ಬಾಗಲಕೋಟೆ
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ನಿಸರ್ಗ ಸಂಗೀತ ವಿದ್ಯಾಲಯ ಹಾಗೂ ರಂಗ ಕಲಾವಿದರ ಸಂಘ(ರಿ )ಹನುಮಸಾಗರ. ನಿಸರ್ಗ ಸಂಗೀತ ಶಾಲೆಯ 23ನೇ ವರ್ಷದ ಸವಿನೆನಪಿಗಾಗಿ,ದಿವಂಗತ ಶ್ರೀ ಪಿ ಬಿ ಧುತ್ತರಗಿ ಹಾಗೂ ಶ್ರೀಮತಿ ಸರೋಜಮ್ಮ ಧುತ್ತರಗಿ ಸ್ಮರಣಾರ್ಥ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ರಾಜ್ಯಮಟ್ಟದ ಪ್ರಶಸ್ತಿ ಪ್ರಧಾನ ಸಮಾರಂಭದ ಪ್ರಯುಕ್ತ, ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ ಹಿರೇಮಾಗಿ ಗ್ರಾಮದ ಶಿಕ್ಷಕರಾಗಿರುವ *ಶ್ರೀ ಮುತ್ತು.ಯ.ವಡ್ಡರ* ಇವರ ಶೈಕ್ಷಣಿಕ ಕಾರ್ಯ ಚಟುವಟಿಕೆಗಳನ್ನು ಗುರುತಿಸಿ *ರಾಜ್ಯಮಟ್ಟದ ಶಿಕ್ಷಣ ರತ್ನ* ಎಂಬ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ನಿಸರ್ಗ ಸಂಗೀತ ವಿದ್ಯಾಲಯದ ಅಧ್ಯಕ್ಷರಾಗಿರುವ ಶ್ರೀಮಲ್ಲಯ್ಯ ಎಸ್ ಕೋಮಾರಿ ಹಾಗೂ ಕಾರ್ಯದರ್ಶಿಗಳಾಗಿರುವ ಶ್ರೀಮತಿ ಶ್ರೀದೇವಿ ಎಂ ಕೋಮಾರಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೂಲತಃ ಬಾಗಲಕೋಟ ಜಿಲ್ಲೆಯ ಹಿರೇಮಾಗಿ ಗ್ರಾಮದ ಶ್ರೀ ಮುತ್ತು ವಡ್ಡರ ಇವರು ಇತ್ತೀಚೆಗೆ ಅತಿ ಸರಳ ಗಣಿತ ಎಂಬ ಪುಸ್ತಕವನ್ನು ಬರೆದಿದ್ದು ಸುಮಾರು ಶಾಲೆಗಳಲ್ಲಿ ಆ ಪುಸ್ತಕದ ಬಗ್ಗೆ ತರಬೇತಿಯನ್ನು ನೀಡಿದ್ದಾರೆ, ಜೊತೆಗೆ ತಮ್ಮದೇ ಆದ ಒಂದು ಯೂಟ್ಯೂಬ್ ಚಾನೆಲ್ ನಲ್ಲಿ ಪ್ರತಿನಿತ್ಯ ಹಲವಾರು ಸರಳ ಗಣಿತಕ್ಕೆ ಸಂಬಂಧಪಟ್ಟ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವರು. ಇದರ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲಿಯೂ ಕೂಡ ತಮ್ಮನ್ನು ತಾವು ತೊಡಗಿಸಿಕೊಂಡು,ಪ್ರತಿನಿತ್ಯ ಹಲವಾರು ಪತ್ರಿಕೆಗಳಿಗೆ ಕವನಗಳನ್ನು ಲೇಖನಗಳನ್ನು ಬರೆಯುತ್ತಾರೆ.ಹಾಗೂ ಹಲವು ಸಾಹಿತ್ಯ ವೇದಿಕೆಗಳ ಅಧ್ಯಕ್ಷರು, ಸಂಚಾಲಕರು ಹಾಗೂ ಕಾರ್ಯದರ್ಶಿಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರ ಸಾಹಿತ್ಯ ಕ್ಷೇತ್ರ ಮತ್ತು ಶೈಕ್ಷಣಿಕ ಕ್ಷೇತ್ರವನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಹಾಗೂ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವು ಇದೇ ತಿಂಗಳ ಆಗಸ್ಟ್ 20 ರಂದು ಹನುಮಸಾಗರ ನಗರದಲ್ಲಿ ನಡೆಯಲಿದೆ ಎಂದು ತಿಳಿಸಲಾಗಿದೆ.