ಬಾಗಲಕೋಟೆ
ಹೊಸ ಸಂಶೋಧನಾತ್ಮಕ ಕಲಿಕಾ ಪ್ರಕ್ರಿಯೆಗಳನ್ನು ಬೋಧನೆಯಲ್ಲಿ ಅಳವಡಿಸಿಕೊಳ್ಳುವುದರಿಂದ ಅಧ್ಯಾಪಕರಲ್ಲಿ ಕ್ರಿಯಾಶೀಲತೆ ಹೆಚ್ಚುತ್ತದೆ ಎಂದು ಬವಿವ ಸಂಘದ ಮುಖ್ಯ ಸಲಹೆಗಾರರು, ಅಕ್ಕಮಹಾದೇವಿ ಮಹಿಳಾ ವಿವಿ ವಿಶ್ರಾಂತ ಕುಲಪತಿ ಡಾ.ಮೀನಾ ಚಂದಾವರಕರ ಹೇಳಿದರು.
ನಗರದ ಬವಿವ ಸಂಘದ ಅಕ್ಕಮಹಾದೇವಿ ಮಹಿಳಾ ಕಲಾ, ವಿಜ್ಞಾನ, ವಾಣಿಜ್ಯ ಮಹಾವಿದ್ಯಾಲಯದಲ್ಲಿ ಅಧ್ಯಾಪಕರು ಮತ್ತು ಸಿಬ್ಬಂದಿಯ ತಾಂತ್ರಿಕ ಕೌಶಲ್ಯಗಳನ್ನು ಹೆಚ್ಚಿಸಲು ಕಲಿಕೆಯೊಂದಿಗೆ ತಂತ್ರಗಳು ಕುರಿತು ೫ ದಿನ ನಡೆಯುವ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಜೀವನಕ್ಕಾಗಿ ಶಿಕ್ಷಣ ಎಂಬ ಭಾವನೆಯೊಂದಿಗೆ ವಿದ್ಯಾರ್ಥಿಗಳನ್ನು ಬೌದ್ಧಿಕ ಹಾಗೂ ತಾಂತ್ರಿಕವಾಗಿ ಅನುವುಗೊಳಿಸುವುದು ಮುಖ್ಯವಾಗಿದೆ. ಬೋಧನಾ ವಿಧಾನಗಳ ಬದಲಾವಣೆ ಮತ್ತು ಶಿಕ್ಷಕರು ಮತ್ತು ಉಪನ್ಯಾಸಕರಲ್ಲಿ ವೃತ್ತಿಪರ ಕೌಶಲ್ಯದ ಗುಣಮಟ್ಟ ಅಭಿವೃದ್ಧಿಪಡಿಸುವ ಮೂಲಕ ಪ್ರಸ್ತುತ ವಿದ್ಯಮಾನಗಳೊಂದಿಗೆ ತಮ್ಮನ್ನು ತಾವು ಹೇಗೆ ನವೀಕರಿಸಿಕೊಳ್ಳಬೇಕಿದೆ ಎಂದ ಅವರು ವಿದ್ಯಾರ್ಥಿಗಳ ಗಮನ ಸೆಳೆಯಲು ಮತ್ತು ಕಲಿಕಾ ಕೌಶಲ್ಯ ಬೆಳೆಸುವ ನಿಟ್ಟಿನಲ್ಲಿ ಉಪನ್ಯಾಸ, ಚರ್ಚೆ, ಗುಂಪು ಚರ್ಚೆಯಂತಹ ಬೋಧನಾ ವಿಧಾನಗಳ ಬಗ್ಗೆ ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯೆ ಎಸ್.ಜೆ.ಒಡೆಯರ, ಕಲಿಕೆ ಮತ್ತು ಬೋಧನೆಯ ಯಶಸ್ವಿಗೆ ನಿರಂತರ ಅಧ್ಯಯನ ಅವಶ್ಯವಿದೆ ಎಂದರು.
ಎ.ಎಸ್.ಯಾದವಾಡ, ಐಕ್ಯೂಎಸಿ ಸಂಯೋಜಕ ಪಿ.ಕೆ.ಚೌಗುಲಾ, ಸೀಮಾ ಬಾವೂಸ, ಎ.ಆರ್.ಬಡಿಗೇರ, ಪಿ.ಎಸ್.ಪಾತ್ರೋಟ ಇದ್ದರು.