ಬಾಗಲಕೋಟೆ
ಬಾಗಲಕೋಟೆ ಶಹರದ ಸೋನಾರ ಬಡಾವಣೆಯ ರಿ.ಸ ನಂ:204/2 ಪ್ಲಾಟ ನಂ.3 ರಲ್ಲಿ ಅನಧಿಕೃತವಾಗಿ ಶ್ರೀ ಛತ್ರಪತಿ ಶಿವಾಜಿ ಮೂರ್ತಿಯನ್ನು ನಿರ್ಮಿಸಿದ್ದು ಕಾರಣ ಸದರಿ ಮೂರ್ತಿಯನ್ನು ತೆರವುಗೊಳಿಸಬೇಕಾಗಿದ್ದರಿಂದ ಮತ್ತು ಬಾಗಲಕೋಟೆ ಜಿಲ್ಲೆಯು ವಿಶೇಷವಾಗಿ ಬಾಗಲಕೋಟಿ ಶಹರವು ಮತೀಯವಾಗಿ ಸೂಕ್ಷ್ಮವಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ, ಕಾನೂನು ಸುವ್ಯವಸ್ಥೆ ಕಾಪಾಡುವುದಕ್ಕಾಗಿ ದಿನಾಂಕ:16-08- 2023 ರಿಂದ 18-08-2023 ರ ರಾತ್ರಿ 12.00 ಗಂಟೆಯವರೆಗೆ ಮುಂಜಾಗ್ರತವಾಗಿ ಹಳೇ ಬಾಗಲಕೋಟೆ, ನವನಗರ ಮತ್ತು ವಿದ್ಯಾಗಿರಿ ವ್ಯಾಪ್ತಿಯಲ್ಲಿ ಯಾವುದೇ ಪ್ರತಿಭಟನೆ, ಗುಂಪು ಸೇರುವಿಕೆಯನ್ನು ನಿಷೇಧಿಸಿ ಆದೇಶ ಹೊರಡಿಸುವಂತೆ ಪೊಲೀಸ್ ಅಧೀಕ್ಷಕರು ಬಾಗಲಕೋಟೆ ಇವರು ಉಲ್ಲೇಖಿತ ಪತ್ರದಲ್ಲಿ ಕೋರಿರುವರು. ಕಾರಣ ಈ ಕೆಳಗಿನಂತೆ ಆದೇಶ
ಅದೇಶ
ಬಾಗಲಕೋಟೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಯಾದ ಜಾನಕಿ, ಕೆ.ಎಂ, ಭಾ.ಆ.ಸೇ. ಆದ ನಾನು ಬಾಗಲಕೋಟೆ ಶಹರದ ಸೋನಾರ ಬಡಾವಣೆಯ ರಿ.ಸ ನಂ:204/2 ಪ್ಲಾಟ ನಂ.3 ರಲ್ಲಿ ಅನಧಿಕೃತವಾಗಿ ಶ್ರೀ ಛತ್ರಪತಿ ಶಿವಾಜಿ ಮೂರ್ತಿಯನ್ನು ನಿರ್ಮಿಸಿದ್ದು ಕಾರಣ ಸದರಿ ಮೂರ್ತಿಯನ್ನು ತೆರವುಗೊಳಿಸಬೇಕಾಗಿದ್ದರಿಂದ ಮತ್ತು ಬಾಗಲಕೋಟೆ ಜಿಲ್ಲೆಯು ವಿಶೇಷವಾಗಿ ಬಾಗಲಕೋಟೆ ಶಹರವು ಮತೀಯವಾಗಿ ಸೂಕ್ಷ್ಮವಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ, ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಸಿ.ಆರ್.ಪಿ.ಸಿ. ಕಲಂ 144 ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ದಿನಾಂಕ:16-08-2023 ರಿಂದ 18-08-2023 ರ ರಾತ್ರಿ 12.00 ಗಂಟೆಯವರೆಗೆ ಮುಂಜಾಗೃತ ಕ್ರಮವಾಗಿ ಹಳೇ ಬಾಗಲಕೋಟೆ, ನವನಗರ ಮತ್ತು ವಿದ್ಯಾಗಿರಿ ವ್ಯಾಪ್ತಿಯಲ್ಲಿ ಯಾವುದೇ ಪ್ರತಿಭಟನೆ, ಗುಂಪು ಸೇರುವಿಕೆಯನ್ನು ನಿಷೇಧಿಸಿ ಆದೇಶ ಹೊರಡಿಸಿರುತ್ತೇನೆ.
ಈ ಆದೇಶವನ್ನು ಇಂದು ದಿನಾಂಕ:16-08-2023 ರಂದು ನನ್ನ ಸಹಿ ಹಾಗೂ ಮುದ್ದೆಯೊಂದಿಗೆ ಹೊರಡಿಸಿದೆ ಎಂದು ಡಿಸಿ ಕೆ.ಎಂ.ಜಾನಕಿ ಆದೇಶ ಹೊರಡಿಸಿದ್ದಾರೆ.