ಬಾಗಲಕೋಟೆ
ಜಿಲ್ಲೆಯ ಹುನಗುಂದ ತಾಲೂಕಿನ ಮುಗನೂರ್ ಗ್ರಾಮದಲ್ಲಿ ಮೆಣಸಿನಕಾಯಿ ಬೆಳೆಗಾರರಿಗೆ ಮತ್ತು ವಿವಿಧ ಕೃಷಿ/ತೋಟಗಾರಿಕೆ ಬೆಳೆಗಳ ಕ್ಷೇತ್ರಗಳಿಗೆ ಬೇಟಿ ನೀಡಿ ರೈತರೊಡನೆ ಚರ್ಚಿಸಿ ಸಲಹೆ ನೀಡಿದರು.
ಇವತ್ತಿನ ದಿನಗಳಲ್ಲಿ ರೈತರ ಮನೆ ಬಾಗಿಲು ಗಳಿಗೆ ಕೋರಮಂದಲ್ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ ರೈತರ ನೋವುಗಳನ್ನು ಅನುಭವಿಸುವದಸ್ಟೇ ಅಲ್ಲದೆ, ನಮ್ಮ ರೈತರು ಬೆಳೆದ ಬೆಳೆಗಳಿಗೆ ಸರಿಯಾದ ಮಾರುಕಟ್ಟೆ ಸಿಗಬೇಕೆಂದು ಬಯಸುವವರು ಮತ್ತು ಮಾರಾಟದ ನೆರವು ಮಾಡಿಕೊಡುತ್ತಿದ್ದೇವೆ.
ಅದಕ್ಕಾಗಿಯೇ ಸರಕಾರ ಕೂಡ ರೈತ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದ್ದು ರೈತ ಸೇವೆಯಲ್ಲಿ ಪಾಲ್ಗೊಂಡು ರೈತರಿಗೆ ಅನುಕೂಲವಾಗುವಂತೆ ನಮ್ಮ ಕಂಪನಿ ಸಲಹೆ ಸೂಚನೆಗಳನ್ನು ಸದುಪಯೋಗ ಪಡೆದುಕೊಳ್ಳಿ ಅಂತ ರೈತರಿಗೆ ಸಾಯಿತೇಜ ಅಧಿಕಾರಿ ತಿಳಿಸಿದರು.
ಕಳೆದ ವರ್ಷದಂತರ ಈ ವರ್ಷ ಕೂಡ ನಮ್ಮ ಸಂಸ್ಥೆಯಿಂದ ಮಾರುಕಟ್ಟೆ ಮಾಡುವದರಲ್ಲಿ ಯಶಸ್ವಿಯಾಗಿ ಸಾಗುತ್ತಿದೆ. ಇನ್ನು ಹೆಚ್ವ್ಹಿನ ಪ್ರಮಾಣದಲ್ಲಿ ರೈತರ ಸಮಸ್ಯೆಗಳ ನಿವಾರಣೆಗೆ ಪ್ರಯತ್ನಿಸುತ್ತಿದ್ದೇವೆ ಅಂತ ಕ್ಷೇತ್ರ ಅಧಿಕಾರಿ ವಿಠಲ್ ಕುಂಬಾರ ತಿಳಿಸಿದರು.
ಬಸಲಿಂಗಪ್ಪ ಅಂಗಡಿ, ತಿಪ್ಪಣ್ಣ ಹರದೊಳ್ಳಿ, ನಿಂಗಪ್ಪ ತೇಲಿ, ವಿನಾಯಕ, ದುರ್ಗಪ್ಪ, ಪ್ರಭು, ಫಿರಸಾಬ್, ಇನ್ನಿತರ ರೈತರು ಕಾರ್ಯಕ್ರಮದಲ್ಲಿ ಇದ್ದರು.