ಬಾಗಲಕೋಟೆ
ಶಿಕ್ಷಣದ ಯಶಸ್ಸಿನಲ್ಲಿ ಮಕ್ಕಳು ಪಾಲುದಾರರಾಗಬೇಕೆಂದರೆ ತಮಗೆ ದೊರೆಯುವ ಪುಸ್ತಕಗಳ ಸದ್ಬಳಕೆ ಅತ್ಯವಶ್ಯಕ ಎಂದು ಶಾಸಕ ಜೆ.ಟಿ.ಪಾಟೀಲ್ ಹೇಳಿದರು.
ಕೆರೂರು ಸಮೀಪದ ನರೇನೂರು, ಬೆಳ್ಳಿಖಂಡಿ ಗ್ರಾಮದಲ್ಲಿ ಎಂ.ಎಸ್.ಈಟಿ ಫೌಂಡೇಶನ್ ವತಿಯಿಂದ ವಿದ್ಯಾರ್ಥಿಗಳಿಗೆ ಪುಸ್ತಕ ಹಾಗೂ ಪೆನ್ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಅವರು, ನನಗೆ ಸನ್ಮಾನ ಮಾಡುವ ಬದಲು ವಿದ್ಯಾರ್ಥಿಗಳಿಗೆ ಪುಸ್ತಕ ಪೆನ್ ವಿತರಣೆಯಾದರೆ ವಿದ್ಯಾರ್ಥಿಗಳಿಗೆ ಅನುಕೂಲಕರವಾಗುತ್ತದೆ ಎಂದರು.
ಶಾಲಾ ಗ್ರಂಥಾಲಯಕ್ಕೆ ಸ್ವಾತಂತ್ರ‍್ಯ ಹೋರಾಟಗಾರರ ಪುಸ್ತಕ ವಿತರಿಸಿ ಮಾತನಾಡಿದ ಕಾಂಗ್ರೆಸ್ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ರಕ್ಷಿತಾ ಈಟಿ, ಶ್ರೇ?À್ಠ ಗುರಿಯೆಡೆಗೆ ಸಾಗುವ ವಿದ್ಯಾರ್ಥಿಗಳಿಗೆ ಇಂತಹ ಪುಸ್ತಕ ವಿತರಣೆ ಮಾಡುವುದು ಖುಷಿಯ ವಿಚಾರ. ವಿದ್ಯಾರ್ಥಿಗಳು ಸಂಸ್ಕಾರವAತರಾಗಲು ಸಹಕಾರಿಯಾಗುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಹಕರಿಸುವುದಾಗಿ ತಿಳಿಸಿದರು.
ಲಕ್ಷ್ಮಿ ಬೆಳಗಂಟಿ, ಡಾ.ಎಂ.ಜಿ.ಕಿತ್ತಲಿ, ಡಾ.ಬಿ.ಕೆ.ಕೋವಳ್ಳಿ, ನಿಂಗಪ್ಪ ಬೆಳಗಂಟಿ, ಅಶೋಕ ಕೊಪ್ಪದ, ಶೇಖರ್ ಲಮಾಣಿ, ಪ್ರವೀಣ್ ಚಿಕ್ಕೂರ, ಕಾಳಪ್ಪ ಲಮಾಣಿ, ಸಿದ್ದಪ್ಪ ಮೆಟಗುಡ್ಡ, ಮಲ್ಲಪ್ಪ ಪೂಜಾರಿ, ಶಾಲೆ ಮುಖ್ಯಗುರು, ಶಿಕ್ಷಕರು ವಿದ್ಯಾರ್ಥಿಗಳು ಇದ್ದರು.