This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

Education NewsLocal NewsState News

ಪ್ರವಚನಗಳು ಬದುಕಿನ ಪರಿವರ್ತನೆಗೆ ಅಗತ್ಯವಾಗಿದೆ:ಪ್ರಭುಸ್ವಾಮಿಗಳು ಚರಂತಿಮಠ

ಪ್ರವಚನಗಳು ಬದುಕಿನ ಪರಿವರ್ತನೆಗೆ ಅಗತ್ಯವಾಗಿದೆ:ಪ್ರಭುಸ್ವಾಮಿಗಳು ಚರಂತಿಮಠ

ಗರಗದ ಶ್ರೀಮಡಿವಾಳೇಶ್ವರ ಶಿವಯೋಗಿಗಳ ಜೀವನ ದರ್ಶನ ಪುರಾಣ ಪ್ರವಚನ.

ಬಾಗಲಕೋಟೆ:

ದೈನಂದಿನ ಜೀವನ ಜಾಂಜಾಟಗಳ ನಡುವೆ ನಮ್ಮನ್ನು ನಾವು ಅರಿತು ಬದುಕಿನ ಪರಿವರ್ತನೆಗೆ ಪ್ರವಚನಗಳು ಅಗತ್ಯವಾಗಿವೆ ಎಂದು ಚರಂತಿಮಠದ ಶ್ರೀ ಪ್ರಭುಸ್ವಾಮಿಗಳು ಹೇಳಿದರು.

ಅವರು ಬಿ.ವ್ಹಿ.ವ್ಹಿ. ಸಂಘದ ಶ್ರೀ ಕಣವಿ ವೀರಭದ್ರೇಶ್ವರ ಟ್ರಸ್ಟ್ ಬಾಗಲಕೋಟೆ ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ,ಬಾಗಲಕೋಟೆ.ಶಿವಾನುಭವ ಸಮಿತಿ ಚರಂತಿಮಠ ಬಾಗಲಕೋಟೆ,ಬಿ.ವ್ಹಿ.ವ್ಹಿ.ಸಂಘದ ಅಕ್ಕನ ಬಳಗ,ಭಾರತ ಶರಣ ಸಾಹಿತ್ಯ ಪರಿಷತ್ತು ಬಾಗಲಕೋಟೆ ಇವರ ಸಂಯುಕ್ತ ಆಶ್ರಯದಲ್ಲಿ ಚರಂತಿಮಠದ ಶಿವಾನುಭವ ಮಂಟಪದಲ್ಲಿ ಶ್ರಾವಣ ಮಾಸದ ಪರ್ಯಂತ ಏರ್ಪಡಿಸಿರುವ “ಗರಗದ ಶ್ರೀಮಡಿವಾಳೇಶ್ವರ ಶಿವಯೋಗಿಗಳ ಜೀವನ ದರ್ಶನ ಪುರಾಣ ಪ್ರವಚನ ಕಾರ್ಯಕ್ರಮವನ್ನು ಚರಂತಿಮಠದ ಶ್ರೀ ಪ್ರಭುಮಹಾಸ್ವಾಮಿಗಳು ಬೆಳಗಿಸುವುದರ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು ದೇವರ ಹಾಗೂ ಪೂಜ್ಯರುಗಳ ಸಾಧು ಸಂತರ ಕಥೆ ಪುರಾಣ ಪ್ರವಚನಗಳನ್ನು ಶ್ರವಣ ಮಾಡಿಕೊಳ್ಳಲು ಈ ಶ್ರಾವಣ ಮಾಸ ಪವಿತ್ರವಾಗಿದೆ. ಮನೆಗಳಲ್ಲಿ ಜ್ಞಾನ ಮೂಲಕ ಪರಿವರ್ತನೆ ಪುರಾಣ ಪ್ರವಚನಗಳು ಇಂದು ಅಗತ್ಯವಾಗಿವೆ ಎಂದರು.

ಕಾರ್ಯಕ್ರಮದ ಅದ್ಯಕ್ಷತೆಯನ್ನು ವಹಿಸಿ ಮಾತನಾಡಿ ಮಾಜಿ ಶಾಸಕ ಬಿ.ವ್ಹಿ.ವ್ಹಿ.ಸಂಘದ ಕಾರ್ಯಾಧ್ಯಕ್ಷರಾದ ಡಾ.ವೀರಣ್ಣ ಚರಂತಿಮಠ ಅವರು ಶ್ರಾವಣ ಮಾಸದಲ್ಲಿ ಮೊದಲಿನಿಂದ ಪ್ರವಚನಗಳನ್ನು ನಡೆಸುತ್ತಾ ಬಂದಿರುವು ನಮ್ಮ ಹೆಮ್ಮೆ, ಶ್ರಾವಣ ಮಾಸವೆಂದರೆ ಶ್ರವಣಮಾಡುವುದು, ಅದರಲ್ಲಿ ನಮ್ಮ ಹಿಂದುಗಳಿಗೆ ಶ್ರಾವಣ ಮಾಸ ಬಹಳ ಪವಿತ್ರವಾದದ್ದು, ಶ್ರಾವಣ ಬಂದರೆ ಹಬ್ಬದ ಸಡಗರ, ದಿನನಿತ್ಯದ ಕೆಲಸದಲ್ಲಿ ದಿನ ಒಂದು ಘಂಟೆ ಪ್ರವಚನಗಳನ್ನು ಕೆಳುವುದರಿಂದ ಮನಸ್ಸು ಹಗುರವಾಗುತ್ತದೆ, ಗರಗದ ಮಡಿವಾಳೆಶ್ವರ ಅಂದರೆ ಅವರು ಒಬ್ಬ ಕಾಲಜ್ಞಾನಿಗಳಿದ್ದಂತೆ ಅವರ ಜೀವನ ದರ್ಶನದ ಬಗ್ಗೆ ಪುರಾಣ ಪ್ರವಚನ ಕೆಳುವುದು ನಮ್ಮೆಲ್ಲರ ಭಾಗ್ಯವಗಿದೆ ಎಂದರು.

ಕಾರ್ಯಕ್ರಮದ ನಂತರ ಗುಣದಾಳದ ಕಲ್ಯಾನ ಹಿರೇಮಠದ ಪೂಜ್ಯಶ್ರೀ ಡಾ.ವಿವೇಕಾನಂದ ದೇವರವರು ಗರಗದ ಶ್ರೀ ಮಡಿವಾಳೇಶ್ವರ ಶಿವಯೋಗಿಗಳ ಜೀವನ ದರ್ಶನ ಕುರಿತು ಪುರಾಣ ಪ್ರವಚನ ನೀಡಿದರು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷರಾದ ಜಿ.ಎನ್.ಪಾಟೀಲ,ಸಂಘದ ಶ್ರೀ ಕಣವಿ ವೀರಭದ್ರೇಶ್ವರ ಟ್ರಸ್ಟ್ ನ ಅಧ್ಯಕ್ಷರು ಪ್ರಕಾಶ ರೇವಡಿಗಾರ,ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ,ಗುರುಬಸವ ಸೂಳಿಬಾವಿ.ಸಂಘದ ಸದಸ್ಯರು.ಅಕ್ಕನ ಬಳಗದ ಸದಸ್ಯರು ಭಾಗಿಯಾಗಿದ್ದರು

ಶರಣು ಸಮರ್ಪಣೆಯನ್ನು ಬಸವರಾಜ ಮುಕ್ಕುಪ್ಪಿ ನೆರವೇರಿಸದಿರು, ವಿಜಯಲಕ್ಷಿö್ಮÃ ಭದ್ರಶೇಟ್ಟಿ,ಉಮಾ ರೇವಡಿಗಾರ ಕಾರ್ಯಕ್ರಮ ನೀರೂಪಿಸಿದರು. ಡಾ.ಸಿದ್ದರಾಮಯ್ಯ ಮಠಪತಿ ಸಂಗಡಿಗರಿAದ ವಚನ ಗಾಯನ ಜರುಗಿತು..

";