This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

Education NewsNational NewsState News

ಶಸ್ತçಚಿಕಿತ್ಸೆ ನಂತರ ತಿರಂಗಾ ಹಾರಿಸಿದ ಶತಾಯುಷಿ

ಶಸ್ತçಚಿಕಿತ್ಸೆ ನಂತರ ತಿರಂಗಾ ಹಾರಿಸಿದ ಶತಾಯುಷಿ

ಬಾಗಲಕೋಟೆ

ಶಸ್ತ್ರ ಬಂದಿದ್ದ ಶತಾಯುಷಿ ಮಹಿಳೆಯೊಬ್ಬರು ಗುಣಮುಖರಾಗಿ ಆಸ್ಪತ್ರೆಯಲ್ಲಿ ಧ್ವಜಾರೋಹಣ ನೆರವೇರಿಸಿದ ಅಪರೂಪದ ಘಟನೆ ನಗರದ ವಾಸನದ ಆಸ್ಪತ್ರೆಯಲ್ಲಿ ಮಂಗಳವಾರ ನಡೆದಿದೆ.

ಕಾಶಮ್ಮ ಹಿರೇಮಠ (೧೦೩ ವರ್ಷ) ಧ್ವಜಾರೋಹಣ ನೆರವೇರಿಸಿದವರು.

ಬಾಗಲಕೋಟೆ ತಾಲೂಕಿನ ತಳಗಿಹಾಳ ಗ್ರಾಮದ ಇವರು ಕೆಲವು ದಿನಗಳ ಹಿಂದೆ ಆಯತಪ್ಪಿ ಬಿದ್ದಿದ್ದರು. ಎಡ ಭಾಗದ ಚಪ್ಪೆ ಮುರಿದಿತ್ತು. ಆಸ್ಪತ್ರೆಗೆ ಬಂದಾಗ ಅಜ್ಜಿಯ ಹೆಮೊಗ್ಲೋಬಿನ್ ಕಡಿಮೆ ಇದ್ದದ್ದರಿಂದ ಎರಡು ಪಾಯಿಂಟ್ ರಕ್ತ ನೀಡಿಲಾಯಿತು.

ನಂತರ ಆ.೧೦ರಂದು ಆಸ್ಪತ್ರೆಯ ಎಲುಬು ಕೀಲು ತಜ್ಞ ಡಾ.ಗಿರೀಶ ವಾಸನದ ಶಸ್ತçಚಿಕಿತ್ಸೆ ನಡೆಸಿದರು. ಸದ್ಯ ಅಜ್ಜಿ ಚೇತರಿಸಿಕೊಂಡಿದ್ದು ವಾಕರ್ ಸಹಾಯದಿಂದ ಆಸ್ಪತ್ರೆಯಲ್ಲಿ ನಡೆದಾಡುತ್ತಿದ್ದಾರೆ.

ನೂರಾಮೂರು ವರ್ಷದಲ್ಲೂ ಅಜ್ಜಿ ಆತ್ಮವಿಶ್ವಾಸದಿಂದ ಶಸ್ತçಚಿಕಿತ್ಸೆಗೆ ಸಹಕರಿಸಿದರು. ಅಷ್ಟು ವಯಸ್ಸಿನಲ್ಲೂ ಸ್ವಾವಲಂಬಿಯಾಗಿ ನಡೆದಾಡಬೇಕು ಎಂಬ ಛಲವಿರುವ ಶತಾಯುಷಿಯನ್ನು ಕಂಡು ಹೆಮ್ಮೆ ಎನಿಸಿತು. ಆದ್ದರಿಂದ ಅವರಿಂದಲೇ ನಮ್ಮ ಆಸ್ಪತ್ರೆಯಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು. ನಮ್ಮ ಆಸ್ಪತ್ರೆಗೆ ರೋಗಿಯಾಗಿ ಬಂದು ಶಸ್ತçಚಿಕಿತ್ಸೆ ಪಡೆದ ನಂತರ ಅಜ್ಜಿ ಮುಖ್ಯ ಅತಿಥಿಯಾಗಿ ಧ್ವಜಾರೋಹಣ ನೆರವೇರಿಸಿ ಮರಳುತ್ತಿದ್ದಾರೆ. ಈ ಬಾರಿ ನಮ್ಮ ಆಸ್ಪತ್ರೆಯ ಸ್ವಾತಂತ್ರೊವಕ್ಕೆ ಹೊಸ ಮೆರಗು ತಂದಿದ್ದಾರೆ ಎಂದು ಡಾ.ವಾಸನದ ತಿಳಿಸಿದ್ದಾರೆ.

ಎಲುಬು ಕೀಲು ತಜ್ಞ ಡಾ.ಹರ್ಷಾ ಕ್ಯಾಲಕೊಂಡ, ಅರಿವಳಿಕೆ ತಜ್ಞೆ ಡಾ.ಶಿಲ್ಪಾ ಮಾಸೂರ, ಹೃದಯರೋಗ ತಜ್ಞ ಡಾ.ಎಂ.ಜಿ.ಹೆರಕಲ್, ಡಾ.ರವೀಂದ್ರ ಕುಲಕರ್ಣಿ, ಶುಶ್ರೂಷಕರಾದ ಮೋಹನ್ ಜೋಶಿ, ಪರಶುರಾಮ ದೊಡಮನಿ, ರೇಣುಕಾ ಕರಬಾನಿ, ಸತೀಶ ಸಿಂಗದ, ಮಂಜುನಾಥ ಹಾಗೂ ಇತರರು ಶಸ್ತçಚಿಕಿತ್ಸೆಗೆ ಸಹಕರಿಸಿದ್ದಾರೆ.

ಕೋಟ್ಸ್..

*ಚಪ್ಪೆ ಮುರಿತದ ಸಮಸ್ಯೆಯನ್ನು ವೈದ್ಯಕೀಯ ಭಾಷೆಯಲ್ಲಿ ಫ್ರಾö್ಯಕ್ಚರ್ ನೆಕ್ ಆಫ್ ಫೀಮರ್ ಎನ್ನುತ್ತಾರೆ. ಅಜ್ಜಿಗೆ ೧೦೩ ವರ್ಷಗಳಾಗಿದ್ದರಿಂದ ಶಸ್ತçಚಿಕಿತ್ಸೆ ನಡೆಸುವುದು ಸವಾಲಿನ ಕೆಲಸವಾಗಿತ್ತು. ಬಿದ್ದ ನಂತರ ಮನೆಯಲ್ಲಿ ಒಂದೆರಡು ದಿನ ಅವರು ಓಡಾಡದೆ ಒಂದೇ ಕಡೆ ಮಲಗಿದ್ದರಿಂದ ಗಾಯ (ಬೆಡ್ ಸೋರ್) ಕೂಡ ಆಗಿದ್ದವು. ಎಲ್ಲ ಕೆಲಸಕ್ಕೂ ಇನ್ನೊಬ್ಬರನ್ನು ಅವಲಂಬಿಸುವAತಾಯಿತು ಎಂದು ಅಜ್ಜಿ ಕುಗ್ಗಿದ್ದರು. ನಾನು ಮತ್ತೆ ಮೊದಲಿನಂತೆ ನಡೆದಾಡುಬೇಕು ಎಂದು ಆತ್ಮವಿಶ್ವಾಸ ತೋರಿದ್ದರಿಂದ ಶಸ್ತçಚಿಕಿತ್ಸೆ ನಡೆಸಲಾಯಿತು. ಸದ್ಯ ಗಾಯವೂ ವಾಸಿಯಾಗಿ ಗುಣಮುಖರಾಗಿದ್ದಾರೆ. ೬೦ ವರ್ಷ ಮೇಲ್ಪಟ್ಟವರು ಆಯತಪ್ಪಿ ಬಿದ್ದು ಮೂಳೆ ಮುರಿತಕ್ಕೆ ಒಳಗಾಗುವುದು ಸಾಮಾನ್ಯ. ಆದರೆ ಗಾಯಾಳು ಅಥವಾ ಅವರ ಸಂಬAಧಿಕರು ಧೈರ್ಯ ಕಳೆದುಕೊಳ್ಳದೆ ಆಸ್ಪತ್ರೆಗೆ ಬಂದರೆ ಸೂಕ್ತ ಚಿಕಿತ್ಸೆ ನೀಡಲು ಸಾಧ್ಯ*

– ಡಾ.ಗಿರೀಶ ವಾಸನದ, ಎಲುಬು ಕೀಲು ತಜ್ಞ, ಬಾಗಲಕೋಟೆ

";