ಬಾಗಲಕೋಟೆಲ
ಜಿಲ್ಲೆಯ ಇಳಕಲ್ ತಾಲೂಕಿನ ಕೆಲೂರ ಗ್ರಾಮದಲ್ಲಿರುವ ದೊಡ್ಡ ಮಸೀದ ಪಕ್ಕದಲ್ಲಿರುವ ಹಜರತ್ ಸಯ್ಯದ್ ನದಿ ಮುದ್ದಿನ ಶಾ ಖಾದ್ರಿ ದರ್ಗಾದ ಗಂಧ, ಉರುಸು ದೇವಾರಾಧನೆ ಸಂಭ್ರಮೋತ್ಸವ ಜರುಗಿತು.
ಪೂಜ್ಯ ಸಯ್ಯದ್ ಮುರ್ತುಜಾ ಖಾದ್ರಿ, ಸಯ್ಯದ್ ಅಬ್ದುಲ್ ರಜಾಕ್ ಖಾದ್ರಿ, ಸೈಯದ್ ನಶಿಮ್ ಖಾದ್ರಿ ಅಜ್ಜನವರು ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಮೋಜು-ಮಜಲುಗಳೊಂದಿಗೆ ಗ್ರಾಮದ ಹಲವಾರು ಸಮಾಜದ ಗಣ್ಯರು ಹೂ, ಫಲ ಪುಷ್ಪಗಳನ್ನು ನೀಡಿ ಗೌರವಿಸಿ ಸ್ವಾಗತಿಸಿದರು.
ದರ್ಗಾದಲ್ಲಿ ಉರುಸು ದೇವ ಸ್ಮರಣೆಯಲ್ಲಿ ಗಂಧ, ಬಗೆ ಬಗೆಯ ಹೂ, ಫಲಪುಷ್ಪ ಸುಗಂಧ ನೈವೇದ್ಯ ಅರ್ಪಿಸಿ ಪ್ರತಿ ವರ್ಷ ಪದ್ಧತಿಯಂತೆ ಗ್ರಾಮ ಭಕ್ತರಿಗೆ ಅನ್ನದಾಸೋಹದೊಂದಿಗೆ ದೇವರಿಗೆ ಭಯ ಭಕ್ತಿ ಸಮರ್ಪಿಸಿ ಸಂಪನ್ನಗೊಳಿಸಿದರು.
ಅಮೀನಗಡದ ಮುಸ್ತಫ ಖಾದ್ರಿ, ಮುಖಂಡ ಅಪ್ಪಾಸಾಹೇಬ ನಾಡಗೌಡ, ರಾಜೇ ಸಾಬ್ ನದಾಫ್ ಅಜ್ಜನವರು, ಮುತ್ತಣ್ಣ ನಾಡಗೌಡರ, ಹನುಮಂತ ವಡ್ಡರ, ರಮೇಶ್ ಕೊಪ್ಪದ, ಉಮೇಶ ಹೂಗಾರ, ಮೈಬೂ ಸಾಹೇಬ ಮುಜಾವರ, ಮಾಸಪ್ಪ ಕಬ್ಬರಿಗಿ, ಬಾಬು ಸೀಮಿಕೇರಿ ಇನ್ನು ಅನೇಕರು ಉಪಸ್ಥಿತರಿದ್ದರು.