ಬಾಗಲಕೋಟೆ
ಜಗತ್ತಿನ ಇತಿಹಾಸದಲ್ಲೇ ಮೊಟ್ಟ ಮೊದಲು ಅಹಿಂಸೆ ಮತ್ತು ‘ಸತ್ಯಾಗ್ರಹ’ದ ಮೂಲಕ ಭಾರತವನ್ನು ಸ್ವಾತಂತ್ರ್ಯಗೊಳಿಸಿದ,ತಮ್ಮ ತತ್ವ, ಸಿದ್ಧಾಂತ, ಆದರ್ಶಗಳನ್ನು ಅಕ್ಷರಶಃ ಬದುಕಿ, ‘ನನ್ನ ಜೀವನವೇ ನನ್ನ ಸಂದೇಶ’ ಎಂದು ಸಾರಿದವರು ಮಹಾತ್ಮ ಗಾಂಧೀಜಿಯವರು ಎಂದು ಜಿಲ್ಲಾಧ್ಯಕ್ಷರಾದ ಎಸ್ ಜಿ ನಂಜ್ಯಯನಮಠ ಹೇಳಿದರು.
ಇಂದು ಜಿಲ್ಲಾ ಕಾಂಗ್ರೆಸ ಪಕ್ಷದ ಕಛೇರಿಯಲ್ಲಿ ಹಮ್ಮಿಕೊಂಡಿದ್ದ ಮಹಾತ್ಮ ಗಾಂಧಿಯವರ ಹಾಗೂ ಲಾಲ ಬಹಾದ್ದೂರ ಶಾಸ್ತ್ರಿಯವರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸಾಮಾಜಿಕ ಅಸಮಾನತೆ, ಶೋಷಣೆ, ಜಾತಿ ವ್ಯವಸ್ಥೆಯ ವಿರುದ್ಧ ಕೊನೆ ಉಸಿರಿನ ವರೆಗೂ ಹೋರಾಟ ನಡೆಸಿದ,
ಜಾತ್ಯಾತೀತ, ಸೌಹಾರ್ದ ಭಾರತಕ್ಕೆ ಮುನ್ನುಡಿ ಬರೆದ ‘ರಾಷ್ಟ್ರಪಿತ’ ಮಹಾತ್ಮಾ ಗಾಂಧಿ ಅವರ ಜಯಂತಿಯಂದು ಅವರನ್ನು ಗೌರವ ಕೃತಜ್ಞತಾ ಪೂರ್ವಕವಾಗಿ ನೆನೆಯುತ್ತೇವೆ .ಜವಾನ್ – ಜೈ ಕಿಸಾನ್ ಎಂಬ ಘೋಷವಾಕ್ಯ ಮೊಳಗಿಸಿದ ಮಾಜಿ ಪ್ರಧಾನಿ, ಭಾರತ ರತ್ನ ಪ್ರಶಸ್ತಿ ಪುರಸ್ಕೃತ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿ ಅವರಿಗೆ ಗೌರವ ನಮನಗಳು ಸಲ್ಲಿಸೋಣವೆಂದು ಶಾಸಕರಾದ ಎಚ್ ವಾಯ್ ಮೇಟಿಯವರು ಹೇಳಿದರು.
ಬಿಡಿಸಿಸಿ ಬ್ಯಾಂಕಿನ ಅಧ್ಯಕ್ಷರಾದ ಅಜಯಕುಮಾರ ಸರನಾಯಕ ಮಾತನಾಡಿ ದೇಶದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗಾಗಿ ಗಾಂಧೀಜೀ, ಶಾಸ್ತ್ರಿಯವರು ಸಲ್ಲಿಸಿದ ಸೇವೆ ಅಭಿನಂದನೀಯ ಸತ್ಯ ಮತ್ತು ಪ್ರಾಮಾಣಿಕತೆಯನ್ನೇ ಉಸಿರಾಗಿಸಿಕೊಂಡಿದ್ದ ನೇತಾರರು, ಸಾರ್ವಜನಿಕ ಬದುಕಿನಲ್ಲಿ ದೊಡ್ಡ ಹೆಸರು ಮಾಡಿದ್ದ ಸರಳ, ಸಜ್ಜನಿಕೆಯ ಮುತ್ಸದ್ಧಿಗಳು ಎಂದರು. ಮಾಜಿ ಜಿಲ್ಲಾ ಪಂಚಾಯಿತಿಯ ಅಧ್ಯಕ್ಷೆ ವೀಣಾ ಕಾಶಪ್ಪನವರ ಮಾತನಾಡಿ
ಜಗತ್ತಿಗೆ ಅಹಿಂಸೆಯ ಸಂದೇಶ ಸಾರಿದ ಮಹಾನ್ ಚೇತನ, ದೇಶದ ಸ್ವಾತಂತ್ರ್ಯಕ್ಕಾಗಿ ಶಾಂತಿಯಿಂದ ಹೋರಾಡಿದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು.”ಜೈ ಜವಾನ್, ಜೈ ಕಿಸಾನ್” ಎಂಬ ಘೋಷಣೆ ಮೂಲಕ ದೇಶದ ಅಭಿವೃದ್ಧಿಗೆ ಹೊಸ ಆಯಾಮವನ್ನು ತೆರೆದಿಟ್ಟ ಸರಳ ಹಾಗೂ ಆದರ್ಶ ಜೀವಿ, ಮಾಜಿ ಪ್ರಧಾನಿ, ಭಾರತ ರತ್ನ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಎಂದರು.
ಕೆಪಿಸಿಸಿ ಸಂಯೋಜಕ ಚಂದ್ರಶೇಖರ ರಾಠೋಡ ಪ್ರಾಸ್ತಾವಿಕವಾಗಿ ಮಾತನಾಡಿದರು.
ಜಿಲ್ಲಾ ಪ್ರಚಾರ ಸಮಿತಿಯ ಅಧ್ಯಕ್ಷ ನಾಗರಾಜ ಹದ್ಲಿ ಸ್ವಾಗತಿಸಿದರು. ಮಾಜಿ ಜಿಲ್ಲಾ ಪಂಚಾಯಿತಿಯ ಅಧ್ಯಕ್ಷೆ ಗಂಗೂಬಾಯಿ ಮೇಟಿ, ನಿಂಗನಗೌಡ ಪಾಟೀಲ, ಎಸ್ಸಿ ಘಟಕದ ಜಿಲ್ಲಾಧ್ಯಕ್ಷರಾದ ರಾಜು ಮನ್ನಿಕೇರಿ, ಬ್ಲಾಕ್‌ನ ಅಧ್ಯಕ್ಷರಾದ ಅಬ್ದುಲರಜಾಕ ಬೆಣೂರ, ಎ ಎ ದಂಡಿಯಾ, ಹನಮಂತ ಗೊರವರ, ಗೋವಿಂದ ಬಳ್ಳಾರಿ ,ಪರಮಾನಂದ, ಸಂತೋಷ ಬಗಲಿದೇಸಾಯಿ, ಶರೀಫ ಮುಲ್ಲಾ, ಮಲ್ಲು ಶಿರೂರ , ಸುರೇಶ ಝಿಂಗಾಡೆ, ವಿರೇಶ ಹುಂಡೆಕಾರ, ಶ್ರೀದರ ನೀಲನಾಯಕ, ಇಮಾಮಸಾಬ ಬಳಬಟ್ಟಿ, ರೇಣುಕಾ ನ್ಯಾಮಗೌಡ, ಮುಮತಾಜ ಸುತಾರ, ಸಾವಿತ್ರಿ ಗೋಲಪ್ಪನವರ ಜಯಶ್ರೀ ಗುಳಬಾಳ, ಕಲಾವತಿ ಕಮತ, ಸಿದ್ದಣ್ಣ ಗೋಡಿ, ಮುತ್ತು ಜೋಳದ ಚೆನ್ನವೀರ ಅಂಗಡಿ, ಜೈಬೂನಿ ಗೋಡೆಸವಾರ, ಮಾಧವಿ ರಾಠೋಡ, ರಾಜು ರಾಠೋಡ, ಶ್ರವಣ ಖಾತೆದಾರ, ಸುಧಾ ಪಾಟೀಲ, ಮುಂತಾದವರು ಭಾಗವಹಿಸಿದ್ದರು.