This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

International NewsLocal NewsNational NewsSports NewsState News

KL Rahul : ಶತಕ ಸಿಡಿಸಿ ಟೀಕಾಕಾರರ ಬಾಯ್ಮುಚ್ಚಿಸಿದ ಕೆ.ಎಲ್​.ರಾಹುಲ್​

KL Rahul : ಶತಕ ಸಿಡಿಸಿ ಟೀಕಾಕಾರರ ಬಾಯ್ಮುಚ್ಚಿಸಿದ ಕೆ.ಎಲ್​.ರಾಹುಲ್​

ಕೊಲಂಬೊ:

ದೀರ್ಘಕಾಲದ ಗಾಯದ ನಂತರ ಕ್ರಿಕೆಟ್​ ಕ್ರೀಡಾಂಗಣಕ ಮರಳಿರುವ ಭಾರತದ ಬ್ಯಾಟರ್​ ಕೆಎಲ್ ರಾಹುಲ್ ಕೊಲಂಬೊದಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ ಏಷ್ಯಾ ಕಪ್ 2023 ಸೂಪರ್ 4 ಪಂದ್ಯದಲ್ಲಿ ಅದ್ಭುತ ಶತಕ ಬಾರಿಸಿದ್ದಾರೆ. ಮೇ ತಿಂಗಳಲ್ಲಿ ಕೊನೆಯ ಬಾರಿಗೆ ಸ್ಪರ್ಧಾತ್ಮಕ ಪಂದ್ಯವನ್ನು ಆಡಿದ ರಾಹುಲ್ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಶತಕವನ್ನು ಪೂರ್ಣಗೊಳಿಸಿದರು. ಪಾಕ್​ನ ವೇಗಿಗಳು ಹಾಗೂ ಮತ್ತು ಸ್ಪಿನ್ನರ್​ಗಳ ವಿರುದ್ಧ ಆರಾಮದಾಯಕ ಆಟವಾಡಿದ ಅವರು ಭಾರತ ತಂಡಕ್ಕೆ ದೊಡ್ಡ ಮೊತ್ತ ಪೇರಿಸಲು ನೆರವು ನೀಡಿದರು.

ಕೆಎಲ್ ರಾಹುಲ್ 47ನೇ ಓವರ್​ನಲ್ಲಿ ಶತಕ ಬಾರಿಸಿದರು. ತಮ್ಮ 6ನೇ ಏಕ ದಿನ ಶತಕ ಪೂರೈಸಲು ಅವರು ಕೊಹ್ಲಿಯೊಂದಿಗೆ ಎರಡು ರನ್​ಗಳಿಗೆ ಓಡಿದರು. ಮುಂದಿನ ಓವರ್​ನಲ್ಲಿ ಕೊಹ್ಲಿ 47 ನೇ ಶತಕವನ್ನು ಪೂರ್ಣಗೊಳಿಸಿದ ಮತ್ತು ಏಕದಿನ ಪಂದ್ಯಗಳಲ್ಲಿ 13000 ರನ್​ಗಳನ್ನು ಅತಿವೇಗದಲ್ಲಿ (267 ಇನಿಂಗ್ಸ್​) ಪೂರೈಸಿದ ದಾಖಲೆ ಬರೆದರು. ಇವರಿಬ್ಬರ ಅಜೇಯ 233 ರನ್​ಗಳ ಜೊತೆಯಾಟದ ಮೂಲಕ ಭಾರತ 50 ಓವರ್​ಗಳಲ್ಲಿ 2 ವಿಕೆಟ್ ನಷ್ಟಕ್ಕೆ 356 ರನ್ ಗಳಿಸಿತು.

ಅಂದ ಹಾಗೆ ಕೆ. ಎಲ್​ ರಾಹುಲ್ ಪ್ರತಿಬಾರಿಯೂ ಟೀಕಾಕಾರರ ಬಾಯಿಗೆ ಆಹಾರವಾಗುತ್ತಾರೆ. ಸೂಕ್ತವಾದ ಕ್ರಮಾಂಕ ಹೊಂದಿರದ ಅವರು ಉತ್ತಮವಾಗಿ ಆಡುತ್ತಿದ್ದರೂ ಕೆಲವೊಂದು ಬಾರಿ ವೈಫಲ್ಯಗಳನ್ನು ಎದುರಿಸುತ್ತಾರೆ. ಈ ವೇಳೆ ರಾಹುಲ್ ಅವರ ವೈಫಲ್ಯಗಳನ್ನೇ ಎತ್ತಿ ತೋರಿಸಿ ಹಿರಿಯ ಕ್ರಿಕೆಟಿಗರು ವಿಶ್ಲೇಷಣೆ ಮಾಡುತ್ತಾರೆ. ಅದರ ಜತೆಗೆ ಗಾಯದ ಸಮಸ್ಯೆಯೂ ಅವರನ್ನು ಆಗಾಗ ಕಾಡುತ್ತಿರುವುದು ಅವರ ಸ್ಥಾನಕ್ಕೆ ಕುತ್ತು ತರುತ್ತಿರುತ್ತದೆ. ಇದೀಗ ಶತಕ ಬಾರಿಸುವ ಮೂಲಕ ಎಲ್ಲ ಸಮಸ್ಯೆಗಳಿಗೆ ಪರಿಹಾರ ಹೇಳಿದ್ದಾರೆ.

ರೋಹಿತ್ ಶರ್ಮಾ ಮತ್ತು ಶುಭ್ಮನ್ ಗಿಲ್ ಔಟಾದ ನಂತರ ರಾಹುಲ್, ವಿರಾಟ್ ಕ್ರೀಸ್​ಗೆ ಬಂದಿದ್ದರು. ಮಳೆ ಆಟಕ್ಕೆ ಅಡ್ಡಿಪಡಿಸುವ ಮೊದಲು ಇವರಿಬ್ಬರು ಎಚ್ಚರಿಕೆಯಿಂದ ಆಟವಾಡಿದರು. ಅದರಲ್ಲೂ ರಾಹುಲ್ ಪಾಕ್​ ಸ್ಪಿನ್ನರ್​ಗಳ ಬೆಂಡೆತ್ತಿದರೆ ವಿರಾಟ್​ ಕೊಹ್ಲಿ ವೇಗಿಗಳಿಗೆ ತಕ್ಕ ಪಾಠ ಕಲಿಸಿದರು.

ಕೆಎಲ್ ರಾಹುಲ್ ಗಾಯದ ವಿವರ
ನವೆಂಬರ್ 2021 – ತೊಡೆ ನೋವು: ಎಡ ತೊಡೆಯ ನೋವಿನಿಂದಾಗಿ ಕೆಎಲ್ ರಾಹುಲ್ ನವೆಂಬರ್​ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದರು.
ಫೆಬ್ರವರಿ 2021 – ಸ್ನಾಯುಸೆಳೆತ: ಎಡ ಸ್ನಾಯುಸೆಳೆತದ ಗಾಯದಿಂದಾಗಿ ಕೆಎಲ್ ರಾಹುಲ್ ವೆಸ್ಟ್ ಇಂಡೀಸ್ ವಿರುದ್ಧದ ಟಿ 20 ಸರಣಿಯಿಂದ ಹೊರಗುಳಿದಿದ್ದರು.
ಫೆಬ್ರವರಿ 2021 – ಸ್ನಾಯು ಸೆಳೆತ: ಅವರು ಸಮಯಕ್ಕೆ ಸರಿಯಾಗಿ ಚೇತರಿಸಿಕೊಳ್ಳಲು ವಿಫಲರಾದರು ಮತ್ತು ಶ್ರೀಲಂಕಾ ವಿರುದ್ಧದ ಟಿ 20 ಪಂದ್ಯವನ್ನು ತಪ್ಪಿಸಿಕೊಂಡರು.
ಮಾರ್ಚ್ 2021 – ಸ್ನಾಯುಸೆಳೆತ: ಸ್ನಾಯುಸೆಳೆತದ ಗಾಯವು ಅವರನ್ನು ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಗಿಟ್ಟಿತು..
ಜನವರಿ 2021 -ಮಣಿಕಟ್ಟಿನ ಗಾಯ: ಅಭ್ಯಾಸದ ಸಮಯದಲ್ಲಿ ಮಣಿಕಟ್ಟಿನ ಗಾಯದಿಂದಾಗಿ ಕೆಎಲ್ ರಾಹುಲ್ ಆಸ್ಟ್ರೇಲಿಯಾದಲ್ಲಿ ನಡೆದ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದರು.
ಜೂನ್ 2022 – ಕೆಎಲ್ ರಾಹುಲ್ ಸತತ ಸೊಂಟದ ಗಾಯದಿಂದಾಗಿ ದಕ್ಷಿಣ ಆಫ್ರಿಕಾ ಸರಣಿ ಮತ್ತು ಇಂಗ್ಲೆಂಡ್ ಪ್ರವಾಸದಿಂದ ಹೊರಗುಳಿದಿದ್ದರು.
ಮೇ 2023 – ತೊಡೆ ನೋವು: ರಾಹುಲ್ ಐಪಿಎಲ್ 2023, ವಿಶ್ವ ಟೆಸ್ಟ್ ಚಾಂಪಿಯನ್​​ಷಿಪ್​ ಫೈನಲ್ 2023 ಮತ್ತು ಮೇ 1 ರಂದು ಗಾಯದ ಸಮಸ್ಯೆಯಿಂದಾಗಿ ಭಾರತದ ವೆಸ್ಟ್ ಇಂಡೀಸ್ ಪ್ರವಾಸದಿಂದ ಹೊರಗುಳಿದಿದ್ದರು.
ಜುಲೈ 2023: ಚೇತರಿಕೆಯ ಹಾದಿಯಲ್ಲಿ, ಎನ್​​ಸಿಎನಲ್ಲಿ ಬ್ಯಾಟಿಂಗ್ ಮತ್ತು ಕೀಪಿಂಗ್ ಅಭ್ಯಾಸವನ್ನು ಪ್ರಾರಂಭಿಸಿದರು.
ಆಗಸ್ಟ್ 2023: ಕೆಎಲ್ ರಾಹುಲ್ ಚೇತರಿಸಿಕೊಳ್ಳುವಲ್ಲಿ ಹಿನ್ನಡೆ ಅನುಭವಿಸಿದರು ಮತ್ತು ಫಿಟ್ನೆಸ್ ಪರೀಕ್ಷೆಯಲ್ಲಿ ವಿಫಲರಾದರು. ಆದರೂ ಏಷ್ಯಾ ಕಪ್ 2023 ತಂಡದಲ್ಲಿ ಸ್ಥಾನ ಪಡೆದರು. ಏಷ್ಯಾಕಪ್​ಗೆ ಮೊದಲ ಎರಡು ಪಂದ್ಯಗಳಿಗೆ ಅವರು ಆಡುವುದು ಅನುಮಾನ ಎಂದು ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಹೇಳಿದ್ದರು.
ಕೆಎಲ್ ರಾಹುಲ್ ಪ್ರತಿ ಪಂದ್ಯದಲ್ಲೂ ಆಡಬೇಕು: ಗೌತಮ್ ಗಂಭೀರ್
ಭಾರತದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್, ಕೆಎಲ್ ರಾಹುಲ್ ಅವರ ಅದ್ಭುತ ಇನ್ನಿಂಗ್ಸ್ ಅನ್ನು ಶ್ಲಾಘಿಸಿದ್ದಾರೆ ಮತ್ತು ವಿಕೆಟ್ ಕೀಪರ್ ಬ್ಯಾಟರ್​​ 2023 ರ ವಿಶ್ವಕಪ್​​​ ಯೋಜನೆಯಲ್ಲಿದ್ದರೆ ಪ್ರತಿ ಪಂದ್ಯವನ್ನು ಆಡುವ ಅಗತ್ಯವಿದೆ ಎಂದು ಸಲಹೆ ನೀಡಿದ್ದಾರೆ.

ಈ ಪಂದ್ಯದ ನಂತರ ನಾವು ಕೆಎಲ್ ರಾಹುಲ್ ಅವರನ್ನು ನಿರ್ಣಯಿಸಬಾರದು. ಅವರು ದೀರ್ಘ ರಜೆಯ ನಂತರ ಬರುತ್ತಿದ್ದಾರೆ. ಅವರು ವಿಶ್ವಕಪ್ಗಾಗಿ ಯೋಜನೆಯಲ್ಲಿದ್ದರೆ, ಅವರು ಪ್ರತಿ ಪಂದ್ಯವನ್ನು ಆಡಬೇಕು ಎಂದು ಗಂಭೀರ್ ಹೇಳಿದ್ದಾರೆ.

";