ಬಾಗಲಕೋಟೆ
ಜಿಲ್ಲೆಯ ಹುನಗುಂದ ತಾಲೂಕಿನ ಕಮತಗಿ ಪಟ್ಟಣಕ್ಕೆ ಮೈಸೂರಿನ ಮಹಾಸ್ವಾಮಿ ಶ್ರೀ ಜಯಚಾಮರಾಜೇಂದ್ರ ಒಡೆಯರ್ ರವರ ದ್ವೀತಿಯ ಸುಪುತ್ರಿ ಮಹಾರಾಜ ಕುಮಾರಿ ಮೀನಾಕ್ಷಿ ದೇವಿಯವರ ಸುಪುತ್ರ ಹಾಗೂ ಶ್ರೀ ಮಂಟೇಸ್ವಾಮಿ ಮಠ ಮಳವಳ್ಳಿ ಆದಿ ಹೊನ್ನಾಯಕನಹಳ್ಳಿ ಮತ್ತು ಶ್ರೀ ಕಪ್ಪಡಿ ಕ್ಷೇತ್ರದ ಪೀಠಾಧಿಪತಿಗಳಾದ ವರ್ಚಸ್ವಿ ಶ್ರೀಕಂಠ ಸಿದ್ದಲಿಂಗ ರಾಜೇ ಅರಸ್ ಮಹಾಸ್ವಾಮಿಗಳು ಅವರ ಧರ್ಮಪತ್ನಿ ಟೆಕ್ಷಟೆಲ್ಸ್ ಪದವೀಧರೆ ಯಾಗಿರುವ ಮಹಾರಾಣಿ ಸುಷ್ಮಾ ಜಿ. ವಾಣಿ ಪಟ್ಟಣದ ಕುಶಲ ನೇಕಾರ ಶ್ರೀನಿವಾಸ ಪಲ್ಲಾ ಅವರ ಮನೆಗೆ ಅನಿರೀಕ್ಷಿತವಾಗಿ ಭೇಟಿ ನೀಡಿ ಕೈಮಗ್ಗದ ನೇಕಾರಿಕೆಯ ಬಗೆಯನ್ನು ವೀಕ್ಷಿಸಿದರು.
ದೇಶದ ನಾಡಿನ ಪರಂಪರೆಯಲ್ಲಿ ಸ್ವಾವಲಂಬಿ ಬದುಕಿಗೆ ತನ್ನದೇ ಆದ ಕೊಡುಗೆ ನೀಡಿರುವ ಕೈಮಗ್ಗದ ಉಳಿವು- ಬೆಳವು ಇಂದಿನ ದಿನಗಳಲ್ಲಿ ಜರೂರಾಗಿದೆ ಎಂದಿರುವ ಮಹಾಸ್ವಾಮಿಗಳು ಹಾಗೂ ಮಹಾರಾಣಿ ಸುಷ್ಮಾ ಜಿ.ವಾಣಿ ತಾಯಿಯವರು ಕೂಡು ಕುಟುಂಬದಲ್ಲಿ ಕೆಲಸ ಮಾಡುವ ನೇಕಾರರ ಉತ್ಪಾದನೆಗಳಿಗೆ ಜಾಗತಿಕ ಬೇಡಿಕೆ ತಂದು ಕೊಡುವಲ್ಲಿ ಮಾಡಬಹುದಾದ ಬದಲಾವಣೆ ಕುರಿತು ಅಧ್ಯಯನ ನಡೆಸಿದ್ದಾರೆಂದು ಸೆಂಟ್ರಲ್ ಸಿಲ್ಕ್ ಬೋಡ್೯ನ ತರಬೇತಿ ವಿಜ್ಞಾನಿ ಎಂ.ಆರ್.ಇಟಗಿ ತಿಳಿಸಿದ್ದಾರೆ.
ಈಗಾಗಲೇ ಮಹಾರಾಜ ದಂಪತಿಗಳು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು, ಕೊಂಡ್ಲಹಳ್ಳಿ, ಬಿಜಿ ಕರೆ, ಕೊಪ್ಪಳ ಜಿಲ್ಲೆಯ ಭಾಗ್ಯನಗರ, ಬಾಗಲಕೋಟೆ ಜಿಲ್ಲೆಯ ಇಲಕಲ್ಲ, ಸೂಳೇಭಾವಿ, ಕಮತಗಿ,ಗುಳೇದಗುಡ್ಡ ಸೇರಿದಂತೆ ಯಾದಗಿರಿ ಜಿಲ್ಲೆಯ ಕೊಡೇಕಲ್ ಗ್ರಾಮದ ಕೈಮಗ್ಗದ ನೇಕಾರರ ಮನೆಗಳಿಗೆ ಭೇಟಿ ನೀಡಿ ಅವರ ಬದುಕನ್ನು ಹತ್ತಿರದಿಂದ ಗಮನಿಸಿದ್ದಾರೆ ಈ ಹೊಸ ಬೆಳವಣಿಗೆಯಿಂದ ಕುಸಿದ ಜವಳಿ ಮಾರುಕಟ್ಟೆ ನಡುವೆ ಕಂಗಾಲಾಗಿರುವ
ನೇಕಾರರ ಮುಖದಲ್ಲಿ ಸದ್ಯ ಮಂದಹಾಸ ಮೂಢಿದೆ.
Team One