This is the title of the web page
This is the title of the web page

Live Stream

November 2024
S M T W T F S
 12
3456789
10111213141516
17181920212223
24252627282930

| Latest Version 9.4.1 |

Agriculture NewsLocal NewsState News

ಇಲೆಕ್ಟ್ರಿಕಲ್ ಕಾರ ಮೈಲೇಜ್‍ನಲ್ಲಿ ಗ್ರಾಹಕನಿಗೆ ಮೋಸ

ಇಲೆಕ್ಟ್ರಿಕಲ್ ಕಾರ ಮೈಲೇಜ್‍ನಲ್ಲಿ ಗ್ರಾಹಕನಿಗೆ ಮೋಸ

ಬಾಗಲಕೋಟೆ:

ಹೊಂಡೈ ಕೋನಾ ಇಲೆಕ್ಟ್ರಿಕ್ ಕಾರು ಒಂದು ಬಾರಿ ಚಾರ್ಜ ಮಾಡಿದರೆ 452 ಕಿ.ಮೀ ಮೈಲೇಜ್ ಕೊಡುವುದಾಗಿ ಗ್ರಾಹಕರಿಗೆ ಮೋಸ ಮಾಡಿ ಮಾರಾಟ ಮಾಡಿದವರಿಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ದಂಡ ವಿಧಿಸಿ ತೀರ್ಪು ನೀಡಿದೆ.

ಬೀಳಗಿ ತಾಲೂಕಿನ ಡವಳೇಶ್ವರದ ನಿವಾಸಿ ಚಂದ್ರಶೇಖರ ಮಹಾದೇವಪ್ಪ ಕಾಖಂಡಕಿ ಕಾರ ಖರೀದಿ ಮಾಡಿದ ಗ್ರಾಹಕರಾಗಿದ್ದು, ಬೆಂಗಳೂರಿನ ಟ್ರೇಡೆಂಟ್ ಹುಂಡೈ ಪ್ರೈ.ಲಿ. ಅವರು ಹೋಂಡೈ ಕೋನಾ ಇಲೇಕ್ಟ್ರಿಕ್ ಕಾರನ್ನು 24 ಲಕ್ಷ ರೂ.ಗಳಿಗೆ ಮಾರಾಟ ಮಾಡಿದ್ದು, ಒಂದು ಸಲ ಚಾರ್ಜ ಮಾಡಿದರೆ 452 ಕಿ.ಮೀ ಮೈಲೇಜ್ ನೀಡುತ್ತದೆ ಎಂದು ಆಶ್ವಾಸನೆ ನೀಡಿ ನಂಬಿಸಿದ್ದರು. ಈ ಕುರಿತು ವಿಚಾರಿಸಿದಾಗ ಸರಿಯಾಗಿ ಸ್ಪಂಧಿಸದೇ ಸಿರಪಡಿಸದೇ ಸುಳ್ಳು ಕಾರಣ ನೀಡಿದ್ದರು.

ಮೋಸ ಹೋದ ಗ್ರಾಹಕ ಹುಂಡೈ ಕಂಪನಿ ವಿರುದ್ದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ದಾಖಲಿಸಿದ್ದರು. ಈ ಬಗ್ಗೆ ಕಂಪನಿ ದೂರುದಾರರ ನ್ಯಾಯವಾದಿಗಳ ಮೂಲಕ ಹಾಜರಾಗಿ ತಕರಾರು ಸಲ್ಲಿಸಿದ್ದರು. ಮೈಲೇಜ್‍ನಲ್ಲಿ ಯಾವುದೇ ರೀತಿಯ ವ್ಯತ್ಯಾಸವಾಗುವದಿಲ್ಲ, ನಿರ್ವಹಣೆ ಮಾಡಿಲ್ಲ ಎಂದು ಕಂಪನಿಯವರು ಪರಿಹಾರ ಕೊಡಲು ಸಾಧ್ಯವಿಲ್ಲವೆಂದು ವಾಧಿಸಿದ್ದರು. ವಿಚಾರಣೆ ಮಾಡಿದ ಆಯೋಗ ಪವನ ಅಣ್ಣೀಗೇರಿ ಇಲೆಕ್ಟ್ರಿಕ್ ಇಂಜಿನೀಯರನ್ನು ಕಮೀಷನರ್ ಅಂತ ನೇಮಕ ಮಾಡಿ ವರದಿ ಸಲ್ಲಿಸಲು ಸೂಚಿಸಿದಾಗ ಸಮಕ್ಷ್ಮಮ ವಾಹನ ಚಾಲನೆ ಮಾಡಿ ಪರೀಕ್ಷಿಸಿದಾಗ ಕಾರ 290 ಕಿ.ಮೀ ಮಾತ್ರ ಮೈಲೇಜ್ ನೀಡುತ್ತದೆ ಎಂದು ವರದಿ ಸಲ್ಲಿಸಿದ್ದರು.

ವರದಿ ಆಧಾರದ ಮೇಲೆ ದೂರುದಾರರಿಗೆ 6 ಲಕ್ಷ ರೂ.ಗಳನ್ನು ಶೇ.6ರ ಬಡ್ಡಿದರದ ಸಮೇತ ದೂರು ದಾಖಲು ಮಾಡಿದ ದಿನಾಂಕದಿಂದ ಕೊಡಲು ಗ್ರಾಹಕರ ವೇದಿಕೆ ಆದೇಶಿಸಿದೆ. ದೂರುದಾರನು ಅನಾವಶ್ಯಕ ಆಯೋಗಕ್ಕೆ ಅಲೆದಾಡಿ ದೈಹಿಕ ಹಾಗೂ ಮಾನಸಿಕ ಹಿಂಸೆ ಅನುಭವಿಸಿರುವುದರಿಂದ ವಿಶೇಷ ಪರಿಹಾರ 25 ಸಾವಿರ ರೂ. ಹಾಗೂ ಪ್ರಕರಣದ ಖರ್ಚು 15 ಸಾವಿರ ರೂ.ಗಳ ಕೊಡಲು ಆಯೋಗದ ಅಧ್ಯಕ್ಷರಾದ ಡಿ.ವೈ. ಬಸಾಪುರ, ಮಹಿಳಾ ಸದಸ್ಯನಿಯಾದ ಸಿ.ಹೆಚ್.ಸಮೀಉನ್ನಿಸಾ ಅಬ್ರಾರ್ ಮತ್ತು ಇನ್ನೋಬ್ಬ ಸದಸ್ಯೆ ಕಮಲಕಿಶೋರ ಜೋಶಿ ಇವರನ್ನು ಒಳಗೊಂಡ ಪೀಠವು ಮಹತ್ವದ ತೀರ್ಪು ನೀಡಿದೆ.

*ತೋವಿವಿಯಿಂದ ರೈತ ಕ್ಷೇತ್ರಗಳ ಭೇಟಿ*

*ಮೆಣಸಿನಕಾಯಿ, ಈರುಳ್ಳಿ ಬೆಳೆಗೆ ಅಧಿಕ ಔಷಧಿ ಸಂಪರಣೆ ಅವೈಜ್ಞಾನಿಕ*
———————————————————–
ಬಾಗಲಕೋಟೆ: ಬರದ ನೆರಳಿನಲ್ಲಿರುವ ಒಣ ಬೇಸಾಯದ ತರಕಾರಿ ಬೆಳೆಗಳಾದ ಮೆಣಸಿನಕಾಯಿ ಹಾಗೂ ಈರುಳ್ಳಿಗಳು ಹೂವು ಮತ್ತು ಕಾಯಿ ಕಟ್ಟುವ ಹಂತದಲ್ಲಿದ್ದು, ವಾತಾವರಣ ವೈಪರಿತ್ಯದಿಂದಾಗಿ ತೇವಾಂಶ ಶೇ.5ಕ್ಕಿಂತ ಕಡಿಮೆ ನೀರಿನಾಂಶ ಇರುವದರಿಂದ ಇಂತಹ ಪರಿಸ್ಥಿತಿಯಲ್ಲಿ ದುಬಾರಿ ಬೆಳೆಯ ಔಷಧಿಗಳನ್ನು ಸಿಂಪರಣೆ ಮಾಡುವದರಿಂದ ಗಿಡದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ತೋವಿವಿಯ ಪ್ರಾದ್ಯಾಪಕ ಡಾ.ವಸಂತ ಗಾಣಿಗೇರ ಜಾಗೃತಿ ನೀಡಿದ್ದಾರೆ.
ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ರೈತರ ಕ್ಷೇತ್ರಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕಂಡುಬಂದಿದ್ದು, ಕಡಿಮೆ ಖರ್ಚಿನಲ್ಲಿ ವಿಶ್ವವಿದ್ಯಾಲಯದಲ್ಲಿ ದೊರೆಯುವ ಜೈವಿಕ ಪೀಡೆನಾಶಕಗಳಾದ ಬಿವೇರಿಯಾ ಬೇಸಿಯನ್, ಮೆಟಾರೈಜಿಯಂ, ಲೇಖ್ಯಾನಿಸಿಯಂ, ಬ್ಯಾಸಿಲಸ್, ಸುಡೋಮೋನಾಸ್ ಹಾಗೂ ಜೈವಿಕ ಗ್ರೋಟಾನಿಕಗಳು, ಜೈವಿಕಗೊಬ್ಬರಗಳು ಅತ್ಯಲ್ಪ ದರದಲ್ಲಿ 150 ರೂ. ಪ್ರತಿ ಲೀಟರಗಳಿಗೆ ವಿಶ್ವವಿದ್ಯಾಲಯದಲ್ಲಿ ಲಭ್ಯವಿದ್ದು, ಇವುಗಳ ಬಳಕೆಯಿಂದ ಉತ್ತಮ ಪರಿಸರ ಹಾಗೂ ಕಡಿಮೆ ಖರ್ಚು ಮಾಡವುದರಿಂದ ಬೆಳೆ ಉತ್ತಮ ಫಸಲು ಪಡೆಯಬಹುದಾಗಿದೆ. ಖರ್ಚನ್ನು ಕಡಿಮೆಗೊಳಿಸಬಹುದಾಗಿದೆ ಎಂದು ತಿಳಿಸಿದರು.
ತೋವಿವಿ ವಿಜ್ಞಾನಿಗಳಾದ ಡಾ. ಮಂಜುನಾಥ ಹುಬ್ಬಳ್ಳಿ (ಸಸ್ಯರೋಗ ಶಾಸ್ತ್ರ), ಡಾ ವಾಸೀಮ (ಕೀಟಶಾಸ್ತ್ರ) ಹಾಗೂ ಬಾಗಲಕೋಟ ತೋಟಗಾರಿಕೆ (ಜಿಲ್ಲಾ ಪಂಚಾಯತ) ಅಧಿಕಾರಿಗಳ ಸಹಯೋಗದೊಂದಿಗೆ ಬಾದಾಮಿ ತಾಲೂಕಿನ ಹಂÀಗರಗಿ ಗ್ರಾಮದ ರೈತರಾದ ಶಂಕ್ರಪ್ಪ ಹೊಸಗೌಡರ, ಸುರೇಶ ಗುಳಣ್ಣನವರ, ಬಸವರಾಜ ಕುರಿ, ಬೇಲೂರ ಗ್ರಾಮದ ರೈತರಾದ ಶ್ರೀ ಯಲಿಗಾರ, ಶಂಕ್ರಪ್ಪ ಹುನಗುಂದ ತಾಲೂಕಿನ ಸೂಳಿಭಾವಿ ಗ್ರಾಮದ ರೈತರಾದ ಜಿ.ಬಿ. ಮಕಾನದಾರ, ಬೆಂಕನಗೌಡ್ರ, ವಜ್ರಮಟ್ಟಿ ಬಾಗಲಕೋಟ ತಾಲೂಕಿನ ಬೆನಕಟ್ಟಿ ಗ್ರಾಮದ ರೈತರಾದ ಹನುಮಂತಗೌಡ ದಾಸಪ್ಪನವರ, ಹಾಗೂ ಬೆನ್ನೂರ ಭೀಮಶಿ ಲಖನವರ, ಮುಂತಾದ ರೈತರ ಕ್ಷೇತ್ರಗಳಿಗೆ ಭೇಟಿ ನೀಡಿ ವೈಜ್ಞಾನಿಕ ಸಲಹೆ ನೀಡಿದರು. ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರಾದ ಬಿ.ಪಿ.ಪಾಟೀಲ, ಸುಭಾಷ ಸೂಪಿ, ಬಸವರಾಜ ಗೌಡನ್ನವರ, ಹೊಳೆಬಸು ಮೀಸಿ, ಗುರುರಾಜ ಹಾಗೂ ಆದರ್ಶ ಅಧಿಕಾರಿ ವರ್ಗದವರು ರೈತರ ಕ್ಷೇತ್ರಗಳನ್ನು ಭೇಟಿ ನೀಡಲು ಅತ್ಯುತ್ತಮವಾಗಿ ಸಹಕರಿಸಿದರು.
ಮುಂದಿನ ದಿನಗಳಲ್ಲಿ ಇನ್ನೂ ತೋವಿವಿ ಹಾಗೂ ತೋಟಗಾರಿಕೆ ಇಲಾಖೆ (ಜಿ.ಪಂ) ಬಾಗಲಕೋಟದ ಸಹಯೋಗದೊಂದಿಗೆ ತೋಟಗಾರಿಕೆ ಬೆಳೆಗಳ ವಿಚಾರ ಗೋಷ್ಠಿಗಳನ್ನು ಹಾಗೂ ಕ್ಷೇತ್ರ ಭೇಟಿ ನೀಡಿ ರೈತರಿಗೆ ತಾಂತ್ರಿಕ ಸಲಹೆ ನೀಡಲು ಸನ್ನದ್ಧರಾಗಿದ್ದಾರೆ ಎಂದು ತಿಳಿಸಿದರು.

Nimma Suddi
";