ಬಾಗಲಕೋಟೆ
ಬಡಿಗತನ ವೈಜ್ಞಾನಿಕವಾಗಿ ಕೌಶಲ್ಯವುಳ್ಳ ವೃತ್ತಿಯಾಗಿದ್ದು ಸಂಘದಿಂದಲೇ ಉದ್ಯೋಗ ಪ್ರಮಾಣಪತ್ರ ನೀಡುವ ಕಾರ್ಯ ಶ್ಲಾಘನೀಯ ಎಂದು ಬ್ರಹ್ಮಾಂಡಭೇರಿ ಮಠದ ಸುÃಂದ್ರ ಸ್ವಾಮೀಜಿ ಹೇಳಿದರು.
ನಗರದ ವಿದ್ಯಾಗಿರಿಯ ಕಾಳಿಕಾಂಬಾ ದೇವಸ್ಥಾನದ ಸಭಾಂಗಣದಲ್ಲಿ ಭಾನುವಾರ ನಡೆದ ಬಾಗಲಕೋಟೆ ತಾಲೂಕು ವಿಶ್ವಕರ್ಮ ಸಮಾಜ ಬಡಿಗತನ ಕಾರ್ಮಿಕರ ನೂತನ ಸಂಘದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ವೇದಗಳ ಕಾಲದಲ್ಲಿ ಉನ್ನತ ಸ್ಥಾನದಲ್ಲಿದ್ದವರು ವಿಶ್ವಕರ್ಮರು. ನಮ್ಮ ಪಂಚಮೂಲ ವೃತ್ತಿಗಳಲ್ಲಿ ಬಡಿಗತ ಒಂದು. ಬಡಿಗತನ ವೈಜ್ಞಾನಿಕವಾಗಿ ಕೌಶಲ್ಯದ ವೃತ್ತಿಯಾಗಿದೆ. ಕಲಿಯುಗದಲ್ಲಿ ಸಂಘಟನೆಗೆ ಹೆಚ್ಚು ಶಕ್ತಿಯಿದೆ. ಸಮುದಾಯ ಬಡಿಗತನ ವೃತ್ತಿ ಮಾಡುವುದು ಎಲ್ಲರ ಹಿತಕ್ಕಾಗಿ ಎಂದರು.
ಸರಕಾರದ ಸೌಲಭ್ಯ ಪಡೆಯಲು ನೂತನ ಸಂಘ ಸ್ಥಾಪಿಸಿದ್ದು ಸಂಘದಿAದಲೇ ಬಡಿಗತನ ಉದ್ಯೋಗ ಪ್ರಮಾಣಪತ್ರ ನೀಡುವ ಕಾರ್ಯ ಮಾಡುತ್ತಿರುವುದು ಒಳ್ಳೆಯ ಕೆಲಸ. ಇದರಿಂದ ಬಡಿಗತ ವೃತ್ತಿ ಮಾಡುವವರು ಬೇರೆಡೆ ಅಲೆದಾಟ ತಪ್ಪಿದಂತಾಗುತ್ತದೆ. ಇಂದು ಸಂಘಟನೆಯಿAದ ನಾವು ನಮ್ಮ ಹಕ್ಕು ಪಡೆಯಬಹುದಾಗಿದೆ ಎಂದು ಹೇಳಿದರು.
ಕಾರ್ಮಿಕ ಇಲಾಖೆ ಯೋಜನಾ ನಿರ್ದೇಶಕ ಸುಧಾಕರ ಬಡಿಗೇರ, ಸರಕಾರದಿಂದ ಕಾರ್ಮಿಕರ ಯೋಜನೆ, ಸೌಲಭ್ಯಗಳನ್ನು ಸಂಘದ ಮೂಲಕ ಇತರರಿಗೆ ಅರಿವು ಮೂಡಿಸಿ ಸೌಲಭ್ಯ ದೊರೆಯುವಂತೆ ಸಂಘ ಕಾರ್ಯೋನ್ಮುಖವಾಗಲಿ ಎಂದರು.
ವಿದ್ಯಾಗಿರಿ ವಿಶ್ವಕರ್ಮ ಸಮಾಜ ಅಭಿವೃದ್ಧಿ ಸಂಘದ ಅಧ್ಯಕ್ಷ ವಿ.ಎನ್.ಕಮ್ಮಾರ ಮಾತನಾಡಿದರು. ಸಂಘದ ನೂತನ ಅಧ್ಯಕ್ಷ ಬಸವರಾಜ ಬಡಿಗೇರ ಅಧ್ಯಕ್ಷತೆ ವಹಿಸಿದ್ದರು. ಸಂಗಮೇಶ ಬಿರಾದಾರ, ದೇವೇಂದ್ರ ಅಗಳತಕಟ್ಟಿ, ಮಂಜುಳಾ ಅಗಳತಕಟ್ಟಿ, ಬಸವರಾಜ ಬಡಿಗೇರ, ಭೀಮಾಚಾರ ಬಡಿಗೇರ, ರಘುನಾಥ ಕಮ್ಮಾರ ಇದ್ದರು.