*ದೀಪಾವಳಿ ಹಬ್ಬದ ಪ್ರಯುಕ್ತ ದೀಪ ಸಂಜೀವಿನಿ | ಮಣ್ಣಿನ ಹಣತೆಗಳ ಮೇಳ*
ಬಾಗಲಕೋಟೆ:
ಜಿಲ್ಲೆಯ ವಿವಿಧ ಸ್ವ-ಸಹಾಯ ಸಂಘಗಳ ಕೈ ಚಳಕದಿಂದ ತಯಾರಿಸಲಾದ ವಿವಿಧ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ಶಾಸಕ ಎಚ್.ವಾಯ್.ಮೇಟಿ ಗುರುವಾರ ಚಾಲನೆ ನೀಡಿದರು.
ಜಿಲ್ಲಾಡಳಿತ ಭವನದ ಆವರಣದಲ್ಲಿ ಜಿಲ್ಲಾ ಪಂಚಾಯತ, ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ, ಕೌಶಲ್ಯಾಭಿವೃದ್ದಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಗ್ರಾಮೀಣಾಭಿವೃದ್ದಿ ಪಂಚಾಯತ ರಾಜ್ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಎರಡು ದಿನಗಳ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಚಾಲನೆ ನೀಡಿ ವಿವಿಧ ತರಹದ ವಸ್ತುಗಳನ್ನು ವೀಕ್ಷಣೆ ಮಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕೆ.ಎಂ.ಜಾನಕಿ, ಜಿ.ಪಂ ಸಿಇಓ ಶಶಿಧರ ಕುರೇರ, ಜಿ.ಪಂ ಯೋಜನಾ ನಿರ್ದೇಶಕ ಎನ್.ವಾಯ್.ಬಸರಿಗಿಡದ, ಸಹಾಯಕ ಯೋಜನಾಧಿಕಾರಿ ಭೀಮಪ್ಪ ತಳವಾರ ಸೇರಿದಂತೆ ಇತರೆ ಅಧಿಕಾರಿಗಳು ಪಾಲ್ಗೊಂಡು ವೀಕ್ಷಣೆ ಮಾಡಿದರು.
ಕಲಾದಗಿ ಐಶ್ವರ್ಯ ಲಕ್ಷ್ಮೀ ಸ್ವ-ಸಹಾಯ ಸಂಘ, ಮಹಮ್ಮದ ಪೈಗಂಬರ ಮಹಿಳಾ ಸಂಘ, ಗದ್ದನಕೇರಿ ಸರಸ್ವತಿ ಮಹಿಳಾ ಸಂಘ, ಬೇಲೂರಿನ ಭೀಮಾಂಬಿಕೆ ಸಂಜೀವಿನಿ ಮಹಿಳಾ ಸಂಘದಿಂದ ತಯಾರಿಸಿದ ಮಣ್ಣಿನ ಹಣತೆ, ಸೂಳೇಭಾವಿಯ ರೇವಣ ಸಿದ್ದೇಶ್ವರ ಇಲಕಲ್ಲ ಸೇರೆ ಉತ್ಪಾದಕರ ಸಂಘದಿಂದ ಇಲಕಲ್ಲ ಸೀರೆ, ಮುರನಾಳ ಗ್ರಾಮದ ಲಕ್ಷ್ಮೀದೇವಿ ಮಹಿಳಾ ಸಂಘ, ವಿಷ್ಣುವಲ್ಲಭ ಮಹಿಳಾ ಸಂಘದಿಂದ ಮನೆ ಅಲಂಕಾರಿಕ ವಸ್ತುಗಳು, ದಾನಮ್ಮದೇವಿ ಮಹಿಳಾ ಸಂಘದಿಂದ ಹೋಮ್ ಮೇಡ್ ಪ್ರಾಡಕ್ಟ ಹಾಗೂ ಕಟಗೇರಿ ಮಾಕೂಟೇಶ್ವರ ಸಂಜೀವಿನಿ ಮಹಿಳಾ ಸಂಘದಿದ ದೀಪದ ಹಣತೆಗಳ ಪ್ರದರ್ಶನ ಂ ಮಾರಾಟದಲ್ಲಿ ಇಡಲಾಗಿದೆ. ಪ್ರದರ್ಶನ ಮತ್ತು ಮಾರಾಟ ಮೇಳ ಎರಡು ದಿನಗಳ ಕಾಲ ನಡೆಯಲಿದೆ.