ಬಾಗಲಕೋಟೆ
ಮಕ್ಕಳ ಸಾಹಿತ್ಯ ಬಳಗದ ಅಡಿಯಲ್ಲಿ ಪ್ರತಿ ಭಾನುವಾರ ಸಂಜೆ -5:30 ಕ್ಕೆ ಕ್ಲಬ್ ಹೌಸ್ ಆ್ಯಪ್ ನಲ್ಲಿ ನಡೆಯುತ್ತಿರುವ ಪುಸ್ತಕ ಅವಲೋಕನ ಭಾಗ-3 ರಲ್ಲಿ ಈ ಭಾನುವಾರ (03.09.2023) ರಂದು ಬೀಳಗಿಯ ಮಕ್ಕಳ ಸಾಹಿತಿ ಸೋಮಲಿಂಗ ಬೇಡರ ಅವರ ‘ಕೆಂಪು ಸ್ವೆಟರ್’ ಮಕ್ಕಳ ಕಥಾ ಸಂಕಲನವನ್ನು ಹುನಗುಂದ ತಾಲೂಕಿನ ಕಡಿವಾಲ ಸರಕಾರಿ ಪ್ರೌಢಶಾಲೆಯಲ್ಲಿ ಅಧ್ಯಾಪಕಿಯಾಗಿರುವ ಡಾ. ಶಿವಗಂಗಾ ರಂಜನಗಿ ಅವಲೋಕನ ಮಾಡಲಿದ್ದಾರೆ.
ಈಗಾಗಲೇ ಕೇಂದ್ರ ಸಾಹಿತ್ಯ ಅಕಾಡೆಮಿ ಬಾಲ ಸಾಹಿತ್ಯ ಪುರಸ್ಕಾರ ಪಡೆದ ವಿಜಯಶ್ರೀ ಹಾಲಾಡಿಯವರ ‘ಸೂರಕ್ಕಿ ಗೇಟ್’, ಡಾ. ಕೆ. ಶಿವಲಿಂಗಪ್ಪ ಹಂದಿಹಾಳು ಅವರ ‘ನೋಟ್ ಬುಕ್’, ಗುಂಡುರಾವ ದೇಸಾಯಿ ಅವರ ‘ಮಕ್ಕಳೇನು ಸಣ್ಣವರಲ್ಲ’ ಶ್ರೀ ತಮ್ಮಣ್ಣ ಬೀಗಾರ ಅವರ ‘ಕೋಲ್ಜೇನು’, ಡಾ.ಲಲಿತಾ ಕೆ ಹೊಸಪ್ಯಾಟಿ ಅವರ ‘ಮಳೆಯಾದಳು ನೀರಾ’ ಡಾ.ಬಸು.ಬೇವಿನಗಿಡದ ಅವರ ‘ಓಡಿಹೋದ ಹುಡುಗ’ ಕೃತಿಗಳ ಅವಲೋಕನ ಹಾಗೂ ಡಾ. ಆನಂದ ಪಾಟೀಲರವರಿಂದ ಕಳೆದ ವಾರ ಜಮೈಕಾದ ಕವಿ ಜೇಮ್ಸ್ ಬೆರ್ರಿಯ ಮಕ್ಕಳ ಕಾವ್ಯ ಕುರಿತ ವಿಶೇಷ ಉಪನ್ಯಾಸ ಈ ವೇದಿಕೆಯಲ್ಲಿ ನಡೆದಿವೆ.
ಆಸಕ್ತರು ಈ ಕೆಳಕಂಡ ಲಿಂಕ್ ಮೂಲಕ
https://www.clubhouse.com/invite/0dvuk4bpENzgpvXoE83nNQ1wyX5vCJvgOg:DT4mtTAq18UWXocXPPwyfCkZvWGoNCzFTzwPvf8kZVo
ಅವಲೋಕನ ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ ಎಂದು ಬಳಗದ ರಾಜಾ ಎಂ.ಬಿ. ಯಲ್ಲಪ್ಪ ಹಂದ್ರಾಳ ಹಾಗೂ ಅಶೋಕ ಬಳ್ಳಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.