This is the title of the web page
This is the title of the web page

Live Stream

November 2024
S M T W T F S
 12
3456789
10111213141516
17181920212223
24252627282930

| Latest Version 9.4.1 |

Education NewsHealth & FitnessLocal NewsNational NewsSports NewsState News

ವಿಜಯಪುರ ವಿನ್ನರ್, ಬಾಗಲಕೋಟೆ ರನ್ನರ್

ವಿಜಯಪುರ ವಿನ್ನರ್, ಬಾಗಲಕೋಟೆ ರನ್ನರ್

ಬಾಗಲಕೋಟೆ

ಜಿಲ್ಲೆಯಲ್ಲಿ ಎರಡು ದಿನಗಳ ಕಾಲ ನಡೆದ ರಾಜ್ಯ ಮಟ್ಟದ ಸೈಕ್ಲಿಂಗ್ ಚಾಂಪಿಯನ್‍ಶಿಪ್‍ನಲ್ಲಿ ವಿಜಯಪುರ ತಂಡ 35 ಅಂಕ ಪಡೆಯುವ ಮೂಲಕ ವಿನ್ನರ್ ಸ್ಥಾನ ಪಡೆದರೆ, ಬಾಗಲಕೋಟೆ ಜಿಲ್ಲಾ ತಂಡ 33 ಅಂಕ ಪಡೆಯುವ ಮೂಲಕ ರನ್ನರ್ ಸ್ಥಾನವನ್ನು ಪಡೆದುಕೊಂಡಿತು.

*ಸೈಕ್ಲಿಂಗ್‍ನಲ್ಲಿ ವಿಜೇತರಾದವರು*
—————————————-
ಪುರುಷರ ವಿಭಾಗ : 30 ಕಿ.ಮೀ (ಇಂಡಿಜುವಲ್) ನಲ್ಲಿ ಸೌರಭ ಸಿಂಗ್ (ಪ್ರಥಮ), ಸೋಮಶೇಖರ ಜಿ (ದ್ವಿತೀಯ), ರಾವುತ್ ಚೆಂಬರ್ (ತೃತೀಯ) ಸ್ಥಾನ ಪಡೆದುಕೊಂಡರೆ, 23 ವರ್ಷದೊಳಗಿನ ಪುರುಷ ವಿಭಾಗದ 30 ಕಿ.ಮೀ (ಟಯಮ್ ಟ್ರಯಲ್)ನಲ್ಲಿ ಪ್ರಥಮ ಪ್ರತಾಪ ಪಡಚಿ (ಪ್ರಥಮ), ಶ್ರೀಶೈಲ ವೀರಾಪೂರ (ದ್ವಿತೀಯ), ಅನೀಲ ಕಾಳಪ್ಪಗೋಳ (ತೃತೀಯ), 4 ಲ್ಯಾಪ್ಸ್ ಮಾಸ್ಟ ಸ್ಪಾರ್ಟನಲ್ಲಿ ಬಾಗಲಕೋಟೆ ಜಿಲ್ಲೆಯ ನಂದೆಪ್ಪ ಸವದಿ (ಪ್ರಥಮ), ಗದಗ ಜಿಲ್ಲೆಯ ಮಾಂತೇಶ ಮದರಖಂಡಿ (ದ್ವಿತೀಯ), ಧಾರವಾಡ ಜಿಲ್ಲೆಯ ಶ್ರೀನಿಧಿ ಉರಾಲ (ತೃತೀಯ) ಸ್ಥಾನ ಪಡೆದುಕೊಂಡಿದ್ದಾರೆ.

*ಬಾಲಕರ ವಿಭಾಗ :* 14 ವರ್ಷದೊಳಗಿನ ಬಾಲಕರ 10 ಕಿ.ಮೀ ಟಯಮ್ ಟ್ರಯಲ್‍ನಲ್ಲಿ ಕರೆಪ್ಪ ಹೆಗಡೆ (ಪ್ರಥಮ), ಸ್ಟ್ಯಾಲಿನ್ ಗೌಡರ (ದ್ವಿತೀಯ), ಹೊನ್ನಪ್ಪ ಧರ್ಮಪ್ಪ (ತೃತೀಯ), 16 ವರ್ಷದೊಳಗಿನ 10 ಕಿಮೀ ಟಯಮ್ ಟ್ರಯಲ್‍ನಲ್ಲಿ ಯಲ್ಲೇಶ ಹುಡೇದ (ಪ್ರಥಮ), ನಿತೇಶ ಪೂಜಾರಿ (ದ್ವಿತೀಯ), ತರುಣ ನಾಯಕ (ತೃತೀಯ), 18 ವರ್ಷದೊಳಗಿನ 20 ಕಿ.ಮೀ ಟಯಮ್ ಟ್ರಯಲ್‍ನಲ್ಲಿ ವಿಜಯಪುರ ಜಿಲ್ಲೆಯ ಸುಜಲ್ ಜಾದವ (ಪ್ರಥಮ), ರಾಹುಲ್ ರಾಠೋಡ (ದ್ವೀತೀಯ), ಚಂದರಗಿಯ ರಾಘವೇಂದ್ರ ವಂದಾಲ (ತೃತೀಯ), 16 ವರ್ಷದೊಳಗಿನ ಬಾಲಕರ 2ಲ್ಯಾಪ್ಸ್ ಮಾಸ್ಟ-ಸ್ಪಾರ್ಟದಲ್ಲಿ ವಿಜಯಪುರದ ಬೀರಪ್ಪ ನವಲಿ (ಪ್ರಥಮ), ಅರವಿಂದ ರಾಠೋಡ (ದ್ವಿತೀಯ), ಬೆಳಗಾವಿಯ ಮೋಹನ ದಳವಾಯಿ (ತೃತೀಯ), 23 ವರ್ಷದೊಳಗಿನ 4 ಲ್ಯಾಪ್ಸ್ ಮಾಸ್ಟ-ಸ್ಪಾರ್ಟದಲ್ಲಿ ಬಾಗಲಕೋಟೆ ಜಿಲ್ಲೆಯ ಮಧು ಕಾಡಾಪೂರ (ಪ್ರಥಮ), ಚಂದರಗಿಯ ಮನೋಜ ಬಾಟಿ (ದ್ವಿತೀಯ), ಬಾಗಲಕೋಟೆಯ ಮಲ್ಲಿಕಾರ್ಜುನ ಯಾದವಾಡ (ತೃತೀಯ), 18 ವರ್ಷದೊಳಗಿನ 3 ಲ್ಯಾಪ್ಸ್ ಮಾಸ್ಟ-ಸ್ಪಾರ್ಟದಲ್ಲಿ ಬಾಗಲಕೋಟೆಯ ವರುಣ ಶಿರೂರ (ಪ್ರಥಮ), ಮೈಸೂರಿನ ಧನಂಜಯ (ದ್ವಿತೀಯ), ವಿಜಯಪುರದ ರಮೇಶ ಮಲಗುಂದಿ (ತೃತೀಯ) ಸ್ಥಾನ ಪಡೆದುಕೊಂಡಿದ್ದಾರೆ.

*ಮಹಿಳಾ ವಿಭಾಗ :* 20 ಕಿ.ಮೀ ಟಯಮ್ ಟ್ರಯಲ್‍ನಲ್ಲಿ ಬಾಗಲಕೋಟೆಯ ಸಾವಿತ್ರಿ ಹೆಬ್ಬಾಳಟ್ಟಿ (ಪ್ರಥಮ), ಬೆಂಗಳೂರಿನ ಪ್ರೀಯಾ ಕೃಷ್ಣನ್ (ದ್ವಿತೀಯ), ಧಾರವಾಡಿನ ಸೌಮ್ಯ ಅಂತಾಪೂರ (ತೃತೀಯ), 2 ಲ್ಯಾಪ್ಸ್ ಮಾಸ್ಟ-ಸ್ಪಾರ್ಟದಲ್ಲಿ ಬೆಳಗಾವಿಯ ಗಂಗಾ ದಂಡಿನ (ಪ್ರಥಮ), ಬಾಗಲಕೋಟೆಯ ಸೌಮ್ಯ ಅಂತಾಪೂರ (ದ್ವಿತೀಯ), ಸಾವಿತ್ರಿ ಹೆಬ್ಬಾಳಟ್ಟಿ (ತೃತೀಯ) ಸ್ಥಾನ ಪಡೆದುಕೊಂಡಿದ್ದಾರೆ.

*ಬಾಲಕಿಯರ ವಿಭಾಗ*: 14 ವರ್ಷಗಳ 10 ಕಿ.ಮೀ ಟಯಮ್ ಟ್ರಯಲ್‍ನಲ್ಲಿ ವಿಜಯಪುರದ ದಿಪಿಕಾ ಪಡತರೆ (ಪ್ರಥಮ), ಬಾಗಲಕೋಟೆಯ ಗಾಯತ್ರಿ ಕಿತ್ತೂರ (ದ್ವಿತೀಯ), ವಿಜಯಪುರದ ಪಲ್ಲವಿ ಹಂಚಿನಾಳ (ತೃತೀಯ), 18 ವರ್ಷದೊಳಗಿನ 10 ಕಿ.ಮೀ ಟಯಮ್ ಟ್ರಯಲ್‍ನಲ್ಲಿ ಬಾಗಲಕೋಟೆಯ ನಂದಾ ಚಿಂಚಖಂಡಿ (ಪ್ರಥಮ), ವಿಜಯಪುರದ ಪಾಯಲಿ ಚವ್ಹಾಣ (ದ್ವಿತೀಯ), ಬಾಗಲಕೋಟೆಯ ನುಪಮಾ ಗಳೇದ (ತೃತೀಯ), 16 ವರ್ಷದೊಳಗಿನ 1 ಲ್ಯಾಪ್ ಮಾಸ್ಟ ಸ್ಪಾರ್ಟನಲ್ಲಿ ವಿಜಯಪುರದ ಕೋಕಿಲಾ ಚವ್ಹಾಣ (ಪ್ರಥಮ), ಛಾಯಾ ನಾಗಶೆಟ್ಟಿ (ದ್ವಿತೀಯ) ಬಾಗಲಕೋಟೆಯ ಸಾವಿತ್ರಿ ರೂಗಿ (ತೃತೀಯ), 18 ವರ್ಷದೊಳಗಿನ 2 ಲ್ಯಾಪ್ ಮಾಸ್ಟ ಸ್ಪಾರ್ಟನಲ್ಲಿ ವಿಜಯಪುರದ ಪಾಯಲ ಚವ್ಹಾಣ (ಪ್ರಥಮ), ಬಾಗಲಕೋಟೆಯ ನಂದಾ ಚಿಂಚಖಂಡಿ (ದ್ವಿತೀಯ), ಅನುಪಮಾ ಗುಳೇದ (ತೃತೀಯ) ಸ್ಥಾನ ಪಡೆದುಕೊಂಡಿದ್ದಾರೆ.

Nimma Suddi
";