ಕೀಟನಾಶಕ ಬಳಸುವ ಮುನ್ನ ಇರಲಿ ಎಚ್ಚರ
* ಕೀಟನಾಶಕಗಳಲ್ಲಿ ಇರುವ ವಿಷಕಾರಿ ರಾಸಾಯನಿಕ ಕೀಟ, ಪೀಡೆಗಳಿಗಷ್ಟೇ ಅಲ್ಲದೇ ಇತರ ಉಪಯುಕ್ತ ಕೀಟ, ಪಕ್ಷಿ – ಪ್ರಾಣಿ, ಜಾನುವಾರು ಹಾಗೂ ಮನುಷ್ಯರಿಗೂ ವಿಷಕಾರಿ. ಹೀಗಾಗಿ ಕೀಟನಾಶಕ ಉಪಯೋಗಿಸುವಾಗ ಎಚ್ಚರ ಅಗತ್ಯ. ಸಿಂಪರಣೆ ಸಂದರ್ಭದಲ್ಲಿ ಏನೆಲ್ಲ ಎಚ್ಚರ ವಹಿಸಬೇಕು ಗೊತ್ತೇ?
* ಕೀಟನಾಶಕ ಸಿಂಪರಣೆಯನ್ನು ಗಾಳಿ ಬೀಸುವ ದಿಕ್ಕಿನಿಂದ ಮಾಡಬೇಕು. ಹೀಗೆ ಮಾಡಿದರೆ ಕೀಟನಾಶಕ ಸಿಂಪರಣೆ ಮಾಡುವ ವ್ಯಕ್ತಿ ಮೇಲೆ ಬೀಳುವುದಿಲ್ಲ. ಆದರೆ, ವೇಗವಾಗಿ ಗಾಳಿ ಬೀಸುತ್ತಿರುವಾಗ ಸಿಂಪರಣೆ ಬೇಡ. ಸಿಂಪರಣೆ ಯನು ಬೆಳಗಿನ ಅಥವಾ ಸಂಜೆಯ ಸಮಯದಲ್ಲಿ ಮಾಡಬೇಕು.
• ಬೆಳೆಗಳು ಹೂ ಬಿಡುತ್ತಿರುವಾಗ ಸಾಧ್ಯವಾದಷ್ಟು ಕೀಟನಾಶಕಗಳನ್ನು ಉಪಯೋಗಿಸಬಾರದು. ಅನಿವಾರ್ಯ ಸಂದರ್ಭಗಳಲ್ಲಿ, ಸಾಯಂಕಾಲದ ವೇಳೆಯಲ್ಲಿ ಸಿಂಪರಣೆ ಮಾಡಬೇಕು. ಇದರಿಂದ ಪರಾಗಸ್ಪರ್ಶ ಮಾಡುವ ಕೀಟಗಳು ಮತ್ತು ಜೇನುನೊಣಗಳಿಗೆ ಹೆಚ್ಚಿನ ಹಾನಿಯಾಗುವುದಿಲ್ಲ.
•ಕೀಟನಾಶಕದ ಡಬ್ಬಿಯ ಮೇಲೆ ಇರುವ ಮಾಹಿತಿ ತಿಳಿದುಕೊಂಡು ಅಲ್ಲಿ ಕೊಟ್ಟಿರುವ ಸೂಚನೆಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಕೀಟನಾಶಕಗಳನ್ನು ಮೂಲ ಡಬ್ಬಿಯಿಂದ ಮತ್ತೊಂದು ಡಬ್ಬಿಗೆ ವರ್ಗಾಯಿಸಬಾರದು. ಶಿಫಾರಸು ಮಾಡಿದ ಕೀಟನಾಶಕಗಳನ್ನು ಮಾತ್ರ ಸಿಂಪರಣೆಗೆ ಬಳಸಬೇಕು.
• ಸಿಂಪರಣೆ ಮಾಡುವ ಸ್ಟೇಯ ಸರಿಯಾಗಿರಬೇಕು. ಸೋರುವ ಸ್ನೇಯ ಗಳನ್ನು ಉಪಯೋಗಿಸಬಾರದು. ಆರೋಗ್ಯವಂತ ಹಾಗೂ ವಯಸ್ಕರು ಮಾತ್ರ ಸಿಂಪರಣೆ ಮಾಡಬೇಕು. ಶರೀರದ ಮೇಲೆ ಗಾಯ ಇರುವವರು, ಮಕ್ಕಳು ಅಥವಾ ಕೀಟನಾಶಕಗಳ ಬಗ್ಗೆ ಅರಿಯದವರು ಸಿಂಪರಣೆಯಲ್ಲಿ ಭಾಗಿಯಾಗಬಾರದು.
• ಬಾಯಿಯಿಂದ ಕೊಳವೆಯೊಳಕ್ಕೆ ಕೀಟನಾಶಕವನ್ನಾಗಲಿ ಅಥವಾ ಆದರ ದ್ರಾವಣವನ್ನಾಗಲಿ ಎಳೆದುಕೊಳ್ಳಬಾರದು. ಕೀಟನಾಶಕ ಅಳೆಯುವಾಗಲೂ ಕೈಗೆ ಗೌಸ್ ಹಾಕಿಕೊಳ್ಳಬೇಕು.
• ಸಿಂಪರಣೆ ಮಾಡುವ ಮಿಶ್ರಣವನ್ನು ಯಾವತ್ತೂ ಮನೆಯಲ್ಲಿ ಅಥವಾ ಕೋಣೆಯಲ್ಲಿ ಮಾಡಬಾರದು. ಮನೆಯ ಹೊರಗೆ ಅಥವಾ ಬಯಲು ಪ್ರದೇಶದಲ್ಲಿ ಮಿಶ್ರಣ ಮಾಡುವುದು ಸೂಕ್ತ,
• ಕೀಟನಾಶಕಗಳ ಡಬ್ಬಿಗಳ ಮುಚ್ಚಳವನ್ನು ಪ್ರತ್ಯೇಕ ಚಾಕುವಿನಿಂದತೆಗೆಯಬೇಕು. ಈ ಚಾಕುಗಳನ್ನು ಬೇರೆ ಕೆಲಸಗಳಿಗೆ ಉಪಯೋಗಿಸಕೂಡದು. ಸಿಂಪರಣೆ ಮಿಶ್ರಣವನ್ನು ಬರಿ ಕೈಯಲ್ಲಿ ತಯಾರಿಸಬಾರದು. ರಬ್ಬರ್ ಗೌಸ್ ಅಥವಾ ಉದ್ದನೆಯ ಹಿಡಿಕೆ ಬಳಸಿ ತಯಾರಿಸಬೇಕು.
* ಶಿಫಾರಸು ಮಾಡಿದ ಪ್ರಮಾಣದಲ್ಲಿ ಮಾತ್ರ ಕೀಟನಾಶಕ ಉಪಯೋಗಿಸಬೇಕು. ಅಳತೆ ಮಾಡಲು ಪ್ರತ್ಯೇಕ ಮಾಪಕ ಉಪಯೋಗಿಸಬೇಕು. ಮನೆ ಬಳಕೆಯ ಪಾತ್ರೆಗಳನ್ನು ಮಾಪಕವಾಗಿ ಬಳಸಬಾರದು.