
ಬ್ಯಾಂಕಿನ ವಿವಿಧ ಕಾರ್ಯಕ್ಷೇತ್ರಗಳಲ್ಲಿ ಅಪಾರ ಅನುಭವ ಹೊಂದಿರುವ ಜಯರಾಮ ಭಟ್, ಭಾರತೀಯ ಬ್ಯಾಂಕುಗಳ ಒಕ್ಕೂಟ (ಐಬಿಎ)ದ ಆಡಳಿತ ಸಮಿತಿ ಸದಸ್ಯರಾಗಿ ನಾಲ್ಕು ವರ್ಷ ಕಾರ್ಯನಿರ್ವಹಿಸಿದ್ದರು. ಸದರ್ನ್ ಇಂಡಿಯಾ ಬ್ಯಾಂಕ್ ಸ್ಟಾಫ್ ಟ್ರೆÊನಿಂಗ್ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷರಾಗಿ 2019ರ ಆ.31ದ 2021 ಅ.8ರ ತನಕ ಕಾರ್ಯನಿರ್ವಹಿಸಿದ್ದರು.
ಕರ್ಣಾಟಕ ಬ್ಯಾಂಕಿನ ಎಂಡಿಯಾಗಿದ್ದ ಸಂದರ್ಭದಲ್ಲಿ ಬ್ಯಾಂಕಿಗೆ, ಐಡಿಬಿಆರ್‌ಟಿ, ಐಬಿಎ, ಸಿಐಎಂಎಸ್‌ಎAಇ, ಅಸ್ಸೊಚಾಮ್ ಮುಂತಾದ ಪ್ರತಿಷ್ಠಿತ ಸಂಸ್ಥೆಗಳಿAದ ಕೊಡಲ್ಪಡುವ ಮಾಹಿತಿ ತಂತ್ರe್ಞÁನ, ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ, ಸಣ್ಣ ಹಾಗೂ ಮಧ್ಯಮ ಉದ್ದಿಮೆಗಳ ಸಾಲ ನೀಡಿಕೆಯ ರಂಗ ಇತ್ಯಾದಿಗಳಲ್ಲಿ ಹಲವಾರು ಪ್ರಶಸ್ತಿಗಳು ಬಂದಿದ್ದವು.
ಬ್ಯಾAಕಿನಲ್ಲಿ ೪೮ ವರ್ಷಗಳಿಗೂ ಮಿಕ್ಕಿದ ಸುದೀರ್ಘ ಸೇವೆ ಸಲ್ಲಿಸಿರುವ ಅವರು, ೨೦೧೭ರ ಏ.೧೨ರಿಂದ ೨೦೨೧ರ ನ.೧೩ರ ತನಕ ಬ್ಯಾಂಕಿನ ೧೦ನೇ ಅಧ್ಯಕ್ಷ ಪದವಿಯನ್ನು ಯಶಸ್ವಿಯಾಗಿ ಪೂರೈಸಿ, ೨೦೨೧ರ ನ.೧೩ರಂದು ಸೇವಾ ನಿವೃತ್ತರಾಗಿದ್ದರು.
ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕರ್ಸ್ ಸರ್ಟಿಫೈಡ್ ಅಸೋಸಿಯೇಟ್ ಕೂಡಾ ಆಗಿದ್ದರು. ನಿವೃತ್ತಿ ಬಳಿಕ ಕರ್ಣಾಟಕ ಬ್ಯಾಂಕಿನ ಸಹವರ್ತಿ ಸಂಸ್ಥೆ ಯುನಿವರ್ಸಲ್ ಸೊಂಪೊ ಜನರಲ್ ಇನ್ಶೂರೆನ್ಸ್ ಕಂಪನಿ ಲಿ.ನ ಆಡಳಿತ ಮಂಡಳಿಯಲ್ಲಿ ಬ್ಯಾಂಕಿನ ನಾಮನಿರ್ದೇಶಿತ ನಿರ್ದೇಶಕರಾಗಿದ್ದರು.
ಪಿ.ಜಯರಾಮ ಭಟ್ ಅವರಿಗೆ ಆರ್ಯಭಟ, ಔಟ್‌ಸ್ಟಾ÷್ಯಂಡಿAಗ್, ಸಿಇಒ ವಿದ್ ಎಚ್.ಆರ್. ಓರಿಯೆಂಟೇಶನ್, ಟಿಎ ಪೈ ಸ್ಮಾರಕ ಶ್ರೇಷ್ಠ ಬ್ಯಾಂಕರ್, ಎ ಶಾಮರಾವ್ ಔಟ್‌ಸ್ಟಾ÷್ಯಂಡಿAಗ್ ಅಚೀವ್‌ಮೆಂಟ್, ಪರಮಾನುಗ್ರಹ, ನರಸಿಂಹ, ವಂದನಾ, ಯಡ್ತರೆ ಮಂಜಯ್ಯ ಶೆಟ್ಟಿ ಸ್ಮಾರಕ ಮತ್ತಿತರ ಹಲವಾರು ಪ್ರಶಸ್ತಿಗಳು ಲಭಿಸಿವೆ.
ಗಣ್ಯರ ಸಂತಾಪ: ಜಯರಾಮ ಭಟ್ ಅವರ ನಿಧನಕ್ಕೆ ಸಂಸದ ನಳಿನ್ ಕುಮಾರ್ ಕಟೀಲ್, ವಿಧಾಸಭೆ ಸ್ಪೀಕರ್ ಯು.ಟಿ.ಖಾದರ್, ಶಾಸಕರಾದ ಡಿ.ವೇದವ್ಯಾಸ ಕಾಮತ್, ಹರೀಶ್ ಕುಮಾರ್, ಡಾ.,ಭರತ್ ಶೆಟ್ಟಿö, ರಾಜೇಶ್ ನಾಯ್ಕ್ö, ಪ್ರಮುಖರಾದ ಪ್ರೊ.ಎಂ.ಬಿ. ಪುರಾಣಿಕ್, ಡಾ.ಹರಿಕೃಷ್ಣ ಪುನರೂರು ಸೇರಿದಂತೆ ಹಲವಾರು ಗಣ್ಯರು ಸಂತಾಪ ಸೂಚಿಸಿದ್ದಾರೆ.
——-
ಇಂದು ಅಂತಿಮ ಸಂಸ್ಕಾರ
ಮAಗಳೂರು: ಬುಧವಾರ ನಿಧನರಾದ ಪಿ.ಜಯರಾಮ ಭಟ್ ಅವರ ಸಾರ್ವಜನಿಕ ಅಂತಿಮ ದರ್ಶನವು ಆ.10ರಂದು ಬೆಳಗ್ಗೆ 8ರಿಂದ 9ರ ತನಕ ಕುಂಟಿಕಾನದ ಎ.ಜೆ. ಆಸ್ಪತ್ರೆ ಆವರಣದಲ್ಲಿ ನಡೆಯಲಿದೆ. ಬಳಿಕ 10 ಗಂಟೆಗೆ ಕದ್ರಿ ರುದ್ರಭೂಮಿಯಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ ಎಂದು ಅವರು ಕುಟುಂಬದ ಮೂಲಗಳು ತಿಳಿಸಿವೆ.

Nimma Suddi
";