*ಲಿಂಬೆ ತೋಟಗಳಲ್ಲಿ ಜೇನು ಸಾಕಾಣಿಕೆಯ ಪ್ರಯೋಜನಗಳು:*
ತಮಗೆಲ್ಲ ತಿಳಿದ ಹಾಗೆ ಲಿಂಬೆ ಗಿಡವು ವರ್ಷದ ಪೂರ್ತಿ ಹೂಗಳನ್ನು ಬಿಡುವುದರಿಂದ ಮತ್ತು ವಿಶೇಷವಾಗಿ ಲಿಂಬೆ ಬೆಳೆಯಲ್ಲಿ ವಿಷಕಾರಕ ರಾಸಾಯನಿಗಳ ಬಳಕೆ ಬಹಳ ಕಡಿಮೆ ಇರುವದರಿಂದ, ಲಿಂಬೆ ತೋಟಗಳಲ್ಲಿ ಜೇನು ಸಾಕಾಣಿಕೆಗೆ ಬಹಳಷ್ಟು ಅವಕಾಶವಿದೆ.
ಇದಲ್ಲದೇ, ಲಿಂಬೆ ತೋಟಗಳಲ್ಲಿ ಜೇನು ಹುಳ ಸಾಕಾಣಿಕೆಯಿಂದ, ಪರಾಗಸ್ಪರ್ಶ ಹೆಚ್ಚುವದರಿಂದ ಒಟ್ಟಾರೆ ಲಿಂಬೆ ಇಳವರಿಯಲ್ಲೂ ಸಹ ಗಣನೀಯ ಪ್ರಮಾಣದಲ್ಲಿ ಹೆಚ್ಚಳ ಉಂಟಾಗುತ್ತದೆಯಲ್ಲದೇ, ಸುತ್ತಮುತ್ತಲಿನ ಜಮೀನುಗಳಲ್ಲಿಯ ಬೆಳೆಗಳ ಇಳುವರಿಯಲ್ಲೂ ಸಹ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗುತ್ತದೆ.
ಈ ಎಲ್ಲ ಅಂಶಗಳನ್ನು ಗಮನಿಸಿದಾಗ, ಲಿಂಬೆ ತೋಟಗಳಲ್ಲಿ ಜೇನು ಸಾಕಾಣಿಕೆಗೆ ವಿಪುಲವಾದ ಅವಕಾಶಗಳಿದ್ದು, ಲಿಂಬೆ ಬೆಳೆಗಾರರು ಈ ಕುರಿತು ವಿಷೇಶ ಆಸಕ್ತಿ ವಹಿಸಿ ತಮ್ಮ ತೋಟಗಳಲ್ಲಿ ಜೇನು ಸಾಕಾಣಿಕೆಗೆ ಮುಂದಾಗಬೇಕಿದೆ.
ಇದಲ್ಲದೇ ಜೇನು ತುಪ್ಪದ ಉತ್ಪಾದನೆಯಿಂದಲೂ ಸಹ ಸಾಕಷ್ಟು ಹೆಚ್ಚಿನ ಆದಾಯವನ್ನು ಪಡೆಯಬಹುದಾಗಿದೆ. ಈ ಕಾರಣದಿಂದಾಗಿ ಆತ್ಮ ಯೋಜನೆ, ವಿಜಯಪುರ ಅಡಿಯಲ್ಲಿ *ದಿನಾಂಕ* . *06.11.2023, ಸೋಮವಾರ ಬೆಳಿಗ್ಗೆ 11.00 ಗಂಟೆಗೆ,* ಉಪ ಕೃಷಿ ನಿರ್ದೇಶಕರು-1, ವಿಜಯಪುರ (ಜಿಲ್ಲಾಧಿಕಾರಿಗಳ ಕಛೇರಿ ಹತ್ತಿರ) ರವರ ಕಾರ್ಯಾಲಯದಲ್ಲಿ ಒಂದು ದಿನದ *ಜೇನು ಸಾಕಾಣಿಕೆ* ತರಬೇತಿಯನ್ನು ಆಯೋಜಿಸಲಾಗಿದ್ದು, ಆಸಕ್ತ ರೈತರು ಭಾಗವಹಿಸಬಹುದಾಗಿದೆ. @ ಡಾ. ಎಂ. ಬಿ. ಪಟ್ಟಣಶೆಟ್ಟಿ ಆತ್ಮ ಉಪ ಯೋಜನಾ ನಿರ್ದೇಶಕರು, ವಿಜಯಪುರ.