This is the title of the web page
This is the title of the web page

Live Stream

November 2024
S M T W T F S
 12
3456789
10111213141516
17181920212223
24252627282930

| Latest Version 9.4.1 |

Education NewsState News

ವಿದ್ಯಾರ್ಥಿಗಳೊಂದಿಗೆ ಡಿಸಿ, ಸಿಇಓ ಸಂವಾದ

ವಿದ್ಯಾರ್ಥಿಗಳೊಂದಿಗೆ ಡಿಸಿ, ಸಿಇಓ ಸಂವಾದ

ಬಾಗಲಕೋಟೆ

ವಿದ್ಯಾರ್ಥಿ ಜೀವನ ಸುವರ್ಣ ಅವಕಾಶವಾಗಿದ್ದು ನಿರಂತರ ಪ್ರಯತ್ನದಿಂದ ತಮ್ಮ ಗುರಿ ಸಾಸಬೇಕು ಎಂದು ಜಿಲ್ಲಾಕಾರಿ ಕೆ.ಎಂ.ಜಾನಕಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಜಿಲ್ಲಾಧಿಕಾರಿ ಸಭಾಂಗಣದಲ್ಲಿ ೨೦೨೨-೨೩ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತಾಲೂಕಿಗೆ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದದಲ್ಲಿ ಮಾತನಾಡಿದ ಅವರು, ಆಧುನಿಕ ಯುಗ ವೇಗವಾಗಿ ಸಾಗುತ್ತಿದ್ದು ಅದರೊಂದಿಗೆ ಪೈಪೋಟಿ ಕೂಡಾ ಹೆಚ್ಚಾಗಿದೆ. ಕೇವಲ ಸರಕಾರಿ ನೌಕರರಿಯನ್ನು ಆಶಿಸದೇ ಅವಕಾಶದ ಸದುಪಯೋಗ ಪಡೆದುಕೊಂಡು ಶ್ರಮಜೀವಿ ಆದಾಗ ಮಾತ್ರ ಪರಿಪೂರ್ಣತೆ ಹೊಂದಲು ಸಾಧ್ಯವೆಂದರು.

ವಿದ್ಯಾರ್ಥಿಗಳು ಶಿಕ್ಷಣ ಪಡೆದಲ್ಲಿ ಕಲಿತ ವಿದ್ಯೆಗಿಂತ ಸಾಮಾನ್ಯ ಜ್ಞಾನದತ್ತ ಹೆಚ್ಚಿನ ಗಮನ ಹರಿಸಿದಾಗ ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡಬಹುದಾಗಿದೆ. ಅಂತಹ ಸಂದರ್ಭದಲ್ಲಿ ಬರುವ ಅಡೆತಡೆ, ಸಮಸ್ಯೆಗಳನ್ನು ಎದುರಿಸುವ ಧೈರ್ಯವೂ ಕೂಡಾ ಬಂದೊದಗುತ್ತದೆ. ಸೋಲು ಗೆಲುವುಗಳನ್ನು ಸಮನಾಗಿ ಸ್ವೀಕರಿಸಿ ಸೋತಾಗ ಕುಗ್ಗದೇ ಗೆದ್ದಾಗ ಹಿಗ್ಗದೇ ಸಮಚಿತ್ತದಿಂದ ನಡೆದುಕೊಂಡಲ್ಲಿ ಯಶಸ್ಸು ಸಾಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಹಿಂದಿನಿAದಲೇ ಅಲಕ್ಷ, ಆಲಶ್ಯ, ಹೆದರಿಕೆಗಳನ್ನು ಬದಿಗಿಟ್ಟು ನಿಷ್ಠೇಯಿಂದ ಜ್ಞಾನಾರ್ಜನೆ ಕಡೆ ಗಮನ ಹರಿಸಲು ತಿಳಿಸಿದರು.

ಜಿಪಂ ಸಿಇಒ ಶಶಿಧರ ಕುರೇರ ತಮ್ಮ ಬಾಲ್ಯದ ನೆನಪುಗಳನ್ನು ಮೆಲುಕು ಹಾಕುತ್ತಾ, ಬಾಲ್ಯದಲ್ಲಿ ಅನೇಕ ಕಷ್ಟದ ದಿನಗಳಾಗಿದ್ದವು. ಇಂದಿನಷ್ಟು ಸೌಲಭ್ಯಗಳು ಅಂದು ಇರಲಿಲ್ಲ. ಕಷ್ಟದ ದಿನಗಳಲ್ಲಿಯೇ ಇಷ್ಟಪಟ್ಟು ಓದು ಸಾಧನೆ ಮಾಡಲು ಸಾಧ್ಯವಾಯಿತು. ನನ್ನ ಸಾಧನೆಗೆ ಪ್ರಾರಂಭದಲ್ಲಿ ಪೊಲೀಸ್ ಅಧಿಕಾರಿಯಾಗಿ ಅವಕಾಶ ದೊರೆತಿದ್ದರೂ ಸಹ ಗುರಿ ಸಾಧನೆಯ ಹಸಿವು ಇಂಗಿರಲಿಲ್ಲ. ಪ್ರಯತ್ನ ಮುಂದುವರೆಸಿದೆ. ಹಲವು ಸ್ಪರ್ಧಾತ್ಮಕ ಪರೀಕ್ಷೆಗೆ ಪಯತ್ನಿಸಿದ ಫಲವಾಗಿ ಕೆಎಎಸ್, ಐಎಎಸ್‌ನಂತಹ ಹುದ್ದೆಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ ಎಂದರು.

ಎಸಿ ಶ್ವೇತಾ ಬೀಡಿಕರ, ಸಾಧನೆಗೆ ಗುರಿ ಇಟ್ಟುಕೊಂಡು ದೃಢ ನಿರ್ಧಾರ ತೆಗೆದುಕೊಳ್ಳಬೇಕು. ಗುರಿ ತಲುಪುವಲ್ಲಿ ನಿರಂತರ ಪ್ರಯತ್ನ ಅಗತ್ಯವಾಗಿದ್ದು ಅದರಲ್ಲಿ ಎಡವಿದರೂ ಪ್ರಯತ್ನ ಮಾತ್ರ ಮುಂದುವರೆಯಬೇಕು. ಕಾಲೇಜು ಹಂತದಲ್ಲಿ ಬರುವ ಹವ್ಯಾಸಗಳಿಂದ ನಿಮ್ಮ ಗಮನ ಬೇರೆಡೆ ಹೋಗದಂತೆ ನೋಡಿಕೊಳ್ಳಬೇಕು ಎಂದರು.

ತಾವು ಕೂಡಾ ವಿದ್ಯಾರ್ಥಿ ಜೀವನದಲ್ಲಿ ಕಷ್ಟದ ದಿನಗಳು ಬಂದಿದ್ದು, ಪ್ರಥಮವಾಗಿ ಅಂಚೆ ಇಲಾಖೆಯಲ್ಲಿ ನೌಕರಿ ದೊರೆತಿದ್ದರೂ ಸಹ ಯುಪಿಎಸ್‌ಸಿ ಪರೀಕ್ಷೆ ಬರೆಯಲು ಮುಂದಾಗುತ್ತಿದೆ. ಪರೀಕ್ಷೆಯಲ್ಲಿ ವಿಫಲವಾದರೂ ಪ್ರಯತ್ನ ಸಹ ನಿಲ್ಲಿಸಿರಲಿಲ್ಲ. ಪರೀಕ್ಷೆ ಬರೆಯಲು ರಜೆ ಸಿಗದಿದ್ದರೂ ಕೆಲಸಕ್ಕೆ ಗೈರಾಗಿ ಪರೀಕ್ಷೆ ಬರೆಯಲು ಹೋಗುತ್ತಿದೆ. ಇದರಿಂದ ಗುರಿ ತಲುಪಲು ಸಾಧ್ಯವಾಯಿತು ಎಂದು ತಿಳಿಸಿದರು.

ತಹಸೀಲ್ದಾರ್ ಅಮರೇಶ ಪಮ್ಮಾರ ಮಾತನಾಡಿದರು. ಡಿವೈಪಿಸಿಯ ಉಪಸಮನ್ವಯಾಕಾರಿ ಸಿ.ಆರ್.ಓಣಿ ಸೇರಿದಂತೆ ನಾನಾ ಶಾಲೆಗಳ ವಿದ್ಯಾರ್ಥಿಗಳು ಹಾಗೂ ಪಾಲಕರು ಇದ್ದರು.

 

 

 

Nimma Suddi
";