ಬಾಗಲಕೋಟೆ:
ನವ ಪಿಳಿಗೆಗಾಗಿ ಹೊಸ ಭಾರತ ನಿರ್ಮಾಣದ ಗುರಿ ನಮ್ಮದಾಗಿದೆ,ಜಗತ್ತಿನ ಕಣ್ಣು ಭಾರತದತ್ತ ಇದೆ ಎಂದು ಸಂಸದ ಪಿ.ಸಿ.ಗದ್ದಿಗೌಡರ ಹೇಳಿದರು.
ಅವರು ಬಾಗಲಕೋಟೆ ನಗರದಲ್ಲಿನ ಶೀವಾನಂದ ಜೀನ್ ನಲ್ಲಿರುವ ಭಾರತೀಯ ಜನತಾ ಪಾರ್ಟಿಯ ಕಾರ್ಯಾಲಯದ ಆವರಣದಲ್ಲಿ ೭೭ ನೇ ಸ್ವಾತಂತ್ರö್ಯ ದಿನಾಚರಣೆ ಅಂಗವಾಗಿ ರಾಷ್ಟ್ರ ದ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದರು.
ಸಹಸ್ರಾರು ಮಹನಿಯರ ಪ್ರಾಣ ತ್ಯಾಗದ ಬಲಿದಾನದಿಂದ ನಮಗೆ ಸ್ವಾತಂತ್ರö್ಯ ಸಿಕ್ಕಿದೆ ಅವರೆಲ್ಲರು ನಮಗೆ ಸದಾಕಾಲ ಸ್ಮರಣಿಯರು, ಪ್ರಧಾನಿ ಮೋದಿಯವರು ಭಾರತದ ಸರ್ವಾಂಗೀಣ ಅಭಿವೃದ್ದಿ ಮೂಲಕ ಸಡೃದ ಗೊಳಿಸುವತ್ತ ಕೆಲಸ ಮಾಡುತ್ತಿದ್ದಾರೆ, ಆ ನಿಟ್ಟಿನಲ್ಲಿ ಇಡಿ ಜಗತ್ತು ಭಾರತದತ್ತ ತಿರುಗಿ ನೋಡುತ್ತಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಪ್ರಧಾನಿ ಮೋದಿಯವರು ಭಾರತದ ಕಾಶ್ಮೀರದಲ್ಲಿ ೩೭೦ ನೇ ಕಲಂ ತೆಗೆದು ಹಾಕಿ ಅಲ್ಲಿ ಶಾಂತಿ ನೆಲೆಸುವಂತೆ ಮಾಡಿದರು. ಅಲ್ಲದೆ ಮುಂದಿನ ದಿನಗಳಲ್ಲಿ ಪಾಕ್ ಆಕ್ರಮಿತ ಕಾಶ್ಮೀರವನ್ನು ನಮ್ಮ ದೇಶದಲ್ಲಿ ವಿಲೀನವಾಗುವ ಎಲ್ಲ ಸಾಧ್ಯತೆಗಳು ಇವೆ, ನೆನೆಗುದಿಗೆ ಬಿದ್ದಿದ್ದ ಅಯೋದ್ಯಾ ರಾಮ ಮಂದಿರ ನಿರ್ಮಾಣಗೊಳ್ಳುತ್ತಿದ್ದು ಜನವೇರಿ ೨೪ರಂದು ಅದು ಉದ್ಘಾಟನೆಗೊಳ್ಳಲಿದೆ, ಕಾಶಿ ವಿಶ್ವನಾಥನ ಮಂದಿರ,ಉಜ್ಜಯಿನಿ ಮಹಾಂಕಾಳೇಶ್ವರ ಮಂದಿರಗಳ ಜೀರ್ಣೋದ್ದಾರ ಮಾಡಿದ್ದಾರೆ, ಮುಂದೆ ಯಸಿಸಿ ಬರುವುದಿದೆ, ಅದಕ್ಕೆ ಲಕ್ಷಾಂತರ ಸಲಹೆಗಳ ಬಂದಿದ್ದು, ಬಹುಷ ನವೆಂಬರ ಅಧಿವೇಶನಲ್ಲಿ ಒಂದು ದೇಶ ಒಂದು ಕಾನೂನು ಜಾರಿಗೆ ಬರುವ ಲಕ್ಷಣಗಳು ಇವೆ, ಮುಂದಿನ ೨೪ ರಿಂದ೨೯ ವಿಶೇಷ ಅವಧಿ ನಮ್ಮ ಪ್ರಧಾನಿ ಮೋದಿಯವರದಾಗಿದ್ದು ಮುಂಬರುವ ಚುನಾವಣೆಯಲ್ಲಿ ಬಾಗಲಕೋಟೆಯಿಂದ ಸಂಸದರನ್ನು ಗೆಲ್ಲಿಸಿಕೊಡುವುದರ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ಕೈಗಳನ್ನು ಬಲಪಡಿಸೋಣ ಎಂದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ತ್ ಮಾಜಿ ಸದಸ್ಯ ನಾರಾಯಣಸಾ ಭಾಂಡಗೆ, ಜಿಲ್ಲಾ ಉಪಾಧ್ಯಕ್ಷ ಅಶೋಕ ಲಿಂಬಾವಳಿ,ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ,ರಾಜು ರೇವಣಕರ,ಬಸವರಾಜ ಯಂಕಂಚಿ, ಮಾದ್ಯಮ ವಕ್ತಾರ ಸತ್ಯನಾರಾಯಣ ಹೇಮಾದ್ರಿ,ಸದಾನಂದ ನಾರಾ, ಶಿವಾನಂದ ಟವಳಿ,ನಗರಸಭೆ ಸದಸ್ಯೆ ಜ್ಯೋತಿ ಭಜಂತ್ರಿ,ಶೋಭಾ ರಾವ್,ಶಶಿಕಲಾ ಮಜ್ಜಗಿ,ಸುರೇಶ ಕೊಣ್ಣರು,ಬಸವರಾಜ ಹುನಗುಂದ,ಉಮೇಶ ಹಂಚಿನಾಳ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಕಾರ್ಯಕ್ರಮಕ್ಕೂ ಮುಂಚೆ ನಗರದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು.
ಮುಂದಿನ ದಿನಗಳಲ್ಲಿ ಪಾಕ್ ಆಕ್ರಮಿತ ಕಾಶ್ಮೀರವನ್ನು ನಮ್ಮ ದೇಶದಲ್ಲಿ ವಿಲೀನವಾಗುವ ಎಲ್ಲ ಸಾಧ್ಯತೆಗಳು ಇದ್ದು ನವ್ಹಂಬರ ಅಧಿವೇಶನಲ್ಲಿ “ಒಂದು ದೇಶ ಒಂದು ಕಾನೂನು” ಜಾರಿಗೆ ಬರುವ ಲಕ್ಷಣಗಳು ಇವೆ ಎಂದು ಡಾ.ವೀರಣ್ಣ ಚರಂತಿಮಠ ಮಾಜಿ ಶಾಸಕರು ಹೇಳಿದರು.