ಬಾಗಲಕೋಟೆ
ಜಿಲ್ಲೆಯ ಹುನಗುಂದ ತಾಲೂಕು ಆಡಳಿತದಿಂದ ಕನ್ನಡದ ರಾಜ್ಯೋತ್ಸವ ಸಂಭ್ರಮಕ್ಕೆ ವೇದಿಕೆ ಸಿದ್ದಗೊಂಡಿದ್ದು ಕೆಲವೇ ಕ್ಷಣಗಳಲ್ಲಿ ಆರಂಭಗೊಳ್ಳಲಿದೆ.
ನಗರದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಸಿದ್ದಗೊಂಡ ಬೃಹತ್ ವೇದಿಕೆ ಆಕರ್ಷಣೆ ಪಡೆದುಕೊಂಡಿದೆ. ಈಗಾಗಲೇ ನಗರದ ಬಸವ ಮಂಟಪದಿಂದ ಮೆರವಣಿಗೆಗೆ ಕ್ಷೇತ್ರದ ಶಾಸಕ ವಿಜಯಾನಂದ ಕಾಶಪ್ಪನವರ ಚಾಲನೆ ನೀಡಿದ್ದಾರೆ.
ಪ್ರಮುಖ ಬೀದಿಗಳಲ್ಲಿ ಸಂಚರಿಸಲಿರುವ ಮೆರವಣಿಗೆ ಸಭಾಂಗಣ ತಲುಪಲಿದೆ. ವೇದಿಕೆಯಲ್ಲಿ ಹಲವು ಕ್ಷೇತ್ರದ ಸಾಧಕರಿಗೆ ತಾಲೂಕು ಆಡಳಿತದಿಂದ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.