ಬಾಗಲಕೋಟೆ
ಜಿಲ್ಲಾ ಪಂಚಾಯತಿಯ ಪ್ರಸಕ್ತ ಸಾಲಿಗೆ ೩೭೭.೬೭ ಕೋಟಿ ರೂ.ಗಳ ವಿವಿಧ ಕಾರ್ಯಕ್ರಮಗಳ ಕ್ರೀಯಾ ಯೋಜನೆಗಳಿಗೆ ಜಿ.ಪಂ ಸಭಾಭವನದಲ್ಲಿ ಶುಕ್ರವಾರ ಜರುಗಿದ ಸಾಮಾನ್ಯ ಸಭೆಯಲ್ಲಿ ಅನುಮೋದನೆ ನೀಡಲಾಯಿತು.
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಹಾಗೂ ಜಿ.ಪಂ ಆಡಳಿತಾಧಿಕಾರಿಗಳು ಆಗಿರುವ ಮೊಹಮ್ಮದ ಮೋಸೀನ್ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸಾಮಾನ್ಯ ಸಭೆಯಲ್ಲಿ ಫಲಾನುಭವಿ ೨೮.೧೩ ಕೋಟಿ ರೂ, ವೇತನ ೧೩೪.೦೩ ಕೋಟಿ ರೂ, ಕಾಮಗಾರಿಗೆ ೭ ಕೋಟಿ ರೂ, ಕಾರ್ಯಕ್ರಮಗಳಿಗಾಗಿ ೨೦೮.೪೯ ಕೋಟಿ ರೂ, ಸೇರಿ ಒಟ್ಟು ೩೭೭.೬೭ ಕೋಟಿ ರೂ.ಗಳ ವಾರ್ಷಿಕ ಕ್ರೀಯಾ ಯೋಜನೆಗೆ ಅನುಮೋದನೆ ನೀಡಲಾಯಿತು.
ಪಂಚಾಯತ ರಾಜ್ ವಿಭಾಗಕ್ಕೆ ೫.೭೭ ಕೋಟಿ ರಊ, ಸಾರ್ವಜನಿಕ ಶಿಕ್ಷಣ ಇಲಾಖೆಗೆ ೧೫೦.೪೫ ಕೋಟಿ ರೂ, ವಯಸ್ಕರ ಶಿಕ್ಷಣ ೪೪.೫೬ ಲಕ್ಷ ರೂ, ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಗೆ ೧.೨೩ ಕೋಟಿ ರೂ, ವೈದ್ಯಕೀಯ ಮತ್ತು ಜನಾರೋಗ್ಯ ಸೇವೆಗಳಿಗೆ ೬೧.೮೮ ಕೋಟಿ ರೂ, ಕುಟುಂಬ ಕಲ್ಯಾಣ ಕಾರ್ಯಕ್ರಮಗಳಿಗೆ ೨೩.೮೬ ಕೋಟಿ ರೂ, ಆಯುಷ್ ಇಲಾಖೆಗೆ ೪.೩೨ ಕೋಟಿ ರೂ, ಸಮಾಜ ಕಲ್ಯಾಣ ಇಲಾಖೆ ೧೯.೯೮ ಕೋಟಿ ರೂ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ೫೯.೫೧ ಕೋಟಿ ರೂ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ೫.೮೧ ಕೋಟಿ ರೂ. ಅನುದಾನ ನಿಗದಿಪಡಿಸಲಾಯಿತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಗೆ ೨.೧೨ ಕೋಟಿ ರೂ, ತೋಟಗಾರಿಕೆ ೬.೬೦ ಕೋಟಿ ರೂ, ಕೃಷಿ ೧.೩೭ ಕೋಟಿ ರೂ, ಭೂಸಾರ ಮತ್ತು ಜಲಸಂರಕ್ಷಣೆ ೧.೮೯ ಕೋಟಿ ರೂ, ಪಶು ಸಂಗೋಪನೆ ೪.೧೦ ಕೋಟಿ ರೂ, ಮೀನುಗಾರಿಕೆ ೧.೩೪ ಕೋಟಿ ರೂ, ಅರಣ್ಯ ಮತ್ತು ವನ್ಯಜೀವನ ೯.೯೪ ಕೋಟಿ ರೂ, ಸಹಕಾರ ೪ ಲಕ್ಷ ರೂ, ಇತರೆ ಗ್ರಾಮೀಣ ಕಾರ್ಯಕ್ರಮ ೫.೮೭ ಕೋಟಿ ರೂ, ಸಣ್ಣ ನೀರಾವರಿ ೭೯ ಲಕ್ಷ ರೂ, ರೇಷ್ಮೆ ೫.೦೧ ಕೋಟಿ ರೂ, ಗ್ರಾಮೀಣ ಮತ್ತು ಸಣ್ಣ ಉದ್ಯಮ ೯೨.೦೪ ಲಕ್ಷ ರೂ, ಕೈಮಗ್ಗ ಮತ್ತು ಜವಳಿ ೧.೦೫ ಕೋಟಿ ರೂ, ಸಚಿವಾಲಯ ಆರ್ಥಿಕ ಸೇವೆಗಳು ೪೪.೮೮ ಲಕ್ಷ ರೂ, ಇತರೆ ವಿಜ್ಞಾನ ಸಂಶೋಧನೆ ೮ ಲಕ್ಷ ರಊ, ಕೃಷಿ ಮಾರುಕಟ್ಟೆ ೧೬ ಲಕ್ಷ ರೂ, ರಸ್ತೆ ಮತ್ತು ಸೇತುವೆ ೨.೬೦ ಕೋಟಿ ರೂ.ಗಳ ಅನುದಾನ ನಿಗದಪಡಿಸಲಾಯಿತು.
ಅಲ್ಲದೇ ಜಿ.ಪಂ ಅಭಿವೃದ್ದಿ, ಅನಿರ್ಭಂದಿತ, ಶಾಸನಬದ್ದ ಅನುದಾನದಡಿ ಶಿಕ್ಷಣ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿಗೆ ತಲಾ ಶೇ.೧೫ ರಷ್ಟು, ಗ್ರಂಥಾಲಯ, ಆರೋಗ್ಯ, ರಸ್ತೆಗೆ ತಲಾ ಶೇ.೧೦ ಹಾಗೂ ಇತರೆಗೆ ಶೇ.೪೦ ರಷ್ಟು ಅನುದಾನ ನಿಗದಿಪಡಿಸಲಾಗಿರುವುದಾಗಿ ಸಭೆಯಲ್ಲಿ ತಿಳಿಸಲಾಯಿತು. ಈ ಸಂದರ್ಭದಲ್ಲಿ ಜಿ.ಪಂ ಆಡಳಿತಾಧಿಕಾರಿ ಮೊಹಮ್ಮದ ಮೋಸಿನ್ ಮಾತನಾಡಿ ದುರಸ್ಥಿಗೆ ನಿಗದಿಪಡಿಸಿದ ಅನುದಾನದಲ್ಲಿ ಅವಶ್ಯಕತೆ ಇರುವ ಕಡೆಗಳಲ್ಲಿ ಖರ್ಚು ಮಾಡಲು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಕೆ.ಎಂ.ಜಾನಕಿ, ಜಿ.ಪಂ ಸಿಇಓ ಶಶಿಧರ ಕುರೇರ, ಜಿ.ಪಂ ಉಪಕಾರ್ಯದರ್ಶಿ ಎನ್.ವಾಯ್.ಬಸರಿಗಿಡದ, ಜಿ.ಪಂ ಮುಖ್ಯ ಯೋಜನಾಧಿಕಾರಿ ನಿರ್ಮಲ, ಉಪವಿಭಾಗಾಧಿಕಾರಿಗಳಾದ ಶ್ವೇತಾ ಬೀಡಿಕರ, ಸಂತೋಷ ಕಾಮಗೌಡ, ಜಿ.ಪಂ ಮುಖ್ಯ ಲೆಕ್ಕಾಧಿಕಾರಿ ಸಿದ್ದರಾಮ ಉಕ್ಕಲಿ, ಯೋಜನಾ ನಿರ್ದೇಶಕ ಕಾಂಬಳೆ, ಸಹಾಯಕ ಯೋಜನಾಧಿಕಾರಿ ಭೀಮಪ್ಪ ತಳವಾರ ಸೇರಿದಂತೆ ಜಿಲ್ಲಾ ಮಟ್ಟದ, ತಾಲೂಕಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.