ಜಮಖಂಡಿ ಉಪವಿಭಾಗಾಧಿಕಾರಿ ಸಂತೋಷ ಕಾಮಗೊಂಡ ಮಾಹಿತಿ
ಬಾಗಲಕೋಟೆ
ಅ.10ರಂದುತೇರದಾಳ ಪಟ್ಟಣದ ಮಹಾತ್ಮಗಾಂಧೀಜಿ ಕ್ರೀಡಾಂಗಣದಲ್ಲಿ ತೇರದಾಳ ತಾಲೂಕುಮಟ್ಟದ ಜನತಾ ದರ್ಶನ ಕಾರ್ಯಕ್ರಮ ಹಮ್ಮಿ ಕೊಳ್ಳಲಾಗಿದೆ ಎಂದು ಜಮಖಂಡಿ ಉಪವಿಭಾಗಾಧಿಕಾರಿ ಸಂತೋಷ ಕಾಮಗೊಂಡ ತಿಳಿಸಿದ್ದಾರೆ.
ಕಾಠ್ಯ ಕ್ರಮದ ಹಿನ್ನೆಲೆಯಲ್ಲಿ ಗುರುವಾರ ಸಂಜೆ ಇಲ್ಲಿನ ಪುರಸಭೆಯಲ್ಲಿ ನಡೆದ ತಾಲೂಕು ಮಟ್ಟದ ಅಧಿಕಾರಿಗಳ ಪೂರ್ವಭಾವಿ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಸರ್ಕಾರದ ಯೋಜನೆಗಳು ಜನಸಾಮಾನ್ಯರ ಬಳಿ ನೇರವಾಗಿ ತಲುಪಬೇಕು. ಹಾಗೂ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ಸ್ಥಳದ ಲ್ಲಿಯೇ ಪರಿಹಾರ ಒದಗಿಸುವ ದೃಷ್ಟಿಯಿಂದ ಸರ್ಕಾರ ಜನತಾ ದರ್ಶನ ಪ್ರಾರಂಭಗೊಳಿಸಿದೆ.
ಬಾಗಲಕೋಟೆಯಲ್ಲಿ ನಡೆದ ಜನತಾ ದರ್ಶನ ಬಳಿಕ ತೇರದಾಳದಲ್ಲಿ ನಡೆಸಲಾಗುತ್ತಿದೆ. ಅಂದು ಬೆಳಗ್ಗೆ ನಡೆಯುವ ಜನತಾ ದರ್ಶನ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಆರ್ ಬಿ.ತಿಮ್ಮಾಪುರ ಚಾಲನೆ ನೀಡುವರು. ಜಿಲ್ಲಾಧಿಕಾರಿ ಕೆ.ಎಂ.ಜಾನಕಿ ಸೇರಿ ಜಿಲ್ಲಾಮಟ್ಟದ ಅಧಿಕಾರಿಗಳು ಆಗಮಿಸುವರು.
.ಇದೇ ಸಂದರ್ಭದಲ್ಲಿ ವಿವಿಧ ಇಲಾಖೆಯ ಅರ್ಹ ಫಲಾನುಭವಿಗಳಿಗೆ ಪ್ರಮಾಣಪತ್ರ ನೀಡಲಾಗುವುದು. ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ಉದ್ದೇಶ ಮೂಲ ಗುರಿಯಾಗಿದೆ. ಆದ್ದರಿಂದ ತೇರದಾಳ,ತಾಲೂಕಿನ ಹಾಗೂ ಸುತ್ತಮುತ್ತಲಿನ ಸಾರ್ವಜನಿಕರು ಜನತಾ ದರ್ಶನ ಕಾರ್ಯಕ್ರಮದ ಸದುಯೋಗ ಮಾಡಿಕೊಳ್ಳಬೇಕೆಂದು ಎಸಿ ಸಂತೋಷ ಕಾಮಗೌಂಡ ಹೇಳಿದರು.
ರಬಕವಿ-ಬನಹಟ್ಟಿ ತಾಲೂಕು ತಹಸೀಲ್ದಾರ್‌ಗಿರೀಶ ಸ್ವಾದಿ, ತಾಪಂ ಇಒ ಸಿದ್ದಪ್ಪ ಪಟ್ಟಿಹಾಳ, ಗ್ರೇಡ2 ತಹಸೀಲ್ದಾಎಸ.ಬಿ.ಕಾಂಬಳೆ, ಉಪ ತಹಸೀಲ್ದಾರ್ ಶ್ರೀಕಾಂತ ಮಾಯನ್ನವರ, ವೈದ್ಯಾಧಿಕಾರಿ ಜಿ.ಎಚ್. ಗಲಗಲಿ, ರಬಕವಿ-ಬನಹಟ್ಟಿ ನಗರಸಭೆ ಪೌರಾಯುಕ್ತ ಜಗದೀಶ ಈಟಿ, ತೇರದಾಳ ಪುರಸಭೆ ಮುಖ್ಯಾಧಿಕಾರಿ ಆನಂದ ಕೆಸರಗೊಪ್ಪ, ಈರಣ್ಣ ದಡ್ಡಿ, ಪ್ರಕಾಶ ಮಠಪತಿ, ವಿಠಲ ನಾಯಕ, ಚೇತನ ಅಂಬಿಗೇರ, ಶ್ರೀಶೈಲ ಬುರ್ಲಿ ಮತ್ತಿತರಿದ್ದರು.