ಬಾಗಲಕೋಟೆ
ಬಾಗಲಕೋಟೆ ನಗರಸಭೆ ವತಿಯಿಂದ ನಂ.೭ ರಿಂದ ನಂ.೯ ರವರೆಗೆ ಅಮೃತ ೨.೦ ಕಾರ್ಯಕ್ರಮದಡಿ ಜಲ ದೀಪಾವಳಿ, ಮಹಿಳೆಯರಿಗಾಗಿ ನೀರು, ನೀರಿಗಾಗಿ ಮಹಿಳೆಯರು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಮಂತ್ರಾಲಯದ ಸೂಚನೆಯಂತೆ ನವೆಂಬರ ೮ ರಂದು ಡೇ-ನಲ್ಮ ವಿಭಾಗ ಹಾಗೂ ಅಮೃತ ಯೋಜನೆಯ ಸಹಯೋಗದಡಿ ಬಾಗಲಕೋಟೆ ಪಟ್ಟಣ ಅಭಿವೃದ್ದಿ ಪ್ರಾಧಿಕಾರದ ವತಿಯಿಂದ ನಿರ್ವಹಿಸಲ್ಪಡುವ ಗದ್ದನಕೇರಿ ಜಲ ಶುದ್ದೀಕರಣ ಕೇಂದ್ರಕ್ಕೆ ಹಾಗೂ ವಾಟರ ಬೋರ್ಡ ವತಿಯಿಂದ ನಿರ್ವಹಿಸಲ್ಪಡುವ ನಾಡಗೌಡ ಬಡಾವಣೆ ಹತ್ತಿರದ ಜಲ ಶುದ್ಧಿಕರಣ ಘಟಕ್ಕಕೆ ನವೆಂಬರ ೮ ರಂದು ತಲಾ ೩೦ ಸ್ವ ಸಹಾಯ ಸಂಘದ ಮಹಿಳೆಯರನ್ನು ವಾಹನದ ಮೂಲಕ ಕರೆದೊಯ್ಯಲಾಗುವುದು.
ಇದೇ ಮೊದಲ ಭಾರಿಗೆ ಮಹಿಳೆಯರಿಗೆ ವಿಶೇಷ ಜಾಗೃತಿ ಕಾರ್ಯಕ್ರಮ ಮಹಿಳೆಯರಿಗಾಗಿ ನೀರಿಗಾಗಿ ಮಹಿಳೆಯರು ಕಾರ್ಯಕ್ರಮ ದೇಶದಾದ್ಯಂತ ನಡೆಯಲಿದ್ದು, ದೀಪಾವಳಿ ಹಬ್ಬದ ಸಮಯದಲ್ಲಿ ನೀರಿನ ಮಹತ್ವದ ಬಗ್ಗೆ ಅರಿವಿನ ಮತ್ತು ಜಾಗೃತಿ ಬೆಳಕನ್ನು ಎಲ್ಲೆಡೆ ಮಹಿಳೆಯರು ಮೂಡಿದಸಲಿದ್ದಾರೆ. ಮನೆಗಳಿಗೆ ಶುದ್ಧ ಮತ್ತು ಸುರಕ್ಷಿತ ಕುಡಿಯವ ನೀರು ಪೂರೈಕೆಯ ಪ್ರಕ್ರಿಯೆ ನಾಗರಿಕರು ಪಡೆದುಕೊಳ್ಳಲು ಅನುಸರಿಸುವ ವಿವಿಧ ಪರೀಕ್ಷಾ ಮಾದರಿಯ ಪ್ರಕ್ರಿಯೆಯ ಬಗ್ಗೆ ಮಾಹಿತಿ ನೀಡಲಾಗುವುದು. ನೀರಿನ ಮೂಲಸೌಕರ್ಯದ ಬಗ್ಗೆ ಮಾಲೀಕತ್ವದ ಭಾವನೆಯನ್ನು ಮಹಿಳೆಯರ ನಡುವೆ ತರುವ ಅರಿವು ಮೂಡಿಸಲಾಗುವುದು ಎಂದು ನಗರಸಭೆಯ ಪೌರಾಯುಕ್ತ ರಮೇಶ ಜಾಧವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.