ಬಾಗಲಕೋಟೆ: ಸಾಮಾಜಿಕ ನ್ಯಾಯದ ಪಾಠ ಹೇಳುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಆಡಳಿತದಿಂದ ಶೋಷಿತ ಸಮುದಾಯದ ಹಕ್ಕುಬಾದ್ಯತೆಗಳಿಗೆ ಧಕ್ಕೆಯಾಗುತ್ತಿದೆ. ವಾಸ್ತವಿಕವಾಗಿ ಜಿಲ್ಲೆಯಲ್ಲಿ ಅಸ್ಪೃಶ್ಯ ಸಮುದಾಯಗಳಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ರಾಜ್ಯ ಮಾದಿಗ ಮಹಾಸಭಾದ ಅಧ್ಯಕ್ಷ ಮುತ್ತಣ್ಣ ಬೆಣ್ಣೂರ ಆರೋಪಿಸಿದ್ದಾರೆ.
ಜಿಲ್ಲೆಯ ಪ್ರತಿಯೊಂದು ತಾಲೂಕಿನಲ್ಲಿರುವ ಶೋಷಿತ ಸಮುದಾಯದ ಅಸ್ಪೃಶ್ಯ ಜನಾಂಗಗಳ ಮೇಲೆ ಕಾಂಗ್ರೆಸ್ ಬೆಂಬಲಿತರಿAದ ನಿರಂತರ ದೌರ್ಜನ್ಯ ನಡೆಯುತ್ತಿದ್ದು, ನ್ಯಾಯಕ್ಕಾಗಿ ಪೊಲೀಸ್ ಠಾಣೆಗೆ ದೂರು ಕೊಡಲು ಬಂದಾಗ ದೌರ್ಜನ್ಯ ಸಂತ್ರಸ್ತರ ಮೇಲೆಯೇ ಘಟನೆ ತಿರುಚಿ ಪ್ರತಿ ದೂರು ದಾಖಲಿಸಿಕೊಂಡು ಠಾಣಾಧಿಕಾರಿಗಳು ಸ್ಥಳೀಯ ಶಾಸಕರ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಒತ್ತಡಕ್ಕೆ ಮಣಿದು ದೌರ್ಜನ್ಯ ಪೀಡಿತರಿಗೆ ಭಯ ಹುಟ್ಟಿಸಿ ಠಾಣೆಯಲ್ಲಿಯೇ ರಾಜೀ ಮಾಡುತ್ತಿರುವುದು ದೌರ್ಜನ್ಯ ಪೀಡಿತ ಸಂತ್ರಸ್ಥರ ಮೇಲೆ ಪ್ರತಿ ದೂರು ದಾಖಲಿಸುತ್ತಿರುವುದು ವಿಷಾದನೀಯ ಸಂಗತಿಯಾಗಿದೆ.
ಇನ್ನೊಂದು ಕಡೆಗೆ ಜಿಲ್ಲಾ ಉಸ್ತುವಾರಿಗಳು, ಜಿಲ್ಲಾಧಿಕಾರಿಗಳು ಶೋಷಿತ ಸಮುದಾಯವರಿದ್ದರೂ ಕೂಡಾ ದಲಿತ ನೌಕರರಿಗೆ ತೋಟಗಾರಿಕೆ ಇಲಾಖೆಯಲ್ಲಿ ನ್ಯಾಯಬದ್ಧವಾಗಿ ಸಿಗುವ ಮುಂಬಡ್ತಿಗಳನ್ನು ನೀಡದೇ ವಂಚಿಸುತ್ತಿದ್ದಾರೆ. ಈ ಸಂಗತಿ ಕುರಿತು ಮೇಲಾಧಿಕಾರಿಗಳಿಗೆ ಗಮನ ಸೆಳೆದಾಗ ಕುಂಟು ನೆಪವೊಡ್ಡಿ ಕಾಲಹರಣ ಮಾಡುತ್ತಾ ಆಡಳಿತದಲ್ಲಿ ಅವ್ಯವಸ್ಥೆ ಹುಟ್ಟು ಹಾಕಿ ಜಿಲ್ಲೆಗೆ ಕೆಟ್ಟ ಹೆಸರು ತಂದಿದ್ದಾರೆ. ಮತ್ತು ಬಾಗಲಕೋಟೆ ನಗರಸಭೆಯಲ್ಲಿನ ಪೌರಕಾರ್ಮಿಕರಿಗೆ ಸರಿಯಾದ ವೇತನ ನೀಡುತ್ತಿಲ್ಲ. ಕೇಳಲು ಹೋದವರನ್ನು ದೂರ ನಿಲ್ಲಿಸಿ ನಿಂದಿಸುತ್ತಿದ್ದಾರೆ.
ಒಟ್ಟಾರೆ ತಾಲೂಕಿನ ಆಡಳಿತ ವ್ಯವಸ್ಥೆಯಲ್ಲಿ ಇಬ್ಬಿಬ್ಬರೂ ಅಧಿಕಾರಿಗಳನ್ನು ಆಯಾ ಕಟ್ಟಿನ ಸ್ಥಳಗಳಲ್ಲಿ ತಂದಿಟ್ಟು ಕರ್ತವ್ಯಕ್ಕೆ ಚ್ಯುತಿ ತಂದಿರುವುದು ಸರ್ಕಾರಕ್ಕೆ ಗೊತಿಲ್ಲವೇನು? ಉಸ್ತುವಾರಿ ಸಚಿವರು ಮತ್ತು ಜಿಲ್ಲಾಧಿಕಾರಿಗಳು ಅದನ್ನು ಗಮನಿಸದೇ ದಿವ್ಯ ನಿರ್ಲಕ್ಷö್ಯ ತಾಳಿರುವುದು ತುಂಬಾ ಖೇದಕರ ಸಂಗತಿ.
ಜಿಲ್ಲೆಯಲ್ಲಿರುವ ಶೋಷಿತ ಸಮುದಾಯದ ಅಸ್ಪೃಶ್ಯರಿಗೆ ಹಾಗೂ ನೌಕರರಿಗೆ ಆಗುತ್ತಿರುವ ಅನ್ಯಾಯವನ್ನು ಜಿಲ್ಲಾಡಳಿತ ಸರಿಪಡಿಸಬೇಕು ಇಲ್ಲದಿದ್ದರೆ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಜಿಲ್ಲಾಧ್ಯಂತ ಹೋರಾಟ ಮಾಡಲಾಗುವುದು ಎಂದು ರಾಜ್ಯ ಮಾದಿಗ ಮಹಾಸಭಾದ ಅಧ್ಯಕ್ಷ ಮುತ್ತಣ್ಣ ವಾಯ್.ಬೆಣ್ಣೂರ, ಜಿಲ್ಲಾಧ್ಯಕ್ಷ ಚಂದ್ರಕಾAತ ಜ್ಯೋತಿ, ಮಾದಿಗ ಮಹಾಸಭಾ ಯುವ ಘಟಕದ ರಾಜ್ಯ ಕಾರ್ಯದರ್ಶಿ ಸತೀಶ ಮಾದರ, ಸಂಘಟನಾ ಕಾರ್ಯದರ್ಶಿ ಶಾಂತಕುಮಾರ ಮೂಕಿ, ಜಿಲ್ಲಾ ಸಂಚಾಲಕ ಹಣಮಂತ ಚಿಮ್ಮಲಗಿ ಪತ್ರಿಕಾ ಪ್ರಕಟಣೆಯ ಮೂಲಕ ಎಚ್ಚರಿಸಿದ್ದಾರೆ.