This is the title of the web page
This is the title of the web page

Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

Politics NewsState News

ರಾಜಕೀಯ ನಿವೃತ್ತಿ ಘೋಷಿಸಿದ ಸಂಸದ ಬಚ್ಚೇಗೌಡ

ರಾಜಕೀಯ ನಿವೃತ್ತಿ ಘೋಷಿಸಿದ ಸಂಸದ ಬಚ್ಚೇಗೌಡ

ಮೋದಿ ಟಿಕೆಟ್‌ ಕೊಡಲ್ಲ ಅಂದಿದ್ದಾರೆ; ರಾಜಕೀಯ ನಿವೃತ್ತಿ ಘೋಷಿಸಿದ ಬಿ.ಎನ್‌ ಬಚ್ಚೇಗೌಡ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಕ್ಷೇತ್ರದ ಬಿಜೆಪಿ ಸಂಸದ (Chikkaballapura BJP MP), ಅದಕ್ಕೂ ಮೊದಲು ಐದು ಬಾರಿ ಶಾಸಕರಾಗಿದ್ದ ಹಿರಿಯ ನಾಯಕ ಬಿ.ಎನ್‌ ಬಚ್ಚೇಗೌಡ (BN Bacchegowda) ಅವರು ರಾಜಕೀಯ ನಿವೃತ್ತಿ (Political retirement) ಘೋಷಿಸಿದ್ದಾರೆ.

ನಿವೃತ್ತಿಯ ಸಂದರ್ಭದಲ್ಲಿ ಬಿಜೆಪಿ, ಜೆಡಿಎಸ್‌, ಕಾಂಗ್ರೆಸ್‌ನ ಹಾಲಿ ಸ್ಥಿತಿಗತಿಗಳನ್ನು ವಿಶ್ಲೇಷಿಸಿದರು. ಜತೆಗೆ ಸಿಎಂ ಸಿದ್ದರಾಮಯ್ಯ (CM Siddaramaiah) ಅವರನ್ನು ಹೊಗಳಿದರು.

ಮೋದಿ ನಂಗೆ ಟಿಕೆಟ್‌ ಕೊಡೊಲ್ಲ ಅಂದಿದ್ದಾರೆ
ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಪ್ರಕಾರ 75 ವರ್ಷಕ್ಕೆ ನಿವೃತ್ತಿ ಘೋಷಣೆ ಮಾಡಿಕೊಳ್ಳಬೇಕು. ಈಗ ನನಗೆ 81 ವರ್ಷ ವಯಸ್ಸಾಗಿದೆ. ಅರ್ಥಪೂರ್ಣ ಸಮಾರಂಭವನ್ನೂ ಆಚರಣೆ ಮಾಡಿಕೊಂಡಿದ್ದೇನೆ. ಮೋದಿ ಅವರು ನನಗೆ ಪಕ್ಷದಲ್ಲಿ ಟಿಕೆಟ್ ಕೋಡೋದಿಲ್ಲ ಅಂತ ಹೇಳಿಬಿಟ್ಟಿದ್ದಾರೆ. ಟಿಕೆಟ್ ಕೊಡೋದಿಲ್ಲ ಅಂತ ಸೀರಿಯಸ್ಸಾಗಿ ಹೇಳಿಬಿಟ್ಟಿದ್ದಾರೆ. ಒನ್ ಫ್ಯಾಮಿಲಿ ಒನ್ ಟಿಕೆಟ್ ಎಂದು ಘೋಷಣೆ ಮಾಡಿದ್ದಾರೆ.

ತಂದೆ, ಮಗ, ಮಗಳು, ಮೊಮ್ಮಗ ರಾಜಕಾರಣಕ್ಕೆ ಬರುವಂತಿಲ್ಲ ಎಂದಿದ್ದಾರೆ. ಹೀಗಾಗಿ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆʼʼ ಎಂದು ಚಿಕ್ಕಬಳ್ಳಾಪುರದಲ್ಲಿ ಸಂಸದ ಬಿ.ಎನ್ ಬಚ್ಚೇಗೌಡ ಹೇಳಿದರು.

ಬಿಜೆಪಿ ಬಗ್ಗೆ ಬಚ್ಚೇಗೌಡರಿಗೆ ಅಸಮಾಧಾನ
ಬಿಜೆಪಿಯಲ್ಲಿ ನನ್ನನ್ನು ಯಾರೂ ಕ್ಯಾರೇ ಅನ್ನುತ್ತಿಲ್ಲ ಎನ್ನುವ ಅಸಮಾಧಾನವನ್ನು ಬಚ್ಚೇಗೌಡ ತೋಡಿಕೊಂಡರು.
ʻʻಈ ಹಿಂದೆ ಇದ್ದ ಎರಡೂ ಜಿಲ್ಲೆ ಉಸ್ತುವಾರಿ ಸಚಿವರು ನನ್ನ ಕಡೆಗಣಿಸಿದ್ದರು. ಡಾ. ಕೆ. ಸುಧಾಕರ್‌ ಅವರು ಸುಧಾಕರ್ ಬೆಂಗಳೂರು ಗ್ರಾಮಾಂತರ ಜಿಲ್ಲೆ ಉಸ್ತುವಾರಿಯಾಗಿ ಬಂದರು. ಎಂಟಿಬಿ ನಾಗರಾಜ್ ಚಿಕ್ಕಬಳ್ಳಾಪುರ ಉಸ್ತುವಾರಿಯಾಗಿ ಬಂದರು. ಇಬ್ಬರು ಉಸ್ತುವಾರಿ ಸಚಿವರು ನನ್ನ ಏನಕ್ಕೂ ಬಳಸಿಕೊಳ್ಳಲಿಲ್ಲ. ಯಾವುದೇ ಪತ್ರಿಕೆಯಲ್ಲಿ ನನ್ನ ಹೆಸರು ಇರುತ್ತಿರಲಿಲ್ಲ. ಸರ್ಕಾರದಿಂದ ಪ್ರೋಟೋಕಾಲ್ ಪ್ರಕಾರ ನನಗೆ ಆಹ್ವಾನ ಬರ್ತಿತ್ತು. ಅದು ಬಿಟ್ಟು ಪಕ್ಷದಿಂದ ಯಾರೂ ನನ್ನನ್ನು ಬಳಸಿಕೊಂಡಿಲ್ಲ. ಏನಪ್ಪಾ ಎಂದು ವಿಚಾರಿಸಿಲ್ಲ. ಮಾತನಾಡಿಲ್ಲʼʼ ಎಂದು ಬೇಸರ ತೋಡಿಕೊಂಡರು. ನಾನು ಲೋಕಸಭೆ ಸಧನಕ್ಕೆ ಹೋಗ್ತಿದ್ದೆ ಬರ್ತಿದ್ದೆ ಅಷ್ಟೆ ಎಂದರು ಬಿ.ಎನ್ ಬಚ್ಚೇಗೌಡ.

ಬಿಜೆಪಿಗೆ ಕಾರ್ಯಕರ್ತರನ್ನು ಹಿಡಿದಿಟ್ಟುಕೊಳ್ಳಲು ಆಗುತ್ತಿಲ್ಲ.
ಚುನಾವಣೆ ಕಳೆದು ಇಷ್ಟು ಸಮಯವಾಯಿತು. ಇನ್ನೂ ಬಿಜೆಪಿ ಅಧ್ಯಕ್ಷರನ್ನು ನೇಮಕ ಮಾಡಲು ಆಗಿಲ್ಲ. ಮೂರು ತಿಂಗಳು ಕಳೆದು ನಾಲ್ಕನೇ ತಿಂಗಳಾಗ್ತಾ ಇದೆ. ಪ್ರತಿ ಪಕ್ಷದ ನಾಯಕನ್ನ ಮಾಡಲಿಕ್ಕೆ ಆಗಲಿಲ್ಲ. ಇದರಿಂದ ಬಿಜೆಪಿ ಭಾರಿ ಹಿನ್ನಡೆ ಆಗಿದೆ. ಕಾರ್ಯಕರ್ತರನ್ನು ಹಿಡಿದಿಟ್ಟುಕೊಳ್ಳಲು ಆಗ್ತಿಲ್ಲʼʼ ಎಂದು ಬಚ್ಚೇಗೌಡರು ಹೇಳಿದರು.

*ಬಾಂಬೇ ಬಾಯ್ಸ್ ಬಿಜೆಪಿಯಲ್ಲಿ ಇರೋದು ಕಾರ್ಯಕರ್ತರಿಗೆ ಇಷ್ಟವಿಲ್ಲ. ಎಸ್ ಟಿ ಸೋಮಶೇಖರ್, ಶಿವರಾಮ ಹೆಬ್ಬಾರ್ ವಿಷಯದಲ್ಲಿ ಇದೇ ಆಗಿದೆ. ಕಾರ್ಯಕರ್ತರೇ ವಿರುದ್ಧವಾಗಿದ್ದಾರೆʼʼ ಎಂದ ಅವರು, ಮುಂದಿನ ದಿನಗಳಲ್ಲಿ ಇನ್ನಷ್ಟು ಜೆಡಿಎಸ್‌, ಬಿಜೆಪಿಯವರು ಕಾಂಗ್ರೆಸ್‌ಗೆ ಹೋಗ್ತಾರೆʼʼ ಎಂದರು.
ದೇವೇಗೌಡರು ಇರೋವರೆಗೆ ಕುಮಾರಸ್ವಾಮಿ ಬಿಜೆಪಿಗೆ ಹೋಗೊಲ್ಲ. ಮಾಜಿ ಸಿಎಂ ಕುಮಾರಸ್ವಾಮಿ ಬಿಜೆಪಿಗೆ ಹೋಗಲ್ಲʼʼ ಎಂದು ಭವಿಷ್ಯ ನುಡಿದರು ಸಂಸದ ಬಿ.ಎನ್ ಬಚ್ಚೇಗೌಡ. ʻʻನಾನ್ ಹೇಳ್ತೇನೆ ..ಕುಮಾರಸ್ವಾಮಿ ಬಿಜೆಪಿಗೆ ಹೋಗಲ್ಲ. ಅವರಪ್ಪ ಇರೋ ವರೆಗೂ ಬಿಜೆಪಿ ಸೇರೋದಿಲ್ಲ. ರಾಜ್ಯದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳಿವೆ, ಒಂದು ಪ್ರಾದೇಶಿಕ ಪಕ್ಷ ಇದೆ. ಜೆಡಿಎಸ್ ರಾಜ್ಯದಲ್ಲಿ ಉಳಿದುಕೊಳ್ಳುತ್ತದೆ. ರಾಜ್ಯದಲ್ಲಿ ತ್ರಿಕೋನ ಸ್ಪರ್ಧೆ ಆಗೋದು ಪಕ್ಕಾ. ದೇವೇಗೌಡರು ಇರೋ ವರೆಗೂ ಜೆಡಿಎಸ್‌ ಪಕ್ಷ ಉಳಿಯುತ್ತದೆʼʼ ಎಂದು ಚಿಕ್ಕಬಳ್ಳಾಪುರದಲ್ಲಿ ಭವಿಷ್ಯ ನುಡಿದರು ಬಚ್ಚೇಗೌಡ.

ಸಿದ್ದರಾಮಯ್ಯರನ್ನು ಹಾಡಿ ಹೊಗಳಿದ ಬಚ್ಚೇಗೌಡ
ನಿವೃತ್ತಿ ಘೋಷಣೆಯ ಪತ್ರಿಕಾಗೋಷ್ಠಿಯಲ್ಲಿ ಸಿಎಂ ಸಿದ್ದರಾಮಯ್ಯನವರನ್ನು ಹಾಡಿ ಹೊಗಳಿದರು ಬಿಜೆಪಿ ಸಂಸದ ಬಿ.ಎನ್ ಬಚ್ಚೇಗೌಡ. ʻʻಐದು ಗ್ಯಾರೆಂಟಿಗಳನ್ನು ಚಾಕಚಕ್ಯತೆಯಿಂದ ಜಾರಿಗೆ ತಂದಿದ್ದಾರೆ. ಸಿದ್ದರಾಮಯ್ಯ ಅವರಲ್ಲಿ ಇದನ್ನೆಲ್ಲ ಜಾರಿಗೆ ತರುವಂಥಹ ಬುದ್ಧಿವಂತಿಕೆ ಇದೆ‌. ಸಿದ್ದರಾಮಯ್ಯ ಬಹಳ ಸಾರಿ ಚುನಾಯಿತರಾಗಿ ಬಂದಿದ್ದಾರೆ. ಅವರಿಗೆ ಬಹಳ ವರ್ಷ ವಿತ್ತ ಸಚಿವರಾಗಿರುವ ಅನುಭವ ಇದೆ. ಐದು ಗ್ಯಾರಂಟಿಗಳನ್ನು ಸಿದ್ದರಾಮಯ್ಯ ಜಾರಿ ಮಾಡುತ್ತಾರೆʼʼ ಎಂದು ಸಂಸದ ಬಿ ಎನ್ ಬಚ್ಚೇಗೌಡ ವಿಶ್ವಾಸ ವ್ಯಕ್ತಪಡಿಸಿದರು.

Nimma Suddi
";