This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

Education NewsLocal NewsState News

ರಸಪ್ರಶ್ನೆ ಮಸ್ಕಾನ್ ಮುಲ್ಲಾ ಜಿಲ್ಲೆಗೆ ಪ್ರಥಮ

ರಸಪ್ರಶ್ನೆ ಮಸ್ಕಾನ್ ಮುಲ್ಲಾ ಜಿಲ್ಲೆಗೆ ಪ್ರಥಮ

ಸ್ವಾತಂತ್ರ್ಯ ಚಳುವಳಿ ಕುರಿತ ರಸ ಪ್ರಶ್ನೆ ಸ್ಪರ್ಧೆ ಬಾಗಲಕೋಟ್ ಜಿಲ್ಲೆಗೆ ಮಸ್ಕಾನ್ ಪ್ರಥಮ

ಬಾಗಲಕೋಟೆ

ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ರಾಜ್ಯ ಘಟಕ ಬೆಂಗಳೂರು ಇವರು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸವಿ ನೆನಪಿಗಾಗಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಆನ್ಲೈನ್ ಸ್ಪರ್ಧೆಯಲ್ಲಿ ಬಾಗಲಕೋಟ್ ಜಿಲ್ಲೆಗೆ ಶಿರೂರು ಪಟ್ಟಣದ ಶ್ರೀ ಸಿದ್ದೇಶ್ವರ ಪ್ರೌಢಶಾಲಾ ವಿದ್ಯಾರ್ಥಿನಿ ಕುಮಾರಿ ಮಸ್ಕಾ ನ ಮುಲ್ಲಾ ಪ್ರಥಮ ಸ್ಥಾನ ಗಳಿಸಿದ್ದಾಳೆ ಎಂದು ಮುಖ್ಯ ಗುರುಮಾತೆ ಶ್ರೀಮತಿ ಎಲ್‌ಟಿ ಪೂಜಾರ ತಿಳಿಸಿದ್ದಾರೆ.

ಸ್ವಾತಂತ್ರ್ಯ ಚಳುವಳಿ ಹಾಗೂ ಸಮಾಜ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದ ಈ ರಸಪ್ರಶ್ನೆ ಸ್ಪರ್ಧೆಯಲ್ಲಿ 30 ನಿಮಿಷಗಳಲ್ಲಿ 50 ಪ್ರಶ್ನೆ ಗಳಿಗೆ ಉತ್ತರಿಸಿದವರಿಗೆ ವಿಜೇತರೆಂದು ಆಯ್ಕೆ ಮಾಡಲಾಗುತ್ತದೆ ಆದರೆ ಕುಮಾರಿ ಮಸ್ಕಾ ನ್ ಮುಲ್ಲಾ 16 ನಿಮಿಷಗಳಲ್ಲಿ ಬಹು ಆಯಾಯ ಐವತ್ತು ಪ್ರಶ್ನೆಗಳಿಗೆ ಮೊದಲನೇಯವಳಾಗಿ ಉತ್ತರಿಸಿ ಜಿಲ್ಲಾಮಟ್ಟದ ಪ್ರಥಮ 1000 ರೂಪಾಯಿ ನಗದು ಹಾಗೂ ಪ್ರಶಸ್ತಿ ಪತ್ರ ಪಡೆದಿದ್ದಾಳೆ ಎಂದು ಕರ್ನಾಟಕ ಜ್ಞಾನ ವಿಕಾಸ ಸಮಿತಿಯ ರಾಜ್ಯ ಕಾರ್ಯದರ್ಶಿಗಳಾದ E ಬಸವರಾಜ ತಿಳಿಸಿದ್ದಾರೆ ಎಂದು ಮುಖ್ಯ ಗುರುಮಾತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಲ್ಲೆಗೆ ಪ್ರಥಮ ಬಂದ ವಿದ್ಯಾರ್ಥಿನಿಗೆ ಹಾಗೂ ಮಾರ್ಗದರ್ಶನ ಮಾಡಿದ ವಿಜ್ಞಾನ ಶಿಕ್ಷಕರಾದ ಸಂಜಯ್ ನಡುವಿನಮನಿ ಅವರಿಗೆ ಸಂಸ್ಥೆಯ ಅಧ್ಯಕ್ಷರಾದ ಪರಮಪೂಜ್ಯ ಶ್ರೀ ಮರಿ ಮಹಾಂತ ಚನ್ನವೀರ ದೇವರು ಹಾಗೂ ಆಡಳಿತ ಮಂಡಳಿಯವರು ಅಭಿನಂದಿಸಿದ್ದಾರೆ

";