ಬಾಗಲಕೋಟೆ
ರಾಣಿ ಚನ್ನಮ್ಮ ತನ್ನ ರಾಜ್ಯದ ಉಳಿವಿಗಾಗಿ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ಪ್ರಪ್ರಥಮ ವೀರ ಮಹಿಳೆಯಾಗಿದ್ದು, ಈಗಿನ ಪ್ರತಿ ಮಹಿಳೆಯರಿಗೆ ಸ್ಪೂರ್ತಿ ಆಗಿದ್ದಾರೆ ಎಂದು ಐಟಿ ಯುವ ಉದ್ಯಮಿ ಬಸವರಾಜ ಬಾಗೇವಾಡಿ ಹೇಳಿದರು.
ಬಾಗಲಕೋಟೆ ತಾಲ್ಲೂಕಿನ ರಾಂಪೂರ ಗ್ರಾಮದಲ್ಲಿ ಸೋಮವಾರ ಪಂಚಮಸಾಲಿ ಪ್ರಜ್ಞಾವಂತ ಯುವಕರ ಬಳಗದ ವತಿಯಿಂದ ಹಮ್ಮಿಕೊಂಡ ೨೪೫ನೇ ಕಿತ್ತೂರು ಚೆನ್ನಮ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಿತ್ತೂರು ರಾಣಿ ಚನ್ನಮ್ಮ ದೇಶ ಸೇವೆಗಾಗಿ ತನ್ನ ಪ್ರಾಣಾರ್ಪಣೆ ಮಾಡಿದ ಕಾರಣಕ್ಕೆ ಈಗಲೂ ಸ್ಮರಿಸುತ್ತೇವೆ. ತ್ಯಾಗ ಮಾಡಿದಂತಹವರು ಪೂಜಿಸಲ್ಪಡುತ್ತಾರೆ ಎಂಬುದಕ್ಕೆ ಕಿತ್ತೂರು ರಾಣಿ ಚನ್ನಮ್ಮ ಸಾಕ್ಷಿ ಎಂದು ತಿಳಿಸಿದರು.
ತಾಲ್ಲೂಕ ಪಂಚಾಯತ್ ಮಾಜಿ ಸದಸ್ಯ ಬಸವರಾಜ ಕೆಂಜೋಡಿ ಮಾತನಾಡಿ, ತಮಗಾಗಿ ಅಲ್ಲದೆ ಬೇರೆಯವರ ಜೀವನಕ್ಕಾಗಿ ತ್ಯಾಗ ಮಾಡಿದಂತಹವರ ಹೆಸರು ಯಾವುದೇ ಕಾರಣಕ್ಕೂ ಅಳಿಯಬಾರದು. ಸದಾ ಉಳಿಯುವಂತಾಗಬೇಕು ಎಂದರು.
ಸಮಾಜದ ಹಿರಿಯರಾದ ಶರಣಪ್ಪ ಅಂಗಡಿ ಮಾತನಾಡಿ, ಜೀವನದಲ್ಲಿ ಪರೋಪಕಾರ ಮಾಡಬೇಕು. ಕಿತ್ತೂರು ರಾಣಿ ಚನ್ನಮ್ಮ ಸಹ ತಮ್ಮ ಜೀವನವನ್ನು ಪರೋಪಕಾರಕ್ಕಾಗಿ ಮೀಸಲಿಟ್ಟಿದ್ದವರು. ಧೈರ್ಯವೇ ಜೀವನದ ಸಾಧನ ಎಂದು ಸಮಾಜಕ್ಕೆ ಮೀಸಲಿಟ್ಟವರು ಎಂದರು.
ಸಮುದಾಯದ ಹಿರಿಯರಾದ ಶ್ರೀಶೈಲಪ್ಪ ಕೆಂಜೋಡಿ, ಅಶೋಕ ಝಂಡೇದ, ರಾಘು ಕೆಂಜೋಡಿ, ಸಿದ್ದು ಕೆಂಜೋಡಿ ಅವರು ಪ್ರಾಸಾಸ್ತಾವಿಕವಾಗಿ ಮಾತನಾಡಿದರು.
ಬಸವರಾಜ ಸಂಗಪ್ಪ ಕೆಂಜೋಡಿ, ರಾಮಸ್ವಾಮಿ ಕೊಣ್ಣೂರ, ಆನಂದ ಕಮತಗಿ, ಪರಪ್ಪ ಹಕಾರಿ, ಸಂಗಪ್ಪ ಕೊಣ್ಣೂರ, ರಾಮಸ್ವಾಮಿ ಕಮತಗಿ, ದುಂಡೇಶ ಕೊಣ್ಣೂರ, ರಾಜಶೇಖರ ಮಕಾಶಿ, ಬಸವರಾಜ ಕಾಜಗಾರ, ಕುಮಾರ ಕವಳ್ಳಿ, ರಮೇಶ ಕೆಂಜೋಡಿ, ಬಸವರಾಜ ಹಕಾರಿ, ಮುತ್ತು ಅಂಗಡಿ, ಸಂಗಪ್ಪ ಕೊಣ್ಣೂರ, ಮಲ್ಲಿಕಾರ್ಜುನ ಕೊಣ್ಣೂರ, ಶ್ರೀಧರ್ ಹಕಾರಿ ಸೇರಿದಂತೆ ಹಲವಾರು ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.