ಬಾಗಲಕೋಟೆ
ರಾಷ್ಟ್ರೀಯ ಅಧ್ಯಕ್ಷರಾದ ಜಯಪ್ರಕಾಶ ನಡ್ಡಾ ಅವರು ದೀಪಾವಳಿ ಕೊಡುಗೆಯಾಗಿ ಬಿ.ವೈ.ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ನೇಮಿಸಿದ್ದು ಸಂತಸವಾಗಿದೆ ಎಂದು ಅಮೀನಗಡ ಪಟ್ಟಣ ಪಂಚಾಯಿತಿ ಸದಸ್ಯ ವಿಜಯಕುಮಾರ ಕನ್ನೂರ ತಿಳಿಸಿದ್ದಾರೆ
ಹಿಂದಿನ ಮುಖ್ಯಮಂತ್ರಿ ಹಿರಿಯರಾದ ಬಿ.ಎಸ್.ಯಡಿಯೂರಪ್ಪನವರ ಪುತ್ರರಾದ ಹಾಗೂ ಶಿಕಾರಿಪುರ ಶಾಸಕರಾದ ಬಿ.ವೈ ವಿಜಯೇಂದ್ರರವರನ್ನು ಬಿಜೆಪಿ ರಾಜ್ಯಧ್ಯಕ್ಷರಾಗಿ ಮಾಡಿದ್ದನ್ನು ಸ್ವಾಗತಿಸುತ್ತೇವೆ.
ಅವರಿಂದ ಭಾರತೀಯ ಜನತಾ ಪಾರ್ಟಿ ಇನ್ನಷ್ಟು ಬೆಳೆಯಲಿ ಅವರಿಗೆ ಒಳ್ಳೆಯದಾಗಲಿ ಎಂದು ಅವರಿಗೆ ಅಭಿನಂದನೆ ತಿಳಿಸಿದ್ದಾರೆ. ಜತೆಗೆ ರಾಷ್ಟ್ರೀಯ ನಾಯಕರಿಗೂ ಕೂಡಾ ಧನ್ಯವಾದ ತಿಳಿಸಿದ್ದಾರೆ.