SWR Recruitment 2023: ರೈಲ್ವೆ ಡಿಪಾರ್ಟ್ಮೆಂಟ್ನಲ್ಲಿ (Railway Department) ಕೆಲಸ ಹುಡುಕುತ್ತಿದ್ದೀರಾ? ಇಲ್ಲಿದೆ ನೋಡಿ ಬಂಪರ್ ಆಫರ್. ನೈರುತ್ಯ ರೈಲ್ವೆ (South Western Railway) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 713 ಅಸಿಸ್ಟೆಂಟ್ ಲೋಕೊ ಪೈಲಟ್, ಜೂನಿಯರ್ ಎಂಜಿನಿಯರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಸೆಪ್ಟೆಂಬರ್ 2, 2023 ಅಂದರೆ ನಾಳೆಯೇ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಆನ್ಲೈನ್ (Online) ಮೂಲಕ ಅಪ್ಲೈ ಮಾಡಬೇಕು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಕರ್ನಾಟಕದಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.
ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ ನೈರುತ್ಯ ರೈಲ್ವೆ
ಹುದ್ದೆಯ ಹೆಸರು ಅಸಿಸ್ಟೆಂಟ್ ಲೋಕೊ ಪೈಲಟ್, ಜೂನಿಯರ್ ಎಂಜಿನಿಯರ್
ಒಟ್ಟು ಹುದ್ದೆಗಳು 713
ಉದ್ಯೋಗದ ಸ್ಥಳ ಕರ್ನಾಟಕ
ವೇತನ ನಿಗದಿಪಡಿಸಿಲ್ಲ
ವಿದ್ಯಾರ್ಹತೆ ಡಿಪ್ಲೊಮಾ, ಐಟಿಐ, ಬಿ.ಎಸ್ಸಿ
ಅರ್ಜಿ ಸಲ್ಲಿಸಲು ಕೊನೆಯ ದಿನ ಸೆಪ್ಟೆಂಬರ್ 2, 2023 (ನಾಳೆ)
ಹುದ್ದೆಯ ಮಾಹಿತಿ:
ಅಸಿಸ್ಟೆಂಟ್ ಲೋಕೊ ಪೈಲಟ್- 588
ಟೆಕ್ನಿಷಿಯನ್ ಗ್ರೇಡ್-1 ಸಿಗ್ನಲ್- 14
ಟೆಕ್ನಿಷಿಯನ್ ಗ್ರೇಡ್-3 ಬ್ಲಾಕ್ಸ್ಮಿತ್-5
ಟೆಕ್ನಿಷಿಯನ್ ಗ್ರೇಡ್- 3 ವೆಲ್ಡರ್- 2
ಜೂನಿಯರ್ ಎಂಜಿನಿಯರ್/ ಬ್ರಿಡ್ಜ್-2
ಜೂನಿಯರ್ ಎಂಜಿನಿಯರ್/ ಪಿ.ವೇ- 38
ಜೂನಿಯರ್ ಎಂಜಿನಿಯರ್/ ವರ್ಕ್ಸ್- 18
ಜೂನಿಯರ್ ಎಂಜಿನಿಯರ್/ ಕ್ಯಾರಿಯೇಜ್ & ವೇಗಾನ್- 13
ಜೂನಿಯರ್ ಎಂಜಿನಿಯರ್/ ಡೀಸೆಲ್ ಎಲೆಕ್ಟ್ರಿಕಲ್- 1
ಜೂನಿಯರ್ ಎಂಜಿನಿಯರ್/ ಎಲೆಕ್ಟ್ರಿಕಲ್/ ಜನರಲ್ ಸರ್ವೀಸಸ್-4
ಜೂನಿಯರ್ ಎಂಜಿನಿಯರ್ / ಎಲೆಕ್ಟ್ರಿಕಲ್ / ಟಿಆರ್ಡಿ-5
ಜೂನಿಯರ್ ಎಂಜಿನಿಯರ್/ ಎಸ್ & ಟಿ/ ಸಿಗ್ನಲ್- 4
ಜೂನಿಯರ್ ಎಂಜಿನಿಯರ್/ ಟ್ರ್ಯಾಕ್ ಮೆಷಿನ್- 19
ವಿದ್ಯಾರ್ಹತೆ:
ಅಸಿಸ್ಟೆಂಟ್ ಲೋಕೊ ಪೈಲಟ್- 10ನೇ ತರಗತಿ, ಆರ್ಮೇಚರ್ ಮತ್ತು ಕಾಯಿಲ್ ವಿಂಡರ್/ ಎಲೆಕ್ಟ್ರಿಷಿಯನ್/ ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್/ ಫಿಟ್ಟರ್/ ಹೀಟ್ ಇಂಜಿನ್/ ಇನ್‌ಸ್ಟ್ರುಮೆಂಟ್ ಮೆಕ್ಯಾನಿಕ್/ ಮೆಷಿನಿಸ್ಟ್/ ಮೆಕ್ಯಾನಿಕ್ ಡೀಸೆಲ್/ ಮೆಕ್ಯಾನಿಕ್ ಮೋಟಾರ್ ವೆಹಿಕಲ್/ ಮಿಲ್‌ವ್ರೈಟ್ ಮೆಂಟೆನೆನ್ಸ್ ಮೆಕ್ಯಾನಿಕ್/ ಮೆಕ್ಯಾನಿಕ್ ರೇಡಿಯೋ ಮತ್ತು ಟಿವಿ/ ರೆಫ್ರಿಜರೇಶನ್ ಮತ್ತು ಏರ್ ಕಂಡೀಷನಿಂಗ್ ಮೆಕ್ಯಾನಿಕ್/ಟ್ರೇಸಿಂಗ್ ಮೆಕ್ಯಾನಿಕ್/ ಟರ್ನರ್/ ವೈಯರ್ ಮ್ಯಾನ್ನಲ್ಲಿ ITI, ಮೆಕ್ಯಾನಿಕಲ್ / ಎಲೆಕ್ಟ್ರಿಕಲ್ / ಎಲೆಕ್ಟ್ರಾನಿಕ್ಸ್ / ಆಟೋಮೊಬೈಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ.
ಟೆಕ್ನಿಷಿಯನ್ ಗ್ರೇಡ್-1 ಸಿಗ್ನಲ್- ಫಿಜಿಕ್ಸ್/ ಎಲೆಕ್ಟ್ರಾನಿಕ್ಸ್/ ಕಂಪ್ಯೂಟರ್ ಸೈನ್ಸ್/ ಇನ್ಫರ್ಮೇಶನ್ ಟೆಕ್ನಾಲಜಿ/ ಇನ್ಸ್ಟ್ರುಮೆಂಟೇಶನ್ನಲ್ಲಿ ಬಿ.ಎಸ್ಸಿ
You May Like
Canada is looking for skilled workers like you!
ImmigCanada
by Taboola Sponsored Links
ಟೆಕ್ನಿಷಿಯನ್ ಗ್ರೇಡ್-3 ಬ್ಲಾಕ್ಸ್ಮಿತ್- 10ನೇ ತರಗತಿ, ಫಾರ್ಗರ್ & ಹೀಟ್ ಟ್ರೀಟರ್ನಲ್ಲಿ ITI
ಟೆಕ್ನಿಷಿಯನ್ ಗ್ರೇಡ್- 3 ವೆಲ್ಡರ್- 10ನೇ ತರಗತಿ, ವೆಲ್ಡರ್ / ವೆಲ್ಡರ್ (ಗ್ಯಾಸ್ ಮತ್ತು ಎಲೆಕ್ಟ್ರಿಕ್)/ ಗ್ಯಾಸ್ ಕಟ್ಟರ್ / ಸ್ಟ್ರಕ್ಚರಲ್ ವೆಲ್ಡರ್ / ವೆಲ್ಡರ್ (ಪೈಪ್) / ವೆಲ್ಡರ್ (TIG/MIG) ನಲ್ಲಿ ITI
ಜೂನಿಯರ್ ಎಂಜಿನಿಯರ್/ ಬ್ರಿಡ್ಜ್- ಡಿಪ್ಲೊಮಾ/ ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಬಿ.ಎಸ್ಸಿ
ಜೂನಿಯರ್ ಎಂಜಿನಿಯರ್/ ಪಿ.ವೇ- ಡಿಪ್ಲೊಮಾ/ ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಬಿ.ಎಸ್ಸಿ
ಜೂನಿಯರ್ ಎಂಜಿನಿಯರ್/ ವರ್ಕ್ಸ್- ಡಿಪ್ಲೊಮಾ/ ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಬಿ.ಎಸ್ಸಿ
ಜೂನಿಯರ್ ಎಂಜಿನಿಯರ್/ ಕ್ಯಾರಿಯೇಜ್ & ವೇಗಾನ್- ಮೆಕ್ಯಾನಿಕಲ್/ ಎಲೆಕ್ಟ್ರಿಕಲ್/ ಎಲೆಕ್ಟ್ರಾನಿಕ್ಸ್/ ಮ್ಯಾನುಫ್ಯಾಕ್ಚರಿಂಗ್/ ಮೆಕಟ್ರಾನಿಕ್ಸ್/ ಇಂಡಸ್ಟ್ರಿಯಲ್/ ಮೆಷಿನಿಂಗ್/ ಇನ್ಸ್ಟ್ರುಮೆಂಟೇಶನ್ & ಕಂಟ್ರೋಲ್/ ಟೂಲ್ಸ್ & ಮೆಷಿನಿಂಗ್/ ಟೂಲ್ಸ್ & ಡೈ ಮೇಕಿಂಗ್/ ಆಟೊಮೊಬೈಲ್/ ಪ್ರೊಡಕ್ಷನ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ
ಜೂನಿಯರ್ ಎಂಜಿನಿಯರ್/ ಡೀಸೆಲ್ ಎಲೆಕ್ಟ್ರಿಕಲ್- ಮೆಕ್ಯಾನಿಕಲ್/ ಎಲೆಕ್ಟ್ರಿಕಲ್/ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ
ಜೂನಿಯರ್ ಎಂಜಿನಿಯರ್/ ಎಲೆಕ್ಟ್ರಿಕಲ್/ ಜನರಲ್ ಸರ್ವೀಸಸ್- ಮೆಕ್ಯಾನಿಕಲ್/ ಎಲೆಕ್ಟ್ರಿಕಲ್/ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ
ಜೂನಿಯರ್ ಎಂಜಿನಿಯರ್ / ಎಲೆಕ್ಟ್ರಿಕಲ್ / ಟಿಆರ್ಡಿ- ಮೆಕ್ಯಾನಿಕಲ್/ ಎಲೆಕ್ಟ್ರಿಕಲ್/ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ
ಜೂನಿಯರ್ ಎಂಜಿನಿಯರ್/ ಎಸ್ & ಟಿ/ ಸಿಗ್ನಲ್- ಎಲೆಕ್ಟ್ರಿಕಲ್/ ಎಲೆಕ್ಟ್ರಾನಿಕ್ಸ್/ ಇನ್ಫರ್ಮೇಶನ್ ಟೆಕ್ನಾಲಜಿ/ ಕಮ್ಯುನಿಕೇಶನ್ ಎಂಜಿನಿಯರಿಂಗ್/ ಕಂಪ್ಯೂಟರ್ ಸೈನ್ಸ್ & ಎಂಜಿನಿಯರಿಂಗ್/ ಕಂಪ್ಯೂಟರ್ ಸೈನ್ಸ್/ ಕಂಪ್ಯೂಟರ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ
ಜೂನಿಯರ್ ಎಂಜಿನಿಯರ್/ ಟ್ರ್ಯಾಕ್ ಮೆಷಿನ್- ಮೆಕ್ಯಾನಿಕಲ್/ ಪ್ರೊಡಕ್ಷನ್/ ಆಟೊಮೊಬೈಲ್/ ಎಲೆಕ್ಟ್ರಿಕಲ್/ ಎಲೆಕ್ಟ್ರಾನಿಕ್ಸ್/ ಇನ್ಸ್ಟ್ರುಮೆಂಟೇಶನ್ & ಕಂಟ್ರೋಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ
ವಯೋಮಿತಿ:
ನೈರುತ್ಯ ರೈಲ್ವೆ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಜನವರಿ 1, 2024ಕ್ಕೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 42 ವರ್ಷ ಮೀರಿರಬಾರದು.
ವಯೋಮಿತಿ ಸಡಿಲಿಕೆ:
OBC ಅಭ್ಯರ್ಥಿಗಳು- 3 ವರ್ಷ
SC/ST ಅಭ್ಯರ್ಥಿಗಳು- 5 ವರ್ಷ
PwBD ಅಭ್ಯರ್ಥಿಗಳು- 10 ವರ್ಷ
ಅರ್ಜಿ ಶುಲ್ಕ:
ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿಸುವಂತಿಲ್ಲ.
ವೇತನ:
ನಿಗದಿಪಡಿಸಿಲ್ಲ.
ಉದ್ಯೋಗದ ಸ್ಥಳ:
ಕರ್ನಾಟಕ
ತಮಿಳುನಾಡು
ಆಂಧ್ರ ಪ್ರದೇಶ
ಆಯ್ಕೆ ಪ್ರಕ್ರಿಯೆ:
ಕಂಪ್ಯೂಟರ್ ಆಧಾರಿತ ಪರೀಕ್ಷೆ
ಕಂಪ್ಯೂಟರ್ ಆಧಾರಿತ ಆಪ್ಟಿಟ್ಯೂಡ್ ಟೆಸ್ಟ್
ದಾಖಲಾತಿ ಪರಿಶೀಲನೆ
ಮೆಡಿಕಲ್ ಎಕ್ಸಾಮಿನೇಶನ್
ಸಂದರ್ಶನ
ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 03/08/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಸೆಪ್ಟೆಂಬರ್ 2, 2023