This is the title of the web page
This is the title of the web page

Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

Local NewsState News

ಭಾರತೀಯ ಧರ್ಮ ಚಿಂತನೆಯ ಪರಂಪರೆ ಮಾನವೀಯ ಮೌಲ್ಯತೆಯಲ್ಲಿ ಎತ್ತಿ ಹಿಡಿದ ಶಿವಗಂಗಾ ಶ್ರೀ

ಭಾರತೀಯ ಧರ್ಮ ಚಿಂತನೆಯ ಪರಂಪರೆ ಮಾನವೀಯ ಮೌಲ್ಯತೆಯಲ್ಲಿ ಎತ್ತಿ ಹಿಡಿದ ಶಿವಗಂಗಾ ಶ್ರೀ

ಮಾನವೀಯ ಮೌಲ್ಯ ಧಾರ್ಮಿಕ ಪರಂಪರೆ ಹೆಚ್ಚಿಸಿದವರು ಶಿವಗಂಗೆ ಶ್ರೀಗಳು

ಕೆಲೂರ: ಶ್ರೀ ಗುರು ಮಂಟೇಶ್ವರ ಶಿವಸ್ವರೂಪಿ ಶಿವಗಂಗೆಯ ಡಾ ಮಲಯ ಶಾಂತ ಮುನಿಶ್ರೀಗಳು ನನ್ನ ಆರಾಧ್ಯ ದೇವರು ನನ್ನ ಎಲ್ಲ ಶ್ರೇಯೋಭಿವೃದ್ಧಿಗೆ ಕಾರಣಿ ಗುರುವರ್ಯರು ಅವರ ಶುಭ ಆಶೀರ್ವಾದವೇ ಪುಣ್ಯಕ್ಷೇತ್ರ ಸಿದ್ದನ ಕೊಳ್ಳದ ದಾಸೋಹ ಕಲಾ ಹತ್ತು ಹಲವು ಸಾಂಸ್ಕೃತಿಕ ಚಟುವಟಿಕೆಗಳನ್ನು ಮುನ್ನಡೆಸಿಕೊಂಡು ಬಂದ ಪ್ರಯುಕ್ತ ಪ್ರಶಸ್ತಿ ಪುರಸ್ಕಾರ ಯಶಸ್ಸು ಪಡೆಯಲು ಸಾಧ್ಯವಾಗಿದೆ ಎಂದು ಪುಣ್ಯಕ್ಷೇತ್ರ ಸಿದ್ದನ ಕೊಳ್ಳದ ಡಾ,ಶಿವಕುಮಾರ ಶ್ರೀಗಳು ಹೇಳಿದರು.

ಅವರು ಇಲ್ಲಿಯ ಆರಾಧ್ಯ ಶ್ರೀ ಗುರು ಮಂಟೇಶ್ವರ ಶ್ರೀ ಮಠ ವಿಶ್ವಾರಾಧ್ಯರ ಮಹಾಮಂಟಪದಲ್ಲಿ 250ನೇ ಪೌರ್ಣಿಮಾ ಧರ್ಮ ಚಿಂತನೆಯಲ್ಲಿ ನಡೆದ ವೀರ ಮಾತೆ ಕಿತ್ತೂರ ರಾಣಿ ಚೆನ್ನಮ್ಮ ಹಾಗೂ ಮಹರ್ಷಿ ವಾಲ್ಮೀಕಿ ಜಯಂತೋತ್ಸವ ಶುಭ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಫ್ರೈಡ್ ಆಫ್ ಕರ್ನಾಟಕ ಪ್ರಶಸ್ತಿ ಪಡೆದ ಹಿನ್ನೆಲೆ ಅವರು ಶ್ರೀಮಠದ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಈ ದೇಶದ ಅನ್ನ ನೀಡುವ ರೈತನ ಬದುಕು ಬಹಳಷ್ಟು ದುಸ್ತರವಾಗಿದೆ, ಕಾರಣ ಎಲ್ಲರೂ ಪರಿಸರ ಬೆಳೆಸಲು ಮುಂದಾಗಿರಿ. ಅರಣ್ಯ ಬೆಳೆಸುವುದರಿಂದ ಸಕಾಲದಲ್ಲಿ ಮಳೆ ಬೆಳೆಯಲು ಸಾಧ್ಯ, ಭವ್ಯ ಪರಂಪರೆಯ ಸಮೃದ್ಧ ಈ ನಾಡು ದೇಶವನ್ನು ನೀರು ಮುಕ್ತ ದೇಶವಾಗಲು ಬಿಡಬಾರದು ಎಂದು ಕಿವಿಮಾತು ಹೇಳಿದರು. ಬರುವ ಜಾತ್ರಾ ಮಹೋತ್ಸವದಲ್ಲಿ ಅನ್ನದಾಸೋಹದೊಂದಿಗೆ ಸಂಗೀತ ದಾಸೋಹ ಭಕ್ತಿ ಸೇವೆ ಗೈಯಲು ಬದ್ಧ ಎಂದರು.

ಉದ್ಯಮಿ ಧನರಾಜ್ ನಾಡಗೌಡ ಮಾತನಾಡಿ ಹಲವು ಸತ್ಸಂಗ ಕಾರ್ಯಕ್ರಮಗಳಿಗೆ ಗ್ರಾಮಭಕ್ತರು ಹೆಚ್ಚಿನ ಆಸಕ್ತಿ ವಹಿಸಿ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಕೊಡಿಸುವವರಾಗೋಣ, ಧಾರ್ಮಿಕ ಸಾಮಾಜಿಕ ಸೇವೆಗೈದವರಿಗೆ ದಾನ ಧರ್ಮ ಕಾರ್ಯಗಳಿಂದ ಅವರನ್ನು ಅಭಿವೃದ್ಧಿಪಡಿಸಿ ಬೆಳೆಸುವರಾಗೋಣ ಎಂದರು, ಈ ಸಂದರ್ಭದಲ್ಲಿ ಅವರಿಗೆ ಹಾಗೂ ಶ್ರೀಮಠದ ಕುರಿತು 50, ಸಾವಿರ ರೂಗಳಲ್ಲಿ ಸಂಚಿಕೆ ಹೊರ ತರುತ್ತಿರುವ ನಿವೃತ್ತ ಶಿಕ್ಷಕ ಎಸ್ ಎಮ್ ಬೆಲ್ಲದ ಕುಟುಂಬದವರನ್ನು ಪೂಜ್ಯರು ಗೌರವಿಸಿ ಸನ್ಮಾನಿಸಿದರು.

ಡಾ, ಮಲಯ ಶಾಂತ ಮುನಿ ದೇಶಿಕೇಂದ್ರ ಶಿವಾಚಾರ್ಯ ಶ್ರೀಗಳು ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಡಾ,ವಿಶ್ವನಾಥ ಹಿರೇಮಠ ಗ್ರಾಪಂ ಅಧ್ಯಕ್ಷ ಮಹಾಲಿಂಗೇಶ ನಾಡಗೌಡರ, ಮುಖಂಡ ಮುತ್ತಣ್ಣ ನಾಡಗೌಡರ, ವಜೀರಪ್ಪ ಪೂಜಾರ, ಹಿರೇಮಠ ತಾವರಗೇರಿ, ಸಂಗಣ್ಣ ನಾಡಗೌಡರ, ಶ್ರವಣಕುಮಾರ ನಾಡಗೌಡರ, ಎಸ್‌ವಿ ಮಾದನಶೆಟ್ಟಿ, ಬಸಪ್ಪ ಚಿಕ್ಕನ್ನವರ ಇನ್ನೂ ಅನೇಕರು ಉಪಸ್ಥಿತರಿದ್ದರು. ಶ್ರೀ ಗುರು ಮಂಟೇಶ್ವರ ಕರ್ತೃ ಗದ್ದುಗೆಗೆ ವಿಶೇಷ ಪೂಜಾ ಕೈಂಕರ್ಯಗಳು ನಡೆದವು,

ಶೇಖರಯ್ಯ ಮೇಟಿಮಠ ನಿರೂಪಿಸಿದರು, ವೀರೇಶ ಸಂಕೀನ ಸ್ವಾಗತಿಸಿದರು, ಪತ್ರಕರ್ತ ಶಂಕರ ಮಂಡಿ ಪ್ರಾರ್ಥಿಸಿದರು.

Nimma Suddi
";