This is the title of the web page
This is the title of the web page

Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

Politics NewsState News

ಪರಮೇಶ್ವರ ತಮ್ಮ ಕುಟುಂಬದ ಮೂಲ ತಿಳಿಯಲಿ

ಪರಮೇಶ್ವರ ತಮ್ಮ ಕುಟುಂಬದ ಮೂಲ ತಿಳಿಯಲಿ

ಬಾಗಲಕೋಟೆ
`ಹಿಂದು ಧರ್ಮದ ಉಗಮದ ಬಗ್ಗೆ ಮಾತನಾಡುವ ಸಚಿವ ಪರಮೇಶ್ವರ್ ಮೊದಲು ತಮ್ಮ ಕುಟುಂಬದ ಪೂರ್ವಜರ ಹೆಸರು ತಿಳಿದುಕೊಳ್ಳಲಿ’ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು `ಪರಮೇಶ್ವರ್ ಅವರ ತಾತನ ಹೆಸರು ಮರಿಯಪ್ಪö, ಮುತ್ತಜ್ಜನ ಹೆಸರು ಅವರು ಹೇಳಲಿ. ತಮ್ಮ ಕುಟುಂಬದ ಪೂರ್ವಜರ ಬಗ್ಗೆ ಗೊತ್ತಿಲ್ಲದವರು ಹಿಂದು ಧರ್ಮದ ಉಗಮದ ಪ್ರಶ್ನೆ ಕೇಳಿದಂತಾಗಿದೆ. ಇಂತಹ ಹೇಳಿಕೆ ನೀಡಿದ ಪರಮೇಶ್ವರ್ ಅವರು ರಾಜ್ಯದ ಜನರ ಕ್ಷಮೆ ಕೇಳಬೇಕು. ಉದಯನಿ ಸ್ಟಾಲಿನ್ ಜನರ ಗಮನ ಸೆಳೆಯಲು ಸನಾತನ ಧರ್ಮದ ಬಗ್ಗೆ ಅವಹೇಳನಕಾರಿ ಮಾತನಾಡಿದ್ದಾರೆ. ಇಂತಹವರನ್ನು ಬೆಂಬಲಿಸುವ ನಟ ಪ್ರಕಾಶ್ ರಾಜ್‌ರಂತಹವರು ಅಯೋಗ್ಯರು, ಅವರಿಗೆ ತಮ್ಮ ಜನ್ಮದ ಬಗ್ಗೆ ಗೊತ್ತಿಲ್ಲ’ ಎಂದು ಟೀಕಿಸಿದರು.

`ಭಾರತ ಎಂದು ದೇಶವನ್ನು ಕರೆಯಲು ಹೊರಟರೆ ಇಂಡಿಯಾ ಬಣ ಕಟ್ಟಿಕೊಂಡ ಕಾಂಗ್ರೆಸ್‌ನವರು ಉರಿಯುತ್ತಿದ್ದಾರೆ. ಇವರಿಗೆ ವಿದೇಶಿಗರೆಂದರೆ ಪ್ರೀತಿ, ಸೋನಿಯಾ ಅವರನ್ನು ಪ್ರೀತಿಸುವ ಇವರಿಗೆ ಭಾರತ ಎನ್ನಲು ಸರಿ ಎನಿಸುವುದಿಲ್ಲö. ವಿದೇಶದ ಬ್ರಿಟಿಷರು ಬಿಟ್ಟು ಹೋದ ಇಂಡಿಯಾ ಪದ ಬೆನ್ನಿಗೆ ಬಿದ್ದಿದ್ದಾರೆ. ಇಂಡಿಯಾ, ಭಾರತ ಎರಡೂ ಶಬ್ದ ಬಳಸಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಕಾನೂನು ತಜ್ಞ ಎಂದು ಹೇಳಿಕೊಳ್ಳುವ ಸಿಎಂ ಸಿದ್ದರಾಮಯ್ಯ ಇದನ್ನು ಗಮನಿಸಿ ಮಾತನಾಡಲಿ’ ಎಂದು ಹೇಳಿದರು.

ಬಕೆಟ್ ಹಿಡಿದವರಿಗೆ ಬಿಜೆಪಿಯಲ್ಲಿ ಟಿಕೆಟ್ ಎಂಬ ವಿಧಾನಪರಿಷತ್ ಸದಸ್ಯ ಪ್ರದೀಪ ಶೆಟ್ಟರ್ ಹೇಳಿಕೆಗೆ `ತಾಯಿಯನ್ನು ಒದ್ದು ಹೋಗಿರುವ ಶೆಟ್ಟರ್ ಅವರು ಟಿಕೆಟ್ ನಿರಾಕರಿಸಿದ ಕಾರಣಕ್ಕೆ ಪಕ್ಷ ಬಿಟ್ಟಿದ್ದಾರೆ. ಇವರಿಗೆಲ್ಲ ಬಿಜೆಪಿ ಸಂಘಟನಾ ಕಾರ್ಯದರ್ಶಿ ಸಂತೋಷ್ ಅವರನ್ನು ತೆಗಳುವುದೇ ಕೆಲಸ. ಇವರು ಸಿಎಂ ಆಗಬೇಕಾದರೆ ಸಂತೋಷ್ ಒಳ್ಳೆಯವರಾಗಿದ್ದರು, ಈಗ ಕೆಟ್ಟವರಾಗಿದ್ದಾರೆ’ ಎಂದು ಉತ್ತರಿಸಿದರು.

ಬಿಜೆಪಿಯಲ್ಲಿ ಲಿಂಗಾಯತರನ್ನು ಕಡೆಗಣಿಸಲಾಗುತ್ತಿದೆ ಎಂಬ ಆರೋಪಕ್ಕೆ `ಲಿಂಗಾಯತರನ್ನು ಒಡೆಯುವ ಪ್ರಯತ್ನ ಕಾಂಗ್ರೆಸ್ ಮಾಡಿದೆ. ವೀರೇಂದ್ರ ಪಾಟೀಲ್, ರಾಜಶೇಖರ ಮೂರ್ತಿಯವರನ್ನು ಇವರು ಹೇಗೆ ನಡೆಸಿಕೊಂಡರು ಎಂಬುದು ಗೊತ್ತಿದೆ’ ಎಂದ ಅವರು, ಜಿಲ್ಲೆಯ ಬಿಜೆಪಿ ಮುಖಂಡರ ಭಿನ್ನಮತದ ಪ್ರಶ್ನೆಗೆ `ಕುಟುಂಬದಲ್ಲಿ ಭಿನ್ನಾಭಿಪ್ರಾಯ ಸಹಜವಾಗಿರುತ್ತದೆ. ನಿನ್ನೆ ಮೊನ್ನೆ ಪಕ್ಷಕ್ಕೆ ಬಂದವರು ಅಕಾರ ಬೇಕು ಎಂದರೆ ಸಾಧ್ಯವಿಲ್ಲö. ನಮ್ಮ ಪಕ್ಷದ ಮೇಲೂ ಕಾಂಗ್ರೆಸ್ ನೆರಳು ಬಿದ್ದಿರುವ ಕಾರಣ ಹೀಗೆ ಭಿನ್ನಮತ ಶುರುವಾಗಿದೆ. ಲೋಕಸಭೆ ಚುನಾವಣೆ ತಯಾರಿ ಪಕ್ಷದಲ್ಲಿ ಶುರುವಾಗಿದೆ. ಮುಖಂಡರು, ಪದಾಕಾರಿಗಳ ಸಭೆ ನಡೆಸುತ್ತಿದ್ದೇವೆ. ಈ ಬಾರಿ ೨೮ ಸ್ಥಾನ ಗೆಲ್ಲುವ ಯತ್ನವಿದೆ. ಹಾವೇರಿಯಿಂದ ಪುತ್ರ ಕಾಂತೇಶ್‌ಗೆ ಟಿಕೆಟ್ ಕೊಟ್ಟರೆ ರ್ಸ್ಪಸುತ್ತಾನೆ. ಇಲ್ಲವಾದರೆ ಅಭ್ಯರ್ಥಿ ಪರ ಪ್ರಚಾರ ನಡೆಸುತ್ತಾನೆ. ಅಲ್ಲಿ ಬಿಜೆಪಿ ಗೆಲುವು ನಿಶ್ಚಿತ’ ಎಂದು ತಿಳಿಸಿದರು.
—-

Nimma Suddi
";