ಮುಧೋಳ: ರಾಜ್ಯದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಅತಿಥಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವರಿಗೆ ಸರಕಾರ ನಾನಾ ಸೌಲಭ್ಯಗಳನ್ನು ನೀಡಬೇಕು ಎಂದು ಒತ್ತಾಯಿಸಿ ಅತಿಥಿ ಶಿಕ್ಷಕರು ನಗರದ ಬಿಇಒ ಕಚೇರಿಯಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ಎ.ಆರ್.ಛಬ್ಬಿ ಮೂಲಕ ಸಿಎಂಗೆ ಮನವಿ ಸಲ್ಲಿಸಿದರು.
ಕಳೆದ 12 ವರ್ಷಗಳಿಂದಲೂ ಶೈಕ್ಷಣಿಕ ವರ್ಷ ಆರಂಭ ಬಳಿಕ ನೇಮಕ ಮಾಡಿಕೊಳ್ಳುತ್ತ ಬರುತ್ತಿದೆ. ಮಾರ್ಚ್ ತಿಂಗಳಲ್ಲಿ ಬಿಡುಗಡೆ ಮಾಡಿ ನಮ್ಮನ್ನು ನಡುನೀರಿನಲ್ಲಿ ಕೈ ಬಿಟ್ಟಂತಾಗುತ್ತಿದೆ. ನಾನಾ ಸಮಸ್ಯೆಗಳ ಮಧ್ಯೆಯೂ ಸೇವೆ ಸಲ್ಲಿಸುತ್ತ ಬಂದಿದ್ದೇವೆ. ಮಕ್ಕಳ ಹಿತದೃಷ್ಟಿಯಿಂದ ಅತಿಥಿ ಶಿಕ್ಷಕರಿಗೆ ಆದ್ಯತೆ ನೀಡಿ ಸೌಲಭ್ಯಗಳನ್ನು ಒದಗಿಸಬೇಕೆಂದು ಆಗ್ರಹಿಸಿದ
ಸಿಎಂ ಸಿದ್ದರಾಮಯ್ಯ ಅವರಿಗೆ ಬರೆದ ಮನವಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಅವರಿಗೂ ಸಲ್ಲಿಸಿದರು. ನಂತರ ಸಚಿವರು ಸಿಎಂ ಗಮನಕ್ಕೆ ತರಲಾಗುವುದು ಎಂದರು.
ಪ್ರಮುಖರಾದ ಸದಾಶಿವ ಬಾಗವ್ವಗೋಳ, ಲಕ್ಷ್ಮಣ ಜಾಣಮಟ್ಟಿ, ಮಂಜುನಾಥ ಪೂಜಾರಿ, ಹಣಮಂತ ನಾಗವ್ವಗೋಳ, ಸಿದ್ದು ಪಾಟೀಲ, ಶ್ರೀಧರ ಚಿಚಖಂಡಿ, ಸಂಜು ಪವಾರ, ಈರಯ್ಯ ನಾಡಗೋಳ, ಆನಂದ ಕಡಪಟ್ಟಿ, ಸುಮತಿ ನಾಟೀಕರ, ಗಂಗಾ ಬೊಸರಡ್ಡಿ, ತುಂಗಾ ನರಗುಂದ, ಮೇಘಾ ಮಾದರ, ಹನಮವ್ವ ನಾಯ್ಕರ, ಇಂದ್ರವ್ವ ಗೌಡರ, ಶ್ರೀಕಾಂತ ಮೇತ್ರಿ, ರಾಘವೇಂದ್ರ ನೀಲನ್ನವರ ಇತರರು ಇದ್ದರು.