ಗುಡೂರ ಆರಾಧ್ಯ ಶ್ರೀ ಹುಲ್ಲೇಶ್ವರ ದೇವರ ಜಾತ್ರಾ ಮಹೋತ್ಸವ ಇದೆ 24 ಮಂಗಳವಾರದಂದು ಜರುಗಲಿದೆ
ಬಾಗಲಕೋಟೆ ಜಿಲ್ಲೆಯ ಈ ಜಾತ್ರೆ ವಿಶೇಷವಾಗಿರುವುದು ಹುಲ್ಲೇಶ್ವರ ದೇವರ ದೇವಸ್ಥಾನ ಬಹು ಎತ್ತರದ ಬೆಟ್ಟದ ಕೆಳಗೆ ನೆಲೆಸಿರುವನು. ಹಳ್ಳಿ ಪಟ್ಟಣ ನಗರಗಳಿಂದ ಭಕ್ತರು ಆಗಮಿಸುವರು ಪೂಜ್ಯ ಗಿರಿಯಪ್ಪಜ್ಜ ಮಳ್ಳಯ್ಯನವರ ದೇವವಾಣಿ ನುಡಿವರು.
ಶ್ರೀ ಹುಲ್ಲೇಶ್ವರ ಮಹಾಮೂರ್ತಿಗೆ ಗಂಗೆ ಮಾಳಮ್ಮ ದೇವಿಗೆ ವೀರಭದ್ರ ದೇವರಿಗೆ ಮಾರುತೇಶ್ವರನಿಗೆ ಬೆಳಿಗ್ಗೆ ಗಂಗಾ ಪೂಜೆ ವಿಶೇಷ ಪೂಜೆ ವಿಧಿ ವಿಧಾನಗಳು ಜರುಗುವವು ವಿವಿಧ ವಾದ್ಯ ಮೇಳಗಳೊಂದಿಗೆ ಪಲ್ಲಕ್ಕಿ ಕಲಶ ಪೂಜಾರಿಯವರ ಮನೆಯವರಿಂದ ಗ್ರಾಮದ ರಥಬೀದಿಯಲ್ಲಿ ಮೆರವಣಿಗೆ ಮುಖಾಂತರ ದೇವಸ್ಥಾನ ತಲುಪಿ ಗುಡಿ ಗೋಪುರಗಳ ಮೇಲೆ ಪ್ರತಿಷ್ಠಾಪಿಸುವರು.
ಮಳೆಯಪ್ಪನ ಕಟ್ಟೆ ಬಳಿ ಇರುವ ಬನ್ನಿ ಮಹಾಂಕಾಳಿಗೆ ಪೂಜೆ ಸಲ್ಲಿಸಿದ ಬಳಿಕ ವಿಜಯದಶಮಿ ಬನ್ನಿ ಮುಡಿಯುವುದರೊಂದಿಗೆ ಶ್ರೀ ಗಿರಿಯಪ್ಪಜ್ಜ ಮಳ್ಳ ಯ್ಯ ನವರು ಜೋಡಿ ಬಸವಣ್ಣನ ಕಿವಿಗೆ ಕಿವಿ ಹಚ್ಚಿ ದೇವವಾಣಿ ನುಡಿವರು. ಈ ಸಂದರ್ಭದಲ್ಲಿ ಗ್ರಾಮೀಣ ಭಾಗದ ರೈತಪಿ ಭಕ್ತರು ಏಳು ಕೋಟಿಗೆ ಎಂದು ಜೈ ಜೈ ಕಾರ ಹಾಕುವುದರ ಮುಖಾಂತರ ಭಕ್ತಿ ಸಮರ್ಪಿಸುವರು. ಪಲ್ಲಕ್ಕಿ ನಂದಿಕೋಲು ಕುದುರಿ ಗಾರರು ವೀರ ಗಾರರು ಕಂಚಿವೀರರು ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವರ ಕೃಪೆಗೆ ಪಾತ್ರರಾಗುವರು
ಶ್ರೀ ಹುಲ್ಲಪ್ಪಜ್ಜ ಒಗ್ಗಯ್ಯನವರು ದೇವಸ್ಥಾನ ದ್ವಾರ ಬಾಗಿಲ ಮುಂದೆ ಸರಪಳಿ ಪವಾಡ ಮಾಡುವರು ಅನ್ನದಾಸೋಹ ಹತ್ತು ಹಲವು ಧಾರ್ಮಿಕ ಕಾರ್ಯಕ್ರಮಗಳು ತಾಲೂಕ ತಹಶೀಲ್ದಾರ್ ನೇತೃತ್ವದಲ್ಲಿ ಜರುಗಲಿವೆ ಎಂದು ತಿಳಿಸಿದ್ದಾರೆ.