This is the title of the web page
This is the title of the web page

Live Stream

November 2024
S M T W T F S
 12
3456789
10111213141516
17181920212223
24252627282930

| Latest Version 9.4.1 |

International NewsNational NewsSports NewsState News

Asia Cup 2023: ನಾಳೆಯಿಂದ ಏಷ್ಯಾಕಪ್​; 15 ದಿನಗಳ ಅಂತರದಲ್ಲಿ 3 ಬಾರಿ ಇಂಡೋ-ಪಾಕ್​ ಮುಖಾಮುಖಿ!

Asia Cup 2023: ನಾಳೆಯಿಂದ ಏಷ್ಯಾಕಪ್​; 15 ದಿನಗಳ ಅಂತರದಲ್ಲಿ 3 ಬಾರಿ ಇಂಡೋ-ಪಾಕ್​ ಮುಖಾಮುಖಿ!

ಬೆಂಗಳೂರು: ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್​​ ಮಂಡಳಿಯ ತಿಕ್ಕಾಟದಿಂದಾಗಿ ಅನುಮಾನವೆನಿಸಿದ್ದ ಏಷ್ಯಾಕಪ್​ ಟೂರ್ನಿ ಬಳಿಕ ಏಷ್ಯನ್​ ಕ್ರಿಕೆಟ್​ ಕೌನ್ಸಿಲ್​ ಮತ್ತು ಐಸಿಸಿಯ ಮಧ್ಯಸ್ಥಿಕೆಯಿಂದ ಕೊನೆಗೂ ಹೈಬ್ರೀಡ್​ ಮಾದರಿಯಲ್ಲಿ ಕೂಟವನ್ನು ನಡೆಸಲು ತೀರ್ಮಾನಕ್ಕೆ ಬರಲಾಯಿತು. ಇದಕ್ಕೆ ಆತಿಥೇಯ ಪಾಕ್​ ಕ್ರಿಕೆಟ್​ ಮಂಡಳಿಯೂ ಒಲ್ಲದ ಮನಸ್ಸಿನಿಂದಲೇ ಸಮ್ಮತಿ ಸೂಚಿಸಿತ್ತು. ಅಂತಿಮವಾಗಿ ಫೈನಲ್​ ಸೇರಿ ಭಾರತದ ಪಾಲಿನ ಪಂದ್ಯಗಳು ಶ್ರೀಲಂಕಾದಲ್ಲಿ ಮತ್ತು ಒಂದು ಎಲಿಮಿನೇಟರ್​ ಪಂದ್ಯ ಸೇರಿ ಒಟ್ಟು ನಾಲ್ಕು ಪಂದ್ಯಗಳನ್ನು ಪಾಕ್​ನಲ್ಲಿ ನಡೆಸಲು ನಿರ್ಧರಿಸಲಾಯಿತು. ಇದೀಗ ಈ ಮಹತ್ವದ ಟೂರ್ನಿ ಬುಧವಾರದಿಂದ(ಆಗಸ್ಟ್​ 30) ಆರಂಭವಾಗಲಿದೆ. 50 ಓವರ್​ ಮಾದರಿಯಲ್ಲಿ ಈ ಟೂರ್ನಿಯ ಪಂದ್ಯಗಳು ನಡೆಯಲಿವೆ. ಇನ್ನೊಂದು ತಿಂಗಳಲ್ಲಿ ಏಕದಿನ ವಿಶ್ವಕಪ್​ ಟೂರ್ನಿ ಆರಂಭವಾಗುವ ನಿಟ್ಟಿನಲ್ಲಿ ಬಾಂಗ್ಲಾದೇಶ, ಭಾರತ, ಪಾಕಿಸ್ತಾನ, ಶ್ರೀಲಂಕಾ ಮತ್ತು ಅಫಘಾನಿಸ್ತಾನ ತಂಡಗಳಿಗೆ ಈ ಕೂಟ ಮಹತ್ವದ್ದಾಗಿದೆ.

ಉದ್ಘಾಟನ ಪಂದ್ಯಲ್ಲಿ ಪಾಕ್​ಗೆ ನೇಪಾಳ ಸವಾಲು
ಟೂರ್ನಿಯ ಆತಿಥ್ಯ ವಹಿಸಿಕೊಂಡಿರುವ ಪಾಕಿಸ್ತಾನ ಉದ್ಘಾಟನ ಪಂದ್ಯದಲ್ಲಿ ನೇಪಾಳ ವಿರುದ್ಧ ಅದೃಷ್ಟ ಪರೀಕ್ಷೆಗೆ ಇಳಿಯಲಿದೆ. ಈ ಪಂದ್ಯ ಮಧ್ಯಾಹ್ನ ಮೂರು ಗಂಟೆಗೆ ಆರಂಭವಾಗಲಿದೆ. ಏಕದಿನ ಶ್ರೇಯಾಂಕದಲ್ಲಿ ಅಗ್ರಸ್ಥಾನ ಪಡೆದಿರುವ ಪಾಕಿಸ್ತಾನ ಈ ಪಂದ್ಯದ ನೆಚ್ಚಿನ ತಂಡವಾಗಿದೆ.

ಲೈವ್ ಸ್ಟ್ರೀಮಿಂಗ್ ಮತ್ತು ನೇರ ಪ್ರಸಾರ
ಈ ಬಾರಿಯ ಏಷ್ಯಾಕಪ್​ ಟೂರ್ನಿ ಉಚಿತವಾಗಿ ಲೈವ್ ಸ್ಟ್ರೀಮಿಂಗ್ ಆಗಲಿದೆ. ಇದು ಡಿಸ್ನಿ+ಹಾಟ್‌ಸ್ಟಾರ್​ನಲ್ಲಿ ಪ್ರಸಾರಗೊಳ್ಳಲಿದೆ. ಟೂರ್ನಿಯ ಡಿಜಿಟಲ್​ ಪ್ರಸಾರದ ಹಕ್ಕನ್ನು ಪಡೆದಿರುವ ಕಾರಣ ಡಿಸ್ನಿ+ಹಾಟ್‌ಸ್ಟಾರ್ ಮೊಬೈಲ್ ಅಪ್ಲಿಕೇಶನ್ ಮೂಲಕ ಪಂದ್ಯವನ್ನು ಯಾವುದೇ ವೆಚ್ಚವಿಲ್ಲದೆ ವೀಕ್ಷಿಸಬಹುದು. ಆದರೆ ಈ ಲೈವ್ ಸ್ಟ್ರೀಮಿಂಗ್ ಸೇವೆಯು ಮೊಬೈಲ್ ಅಪ್ಲಿಕೇಶನ್‌ಗೆ ಮಾತ್ರ ಸೀಮಿತವಾಗಿದೆ.

ಒಂದೇ ಗುಂಪಿನಲ್ಲಿ ಭಾರತ-ಪಾಕ್​
ಭಾರತ, ನೇಪಾಳ ಮತ್ತು ಪಾಕಿಸ್ತಾನ ʼಎʼ ಗುಂಪಿನಲ್ಲಿ ಸ್ಥಾನ ಪಡೆದಿದೆ. ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಫಘಾನಿಸ್ತಾನ ʼಬಿʼ ಗುಂಪಿನಲ್ಲಿ ಕಾಣಿಸಿಕೊಂಡಿದೆ. ಒಟ್ಟು 13 ಪಂದ್ಯಗಳು ನಡೆಯಲಿದ್ದು ಇದರಲ್ಲಿ ನಾಲ್ಕು ಪಂದ್ಯಗಳು ಪಾಕಿಸ್ತಾನದಲ್ಲಿ ನಡೆದರೆ ಫೈನಲ್‌ ಸೇರಿ 9 ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯಲಿದೆ.

ಮೂರು ಬಾರಿ ಇಂಡೋ-ಪಾಕ್​ ಮುಖಾಮುಖಿ ಸಾಧ್ಯತೆ
ಈ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ಮೂರು ಬಾರಿ ಮುಖಾಮುಖಿಯಾಗುವ ಸಾಧ್ಯತೆಗಳಿವೆ. ಮೊದಲನೆಯದಾಗಿ ಉಭಯ ತಂಡಗಳ ನಡುವಿನ ಪೈಪೋಟಿ ಲೀಗ್ ಸುತ್ತಿನಲ್ಲಿ ನಡೆಯಲಿದೆ. ಇದಾದ ಬಳಿಕ ಸೂಪರ್-4 ಸುತ್ತಿನಲ್ಲೂ ಉಭಯ ತಂಡಗಳು ಸೆಣಸಬಹುದು. ಬಳಿಕ ಅಂಕಪಟ್ಟಿಯಲ್ಲಿ ಉಭಯ ತಂಡಗಳು ಅಗ್ರ ಎರಡು ಸ್ಥಾನ ಪಡೆದರೆ, ಎರಡೂ ತಂಡಗಳು ಫೈನಲ್​ನಲ್ಲೂ ಹೋರಾಟ ನಡೆಸಲಿವೆ. ಹೀಗಾದರೆ 15 ದಿನಗಳ ಅಂತರದಲ್ಲಿ ಮೂರು ಪಂದ್ಯಗಳನ್ನು ಆಡಿದಂತಾಗುತ್ತದೆ. ಭಾರತ ಮತ್ತು ಪಾಕ್​(ind vs pak) ತನ್ನ ಮೊದಲ ಪಂದ್ಯ ಸೆಪ್ಟೆಂಬರ್​ 2ರಂದು ಲಂಕಾದ ಕ್ಯಾಂಡಿಯಲ್ಲಿ ಆಡಲಿದೆ.

ಏಷ್ಯಾಕಪ್ 2023 ವೇಳಾಪಟ್ಟಿ
ಆಗಸ್ಟ್ 30: ಪಾಕಿಸ್ತಾನ -ನೇಪಾಳ, ಮುಲ್ತಾನ್, ಪಂದ್ಯ ಆರಂಭ ಮಧ್ಯಾಹ್ನ 2:30ಕ್ಕೆ

ಆಗಸ್ಟ್ 31: ಬಾಂಗ್ಲಾದೇಶ -ಶ್ರೀಲಂಕಾ, ಕ್ಯಾಂಡಿ, ಮಧ್ಯಾಹ್ನ 3 ಗಂಟೆಗೆ

ಸೆಪ್ಟೆಂಬರ್ 2: ಪಾಕಿಸ್ತಾನ -ಭಾರತ, ಕ್ಯಾಂಡಿ, ಮಧ್ಯಾಹ್ನ 3 ಗಂಟೆಗೆ

ಸೆಪ್ಟೆಂಬರ್ 3: ಬಾಂಗ್ಲಾದೇಶ -ಅಫ್ಘಾನಿಸ್ತಾನ, ಲಾಹೋರ್, ಮಧ್ಯಾಹ್ನ 2:30

ಸೆಪ್ಟೆಂಬರ್ 4: ಭಾರತ -ನೇಪಾಳ, ಕ್ಯಾಂಡಿ, ಮಧ್ಯಾಹ್ನ 3 ಗಂಟೆಗೆ

ಸೆಪ್ಟೆಂಬರ್ 5: ಶ್ರೀಲಂಕಾ -ಅಫ್ಘಾನಿಸ್ತಾನ, ಲಾಹೋರ್, ಮಧ್ಯಾಹ್ನ 2:30

ಸೆಪ್ಟೆಂಬರ್ 6: A1 vs B2, ಲಾಹೋರ್, ಮಧ್ಯಾಹ್ನ 2:30

ಸೆಪ್ಟೆಂಬರ್ 9: B1 vs B2, ಕೊಲಂಬೊ, 3 ಗಂಟೆಗೆ

ಸೆಪ್ಟೆಂಬರ್ 10: A1 ವಿರುದ್ಧ A2, ಕೊಲಂಬೊ, ಮಧ್ಯಾಹ್ನ 3 ಗಂಟೆಗೆ

ಸೆಪ್ಟೆಂಬರ್ 12: A2 vs B1, ಕೊಲಂಬೊ, ಮಧ್ಯಾಹ್ನ 3 ಗಂಟೆಗೆ

ಸೆಪ್ಟೆಂಬರ್ 14: A1 vs B1, ಕೊಲಂಬೊ, ಮಧ್ಯಾಹ್ನ 3 ಗಂಟೆಗೆ

ಸೆಪ್ಟೆಂಬರ್ 15: A2 vs B2, ಕೊಲಂಬೊ, ಮಧ್ಯಾಹ್ನ 3 ಗಂಟೆಗೆ

ಸೆಪ್ಟೆಂಬರ್ 17: ಫೈನಲ್, ಕೊಲಂಬೊ, ಮಧ್ಯಾಹ್ನ 3 ಗಂಟೆಗೆ

Nimma Suddi
";